Home ಜಿಲ್ಲೆ ಚರಕುಂಟೆ  ದೇವಸ್ಥಾನದ ಅಭಿವೃದ್ಧಿಗೆ ಒಂದು ಲಕ್ಷ ರೂಪಾಯಿ ಧನಸಹಾಯ

ಚರಕುಂಟೆ  ದೇವಸ್ಥಾನದ ಅಭಿವೃದ್ಧಿಗೆ ಒಂದು ಲಕ್ಷ ರೂಪಾಯಿ ಧನಸಹಾಯ

(ಸಂಜೆವಾಣಿ ವಾರ್ತೆ)

ಬಳ್ಳಾರಿ. ಮೇ. 08:  ತಾಲೂಕಿನ ಚರಕುಂಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗುತ್ತಿರುವ ಶ್ರೀ ಎರಿತಾತ ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ  ಧರ್ಮಾಧಿಕಾರಿ ಡಾ. ಡಿ  ವೀರೇಂದ್ರ ಹೆಗ್ಗಡೆ ಯವರು ಒಂದು ಲಕ್ಷ  ರೂಪಾಯಿ ಹಣವನ್ನು ಸಹಾಯಧನವನ್ನಾಗಿ   ನೀಡಿದ್ದಾರೆ. ಸಂಸ್ಥೆಯಿಂದ ನೀಡಲಾದ  ಈ ಡಿ. ಡಿ  ಯನ್ನು ಬಳ್ಳಾರಿ ತಾಲೂಕಿನ ನಂಬರ್ 2 ಕಚೇರಿಯ ಯೋಜನಾಧಿಕಾರಿ ಸತೀಶ್ ಜಿ  ಅವರು ಶ್ರೀ ಎರಿತಾತ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಮತ್ತು ಕಾರ್ಯದರ್ಶಿ ಕೃಷ್ಣ ಅವರಿಗೆ ಊರಿನ ಗಣ್ಯರ ಮತ್ತು ಹಲವು ಜನ ಭಕ್ತರ ಸಮ್ಮುಖದಲ್ಲಿ ವಿತರಿಸಿದರು