Home ಜಿಲ್ಲೆ ಕಂಬಳಿ ಬಜಾರ್ ಮನೆಯಲ್ಲಿ ವೇಶ್ಯಾವಾಟಿಕೆ ನಾಲ್ವರ ಬಂಧನ

ಕಂಬಳಿ ಬಜಾರ್ ಮನೆಯಲ್ಲಿ ವೇಶ್ಯಾವಾಟಿಕೆ ನಾಲ್ವರ ಬಂಧನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಜು,21- ನಗರದ ಕಂಬಳಿ ಬಜಾರ್ ನ ಮನೆಯೊಂದರಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ನಡೆಯುತ್ತಿದ್ದುದನ್ನು ಎಪಿಎಂಸಿ ಪೊಲೀಸರು ಪತ್ತೆಹಚ್ಚಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಂಬಳಿ ಬಜಾರ್ ವಾಸಿ, ನಗರದ , ರೊದ್ದಂ ಜ್ಯೂವೆರ್ಸ್ಕ ಅಂಗಡಿಯಲ್ಲಿ ವಾಚ್ ಮ್ಯಾನ್ ಆಗಿ ಕೆಲಸಾಡುತ್ತಿದ್ದ ಕೆ. ಬ್ರಹ್ಮಯ್ಯಾಚಾರಿ, (52), ಈತನ ಪತ್ನಿ

ವಿಶಾಲಾಕ್ಷಿ ಅಲಿಯಾಸ್ ಶಕುಂತಲ, ಬಿಸಿಲಹಳ್ಳಿಯ ವೆಂಕಟೇಶ್, (47), ಆಂದ್ರಪ್ರದೇಶದ ಪೆಟ್ಟೂರು ಗ್ರಾಮ್ ಪಿ. ನಾಗರಾಜ, (34) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಇಬ್ಬರು ಗ್ರಾಹಕರನ್ನು ವಿಚಾರಣೆ ಮಾಡಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.