Home ಜಿಲ್ಲೆ ಮೈಸೂರು ಉದ್ಘಾಟನೆಯಾಗದೆ ಪಾಳು ಕೊಂಪೆಯಾದ ಅರಸು ಭವನ: ಸಾರ್ವಜನಿಕರ ಬೇಸರ

ಉದ್ಘಾಟನೆಯಾಗದೆ ಪಾಳು ಕೊಂಪೆಯಾದ ಅರಸು ಭವನ: ಸಾರ್ವಜನಿಕರ ಬೇಸರ

ಸಂಜೆವಾಣಿ ವಾರ್ತೆ
ಹುಣಸೂರು, ಫೆ.02:-
ಜನಪ್ರತಿನಿಧಿಗಳ ರಾಜಕೀಯ ದುರುದ್ದೇಶವೋ ಅಥವಾ ನಿರ್ಲಕ್ಷತೆಯೋ, ಅರಸು ಭವನ ಕಾಮಗಾರಿ ಮಾತ್ರ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಬೇಸರ ವ್ಯಕ್ತಪಡಿಸಿವೆ.

ಈ ಬಗ್ಗೆ ಸತ್ಯ ಎಂ.ಎ. ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ ಹುಣಸೂರು ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುರವರ ಕರ್ಮಭೂಮಿಯಾಗಿದ್ದು, ಅರಸು ಹೆಸರಿನಲ್ಲಿ 9.5 ಕೋಟಿ ವೆಚ್ಚದಲ್ಲಿ ಅರಸು ಕಲಾಭವನ 2015ರಲ್ಲೇ ನಿರ್ಮಾಣಗೊಂಡಿದ್ದು, ಇದರ ಕಾಮಗಾರಿಯನ್ನು ಮೈಸೂರಿನ ನಿರ್ಮಿತಿ ಕೇಂದ್ರ ವಹಿಸಿಕೊಂಡಿದ್ದು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕಳೆದ ಹತ್ತು ವರ್ಷಗಳಿಂದಲೂ ಪಾಳು ಬಿದ್ದಿದೆ.
ಸದರಿ ಭವನಕ್ಕೆ ಬೆಲೆಬಾಳುವ ಕಿಟಕಿ ಗಾಜುಗಳನ್ನು ಅಳವಡಿಸಿದ್ದು ಕಿಡಿಗೇಡಿಗಳು ಈ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಇದನ್ನು ಮೈಸೂರಿನ ನಿರ್ಮಿತಿ ಕೇಂದ್ರ ಮತ್ತೆ ಅಳವಡಿಸಿದ್ದು ಸರ್ಕಾರದ ಹಣ ವ್ಯರ್ಥ ಪೆÇೀಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅರಸು ಭವನ ಪೂರ್ಣಗೊಳಿಸಲು ಅನುದಾನ ತರುವಲ್ಲಿ ಹಾಲಿ ಹಾಗೂ ಮಾಜಿ ಶಾಸಕರಿಬ್ಬರೂ ವಿಫಲರಾಗಿದ್ದಾರೆ. ತಮ್ಮ ಭಾಷಣಗಳಲ್ಲಿ ದೇವರಾಜ ಅರಸುರವರ ಬಗ್ಗೆ ಉದ್ದುದ್ದ ಭಾಷಣ ಮಾಡುವ ಜನಪ್ರತಿನಿಧಿಗಳು ರಾಜ್ಯ ಕಂಡ ಧೀಮಂತ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ, ಭೂ ಸುಧಾರಣೆಯನ್ನು ಜಾರಿಗೆ ತಂದ ಡಿ ದೇವರಾಜ ಅರಸುರವರ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕಲಾಭವನದ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದು ಅರಸುರವರ ಹೆಸರಿಗೆ ಮಾಡಿದ ಅಪಮಾನವಾಗಿರುತ್ತದೆ.

ಫೌಂಡೇಶನ್ನ ವತಿಯಿಂದ ಕಳೆದ ಹತ್ತು ವರ್ಷಗಳಿಂದಲೂ ಅನುದಾನ ಬಿಡುಗಡೆ Shತಿe ಅರಸು ಕಲಾಭವನವನ್ನು ಉದ್ಘಾಟಿಸಬೇಕೆಂದು ಶಾಸಕರು ಸಂಸದರು ಸಚಿವರಾದಿಯಾಗಿ ಎಲ್ಲರಿಗೂ ಮನವಿ ಪತ್ರ ಸಲ್ಲಿಸುತ್ತಲೇ ಬರುತ್ತಿದೆವೆ. ಆದರೆ ಇದುವರೆಗೂ ಸ್ಪಂದನೆ ದೊರಕಿರುವುದಿಲ್ಲ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು ಅರಸುರವರ ಹುಟ್ಟೂರಿನಲ್ಲಿ ನಿರ್ಮಾಣಗೊಂಡಿರುವ ಅರಸು ಕಲಾಭವನ ಪಾಳು ಬೀಳುತ್ತಿರುವುದು ಹುಣಸೂರು ನಾಗರಿಕರು ತಲೆತಗ್ಗಿಸುವಂತಹ ವಿಚಾರವಾಗಿದೆ.

ಈ ಕಲಾಭವನವು ಅರಸು ಕುಟುಂಬಕ್ಕೂ ಸಹ ಒಂದು ಗೌರವದ ವಿಷಯವಾಗಿದ್ದು ತಾಲೂಕು ಆಡಳಿತ ಜಿಲ್ಲಾ ಆಡಳಿತ, ಆಡಳಿತಾರೂಢ ಪಕ್ಷ, ವಿರೋಧ ಪಕ್ಷಗಳು, ಲೋಕಸಭಾ ಸದಸ್ಯರುಗಳು ಕಲಾಭವನದ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ನಿರ್ಲಕ್ಷತೆ ವಹಿಸಿ ಅಗೌರವವನ್ನು ತೋರಿಸುತ್ತಿದ್ದಾರೆ. ಒಂದೆಡೆ ಅರಸುರರ ಹುಟ್ಟೂರನ್ನು ಸಹ ಅಭಿವೃದ್ಧಿಪಡಿಸದೆ ಮತ್ತೊಂದೆಡೆ ನಗರದಲ್ಲಿ ನಿರ್ಮಾಣಗೊಂಡಿರುವ ಅರಸು ಭವನವು ಪಾಳು ಬೀಳುತ್ತಿರುವುದನ್ನು ಅರಸು ಕುಟುಂಬ ಅತ್ಯಂತ ನೋವಿನಿಂದ ನೋಡುತ್ತಿದೆ.

ಮಾನ್ಯ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯಲ್ಲಿರುವ ಅರಸು ಕಲಾಭವನಕ್ಕೆ ಈ ಬಾರಿ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಿ ಅತಿ ಶೀಘ್ರವಾಗಿ ಅರಸು ಕಲಾಭವನವನ್ನು ಉದ್ಘಾಟಿಸಬೇಕೆಂದು ಸಮಸ್ತ ಹುಣಸೂರು ನಾಗರಿಕರ ಪರವಾಗಿ ಸತ್ಯಪ್ಪ ಕೋರಿದ್ದಾರೆ.