
ಸಂಜೆವಾಣಿ ನ್ಯೂಸ್
ಮೈಸೂರು.ಜೂ.14:- ಔಷಧ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದ್ದು ಎಂದು ಸಂಸದ ಸಿ.ಎನ್. ಮಂಜುನಾಥ್ ಹೇಳಿದರು.
ನಗರದ ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಔಷಧಗಳು ಮಾರಾಟವಾಗುತ್ತಿದೆ. ಜೆನರಿಕ್ ಔಷಧಗಳ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ 3ನೇ ಸ್ಥಾನವನ್ನು ಹೊಂದಿದ್ದು, ಮೌಲ್ಯದಲ್ಲಿ 11ನೇ ಸ್ಥಾನವನ್ನು ಹೊಂದಿದೆ. ಪ್ಯಾರಾಸಿಟಮಲ್ ಮಾತ್ರೆಯನ್ನು ಇಡೀ ಜಗತ್ತಿಗೆ ಭಾರತ ಪೂರೈಕೆ ಮಾಡುತ್ತಿದೆ. ವಿಶ್ವಕ್ಕೆ ಶೇ.60 ರಷ್ಟು ವಿವಿಧ ಲಸಿಕೆಗಳನ್ನು ಭಾರತವೇ ಪೂರೈಕೆ ಮಾಡುತ್ತಿದೆ ಎಂದರು.
ಅಲೋಪಥಿ, ನ್ಯಾಚೊರೋಪಥಿ ಅಥವಾ ಹೋಮಿಯೋಪಥಿಗಿಂತ `ಸಿಂಪಥಿ’ ಅತ್ಯಂತ ಮುಖ್ಯ. ದಯೆ ವ್ಯಕ್ತಿಯನ್ನು ಅಂತ್ಯಂತ ಸುಂದರಗೊಳಿಸುತ್ತದೆ. ಹಾಗಾಗಿ ರೋಗಿಗಳ ಬಗ್ಗೆ ನೀವು ಕರುಣೆಯನ್ನು ಹೊಂದಬೇಕು. ನೀವು ಗಳಿಸಿದ ಪದವಿ, ರ?ಯಾಂಕ್ಗಳು ಮುಖ್ಯವಲ್ಲ, ನಿಮ್ಮ ಪರಿಶ್ರಮ, ಬದ್ಧತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರ ಮೊಗದಲ್ಲಿ ನಗು ಅರಳುವಂತೆ ಮಾಡಿದರೆ ಅದುವೇ ನಿಜವಾದ ಯಶಸ್ಸು ಎಂದು ಅಭಿಪ್ರಾಯಪಟ್ಟರು.
ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ಎರಡು, ಮೂರು ದಶಕಗಳ ಅವಧಿಯಲ್ಲಿ ಹಲವು ಮಹತ್ವದ ಬದಲಾವಣೆಗಳು ಸಂಭವಿಸಿವೆ. ವೈದ್ಯಕೀಯ ಕ್ಷೇತ್ರಕ್ಕೆ ಸುಂದರವಾದ ಮುಖಗಳ ಅವಶ್ಯಕತೆ ಇಲ್ಲ, ಸುಂದರವಾದ ಹೃದಯದ ಅವಶ್ಯಕತೆ ಇದೆ. ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುವ ಅವಶ್ಯಕತೆ ಇದೆ ಎಂದು ಹೇಳಿದರು.
ದೇಶ ಸ್ವಾತಂತ್ರೃ ಪಡೆದ ಸಂದರ್ಭ ಜನರ ಸರಾಸರಿ ಆಯಸ್ಸು 37 ವರ್ಷ ಮಾತ್ರ ಇತ್ತು. ನಂತರ ದೇಶದಲ್ಲಿ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಯಿಂದ 74 ವರ್ಷಕ್ಕೆ ಏರಿಕೆಯಾಗಿದೆ. ದೇಶದ ವೈದ್ಯಕೀಯ ಕ್ಷೇತ್ರ ಎಷ್ಟೊಂದು ಬೆಳವಣಿಗೆ ಹೊಂದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದೇಶದಲ್ಲಿ 14 ಲಕ್ಷ ಅಲೋಪಥಿ ವೈದ್ಯರು, 7.5 ಲಕ್ಷ ಆಯುಷ್ ವೈದ್ಯರು, 37 ಲಕ್ಷ ನರ್ಸ್ಗಳು ಇದ್ದಾರೆ.
ಕಳೆದ 12 ವರ್ಷಗಳಿಂದ ನವೋದ್ಯಮಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡಲಾಗುತ್ತಿದೆ. 12 ವರ್ಷಗಳ ಹಿಂದೆ ದೇಶದಲ್ಲಿ 250 ನವೋದ್ಯ ಮಗಳು ಮಾತ್ರ ಇದ್ದವು. ಆದರೆ, ಪ್ರಸ್ತುತ 2.5 ಲಕ್ಷ ನವೋದ್ಯಮಗಳು ಇವೆ. ನವೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಅಮೆರಿಕದಲ್ಲಿ ಭಾರತದ ಮೊಬೈಲ್ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಎಂದು ಹೇಳಿದರು.
ಚಿನ್ನದ ಪದಕ ವಿಜೇತರು: ನರ್ಸಿಂಗ್ ವಿಭಾಗದಲ್ಲಿ ಸಂದ್ರಸನ್ನಿ, ಎಸ್.ಮಾನಸ, ಎಲ್ ಕುಸುಮಾ, ಹೆಲ್ತ್ ಸೈನ್ಸ್ ವಿಭಾಗದಲ್ಲಿ ಹೈಬಾ ಮಹಮ್ಮದ್, ಅಫ್ರ ಅಶ್ರಫ್, ಎಸ್.ಅಂಜನಾ, ಇಶಾ ಇಬ್ರಾಹಿಂ, ಅಲ್ಫಿನಾ ಅಬ್ದುಲ್ಲಾ, ಮಹಿನ್ ಫಾತಿಮಾ, ಸಾನಿಯಾ ಮ್ಯಾಥ್ಯೂ, ಶಿವಾನಿಚಂದ್ರ ,ಝೈನಬ್ ಸೇಠ್, ಎಂ ಎಸ್. ಪ್ರಿಯಾಂಕ, ಫಾರ್ಮಸಿ ವಿಭಾಗದಲ್ಲಿ ಅಮ್ರೀನಾ ಖಾಟೂನ್, ಎಂ.ಎಸ್. ಹರ್ಷಿತಾ, ಎಂ ಹೇಮಲತಾ, ಅಲೈಡ್ಸ್ ಹೆಲ್ತ್ ಸೈನ್ಸ್ ವಿಭಾಗದಲ್ಲಿ ಪಿ.ವಿ ಆದಿತ್ಯ, ಹೈಮನ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್. ರಂಗಪ್ಪ, ಕಾವೇರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ನ ಸಂಸ್ಥಾಪಕ ಡಾ.ಜಿ.ಆರ್.ಚಂದ್ರಶೇಖರ್, ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರಶೇಖರ್, ಡೀನ್ ಪೆÇ್ರ.ಎಸ್. ಶ್ರೀಕಂಠಸ್ವಾಮಿ ಹಾಗೂ ಇತರರು ಇದ್ದರು.




























