
ಸಂಜೆವಾಣಿ ವಾರ್ತೆ
ಕೆ.ಆರ್.ನಗರ ಮೇ,10:- ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕ ನೋರ್ವನ ಮೇಲೆ ಮುಸ್ಲಿಂ ಯುವಕರು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಇತ್ತೀಚೆಗೆ ಪಟ್ಟಣದಲ್ಲಿ ಜರುಗಿದೆ.
ಪಟ್ಟಣದ ಮಧುವನಹಳ್ಳಿ ಬಡಾವಣೆಯ ತುಳಿಸಿದಾಸ್ ರವರ ಪುತ್ರ ಮನೋಜ್ ಆಲಿಯಾಸ್ ಮನು ಪ್ಲವರ್ ಡೆಕರೇಷನ್ ಕೆಲಸ ಮಾಡಿತ್ತಿದ್ದು ಮೇ,5 ರಂದು ಕೆಲಸ ಮುಗಿಸಿಕೊಂಡು ಮಧುವನಹಳ್ಳಿ ರಸ್ತೆಯಲ್ಲಿರುವ ಶಿವ ವೈನ್ಸ್ ನಲ್ಲಿ ರಾತ್ರಿ ವೇಳೆ ಮಧ್ಯ ಖರೀದಿಸಿ ಬರುವಾಗ ಅಲ್ಲೇ ಗುಂಪುಗೂಡಿದ್ದ ಮುಸ್ಲಿಂ ಬಡಾವಣೆಯ ನಿವಾಸಿಗಳಾದ ಮುದಾಸೀರ್, ಸೈಯದ್ ಸಹಬಾಜ್, ತಾಜ್ ಹಾಗೂ ಮತ್ತಿತರರು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರು ಎನ್ನಲಾಗಿದೆ. ಇದನ್ನು ಪ್ರಶ್ನಿಸಿದಕ್ಕೆ ಮಮೋಜ್ಗೆ ಅವ್ಯಾಚ ಶಬ್ಧಗಳಿಂದ ನಿಂದಿಸಿರುವುದಲ್ಲದೇ ಮೂವರು ಮನೋಜ್ ಮೇಲೆ ಹಲ್ಲೆ ಮಾಡಿರುವುದಲ್ಲದೇ ಮುದಾಸೀರ್ ಎಂಬುವವನು ಮನೋಜನಿಗೆ ಚಾಕುವಿನಿಂದ ಹೊಟ್ಟೆಗೆ ಮತ್ತು ಮುಖ ಚುಚ್ಚಿ ಹಲ್ಲೆ ಮಾಡಿ ಗಾಯಗೊಳಿಸಿರುತ್ತಾರೆ.
ಅಲ್ಲಿಯೇ ಸ್ಥಳದಲ್ಲಿದ್ದ ಮನೋಜ್ ರವರ ಸಂಬಂದಿಕ ಯುವಕ ಮತ್ತು ಇತರರು ಈತನ ನೆರವಿಗೆ ಬಂದಿದ್ದು ಗಾಯಗೊಂಡು ಕೆಳಗೆ ಬಿದ್ದಿದ್ದ ಮನೋಜ್ನನ್ನು ತಕ್ಷಣ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೋಯ್ದಿದ್ದಾರೆ.
ಆತನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಸ್ಕ್ಯಾನಿಂಗ್ ಇನ್ನಿತರ ಪರೀಕ್ಷೆಗಳನ್ನು ಮಾಡಿಸಿ ಚಿಕಿತ್ಸೆ ಪಡೆಸಿಕೊಂಡು ಈಗ ಪ್ರಸ್ತುತ ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಬಗ್ಗೆ ಮೇ.8 ರಂದು ದೂರು ದಾಖಲಿಸಿಕೊಂಡಿರುವ ಪಟ್ಟಣದ ಪೆÇಲೀಸರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಗೊಂಡಿರುವ ಮನೋಜ್ ಹೇಳಿಕೆ ಪಡೆದು ಆರೋಗ್ಯ ವಿಚಾರಿಸಿದ್ದಾರೆ.
ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ಪೆÇೀಲೀಸರು ಬಲೆ ಬೀಸಿದ್ದಾರೆ. ಹಾಗೂ ವಿಷಯ ತಿಳಿದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ದಲಿತ ಯುವಕನ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.
























