
ವಾಷಿಂಗ್ಟನ್, ಫೆ,3- ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅವರ ಪತ್ನಿ, ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ದಿವಂಗತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳಲು ಒಪ್ಪಿಕೊಂಡಿದ್ದಾರೆ.
ತಿಂಗಳುಗಳ ಕಾಲ ನಡೆದ ಬಿಕ್ಕಟ್ಟಿನ ನಂತರ ಹೌಸ್ ಓವರ್ಸೈಟ್ ಸಮಿತಿಯ ಮುಂದೆ ಹಾಜರಾಗಲು ಈ ದಂಪತಿ ನಿರಾಕರಿಸಿತ್ತು, ಅಂತಿಮವಾಗಿ ದಂಪತಿಯನ್ನು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಗುರಿಪಡಿಸಬೇಕೆ ಎನ್ನುವ ಚರ್ಚೆ ನಡೆದ ನಂತರ ಸಾಕ್ಷ್ಯ ಹೇಳಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ
2019 ರಲ್ಲಿ ಜೈಲಿನಲ್ಲಿ ನಿಧನರಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಪರಿಚಿತರಾಗಿದ್ದರು, ಆದರೆ ಅವರ ಲೈಂಗಿಕ ಅಪರಾಧದ ಬಗ್ಗೆ ತಿಳಿದಿಲ್ಲ ಮತ್ತು ಎರಡು ದಶಕಗಳ ಹಿಂದೆ ಅವರು ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ
ಸಾಕ್ಷ್ಯಾಧಾರಗಳ ವಿಚಾರಣೆ ಯಾವಾಗ ನಡೆಯುತ್ತವೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ 1983 ರಲ್ಲಿ ಜೆರಾಲ್ಡ್ ಫೆÇರ್ಡ್ ಹಾಗೆ ಮಾಡಿದ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಕಾಂಗ್ರೆಸ್ ಸಮಿತಿಗೆ ಸಾಕ್ಷ್ಯ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ
ರಿಪಬ್ಲಿಕನ್ನರ ನೇತೃತ್ವದ ಹೌಸ್ ಓವರ್ಸೈಟ್ ಸಮಿತಿ ಕಳೆದ ತಿಂಗಳ ಕೊನೆಯಲ್ಲಿ ಹಲವಾರು ಡೆಮೋಕ್ರಾಟ್ಗಳ ಬೆಂಬಲದೊಂದಿಗೆ ಬಿಲ್ ಕ್ಲಿಂಟನ್ರನ್ನು ತಿರಸ್ಕಾರಕ್ಕೆ ಗುರಿಪಡಿಸುವ ಕ್ರಮವನ್ನು ಅನುಮೋದನೆ ನೀಡಿತ್ತು
ಬಿಲ್ ಕ್ಲಿಂಟನ್ ಅವರ ಸಲಹೆಗಾರ ಉಪ ಮುಖ್ಯಸ್ಥ ಏಂಜೆಲ್ ಉರೆನಾ ಅವರು ಬಿಲ್ ಕ್ಲಿಂಟನ್ ದಂಪತಿಗಳು ಸಮಿತಿಯ ಮುಂದೆ ಹಾಜರಾಗುತ್ತಾರೆ,ಅದು ಯಾವಾಗ ಎನ್ನುವುದನ್ನು ಖಚಿತವಾಗಬೇಕಾಗಿದೆ ಎಂದು ತಿಳಿಸಿದ್ದಾರೆ
ಮಾಜಿ ಅಧ್ಯಕ್ಷರು ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ಸಾಷ್ಯ ಹೇಳಲು ಒಪ್ಪಿಕೊಂಡಿದ್ದಾರೆ,ಎಲ್ಲರಿಗೂ ಅನ್ವಯಿಸುವ ಒಂದು ಪೂರ್ವನಿದರ್ಶನ ಸ್ಥಾಪಿಸಲು ಅವರು ಎದುರು ನೋಡುತ್ತಿದ್ದಾರೆ.”ಕ್ಲಿಂಟನ್ ದಂಪತಿಗಳು ಸಮಿತಿಗೆ ಪ್ರಮಾಣವಚನ ಹೇಳಿಕೆಗಳನ್ನು ನೀಡಲಿದ್ದಾರೆ ಎಂದಿದ್ದಾರೆ
ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶಿಸಿದಂತೆ, “ರಾಜಕೀಯ ಪ್ರತಿಸ್ಪರ್ಧಿಗಳನ್ನು ಮುಜುಗರಕ್ಕೀಡುಮಾಡಲು ಪ್ರಯತ್ನಿಸುವ ತಂತ್ರಕ್ಕಿಂತ ಹೆಚ್ಚೇನೂ ಅಲ್ಲ” ಎಂದು ಬಿಲ್ ಕ್ಲಿಂಟನ್ ದಂಪತಿ ಹೇಳಿದ್ದಾರೆ.


























