
ಸಂಜೆವಾಣಿ ನ್ಯೂಸ್
ಮೈಸೂರು:ಮಾ.1:- ಕಾನೂನು ಪದವೀಧರರು ಶಿಷ್ಯವೇತನವನ್ನು ತಮ್ಮ ಶಿಕ್ಷಣಕ್ಕೆ ಸದ್ವಿನಿಯೋಗ ಮಾಡಿಕೊಳ್ಳುವಂತೆ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಸಲಹೆ ನೀಡಿದರು.
ನಾಲ್ಕು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಾನೂನು ಪದವೀಧರರ ಶಿಷ್ಯವೇತನವನ್ನು ಬಿಡುಗಡೆ ಮಾಡಿಸಿದ್ದರಿಂದ ಮೈಸೂರು ವಕೀಲ ಪದಾಧಿಕಾರಿಗಳಿಂದ ಜಲದರ್ಶಿನಿ ಅತಿಥಿಗೃಹದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜ ಕಲ್ಯಾಣಾ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ನಮ್ಮ ಮನವಿಗೆ ಒಗೊಟ್ಟು ಸಾಮಾಜಿಕ ಕಳಕಳಿಯಿಂದ 1 ಕೋಟಿ 30 ಲಕ್ಷ ರೂ.ಗಳನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ ಪದವೀಧರರ ಶಿಕ್ಷಣಕ್ಕೆ ನೆರವಾಗಿದ್ದಾರೆ ಎಂದು ಹೇಳಿದರು.
ಪರಿಶಿಷ್ಟ ಜಾತಿಯ ಪರಿಶಿಷ್ಟ ಪಂಡಗಳ ಕಾನೂನು ಪದವೀಧರರಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಜಿತ ಕಾರ್ಯಕ್ರಮದಡಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ತರಬೇತಿ ಅವಧಿಯನ್ನು ನಾಲ್ಕು ವರ್ಷಗಳಿಂದ 2 ವರ್ಷಗಳಿಗೆ ಕಡಿತಗೊಳಿಸಿ ಮಾಸಿಕ ತರಬೇತಿ ಭತ್ಯೆಯನ್ನು ಮಾಹೆಯಾನ ರೂ. 5 ಸಾವಿರದಿಂದ 10 ಸಾವಿರ ರೂ.ಗಳ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಸಿಎ ನಿವೇಶನಕ್ಕೆ ಮನವಿ: ಎಸ್ಸಿ, ಎಸ್ಟಿ ವಕೀಲರ ಸಂಘಕ್ಕೆ ಮೈಸೂರು ನಗರದಲ್ಲಿ ನಿವೇಶನ ಕೊಡಿಸಬೇಕೆಂದು ವಕೀಲರು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತು ಎನ್.ಭಾಸ್ಕರ್ ಅವರಿಗೆ ಮನವಿ ಮಾಡಿದರು. ಈ ಸಂಬಂಧ ಮುಡಾದಲ್ಲಿ ಸಿಎ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಅದನ್ನಾದರೂ ಕೊಡಿಸುವಂತೆ ಕೋರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್ ಮತ್ತು ಎನ್.ಭಾಸ್ಕರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಗಮನಕ್ಕೆ ತಂದು ನಿವೇಶನ ಕೊಡಿಸುವ ಭರವಸೆ ನೀಡಿದರು.
ಎಡಿಜಿಪಿ ತಿಮ್ಮಯ್ಯ, ಮನೋನ್ಮಣಿ, ವಕೀಲರಾದ ಗಂಗಾಧರ್ ಕೆ, ಮಂಜುಳಾ, ಜಯಶಂಕರ್, ಪರಂಜ್ಯೋತಿ, ಸುರೇಶ್ ಮೌರ್ಯ, ವಕೀಲರ ಸಂಘದ ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಚರಣ್ ರಾಜ್, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಜಿ.ಮಹದೇವ್, ಗುಂಡ್ಲುಪೇಟೆ ಎಪಿಎಂಸಿ ಸದಸ್ಯರಾದ ಎಸ್.ಶಿವರಾಜಪ್ಪ, ಮಡಿವಾಳ ಸಮಾಜದ ಸತ್ಯನಾರಾಯಣ ನೂರಾರು ವಕೀಲರು ಹಾಜರಿದ್ದರು.
























