ಟೆಲ್ ಅವೀವಾ, ಜೂ.15- ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇರಾನ್ ಮೇಲೆ ಇಸ್ರೇಲ್ ಹೊಸದಾಗಿ ನಡೆಸಿದ ದಾಳಿಯಲ್ಲಿ 60ಕ್ಕೂ ಅಧಿಕ ಮಂದಿ ಹತ್ಯೆ ಮಾಡಿದೆ. ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಇರಾನ್ನ ಅತಿದೊಡ್ಡ ಅನಿಲ ಕ್ಷೇತ್ರ ಮತ್ತು ಟೆಹ್ರಾನ್ನಲ್ಲಿರುವ ವಸತಿ ಗೋಪುರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ 60ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಇದಕ್ಕೆ ಪ್ರತಿಯಾಗಿ ಇರಾನ್ 200 ಕ್ಷಿಪಣಿ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಅಪಾಯಕ್ಕೂ ದೂಡಿದೆ, ಎರಡೂ ರಾಷ್ಟ್ರಗಳು ರಾತ್ರಿಯಿಡೀ ಹೊಸ ದಾಳಿ ನಡೆಸಿದ್ದು ಪಶ್ಚಿಮ ಏಷ್ಯಾದಲ್ಲಿ ಪ್ರಾದೇಶಿಕ ಸಂಘರ್ಷದ ಭಯದ ವಾತಾರರಣಕ್ಕೆ ಕಾರಣವಾಗಿದೆ.
ಆಪರೇಷನ್ ರೈಸಿಂಗ್ ಲಯನ್ ಬ್ಯಾನರ್ ಅಡಿಯಲ್ಲಿ ಇಸ್ರೇಲ್ನ ನಡೆಸುತ್ತಿರುವ ದಾಳಿಯಲ್ಲಿ ಇರಾನ್ನ ಪ್ರಮುಖ ಆರ್ಥಿಕ ಜೀವನಾಡಿಯಾದ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರದ ಮೇಲೆ ವೈಮಾನಿಕ ದಾಳಿ ನಡೆಸಿದೆ, ಈ ದಾಳಿಯಿಂದ ಇರಾನ್ ಬೆಚ್ಚಿ ಬಿದ್ದಿದೆ.
ಇರಾನ್ ಮೇಲೆ ನಡೆಸಿದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದ್ದು ಇಸ್ರೇಲ್ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 29 ಮಕ್ಕಳು ಸೇರಿದಂತೆ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಇಸ್ರೇಲ್ನ ಮನೆಯ ಬಳಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಇಸ್ರೇಲ್ ಮೇಲೆ ಹೊಸ ಕ್ಷಿಪಣಿಗಳ ದಾಳಿ ನಡೆಸಿದೆ, ಇಸ್ರೇಲ್ ತುರ್ತು ಅಧಿಕಾರಿಗಳು ಹೇಳುವಂತೆ ಗಲಿಲೀ ಪ್ರದೇಶದ ಅಪಾಟ್ರ್ಮೆಂಟ್ ಕಟ್ಟಡದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ
ಇರಾನ್ನ್ ಮೇಲೆ ಇಸ್ರೇಲ್ ಹೊಸದಾಗಿ ನಡೆಸಿದ ದಾಳಿಯ ಮೊದಲ ಎರಡು ದಿನಗಳಲ್ಲಿ ಒಟ್ಟಾರೆಯಾಗಿ 78 ಸಾವುಗಳು ವರದಿಯಾಗಿವೆ. ಹಲವು ಕಟ್ಟಡಗಳು ನೆಲಸಮಗೊಂಡಿವೆ, ಇರಾನ್ ನಡೆಸಿದ ಪ್ರತೀಕಾರದ ದಾಳಿಯಲ್ಲಿ ಇರಾನ್ 150ಕ್ಕೂ ಅಧಿಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪರಮಾಣು ಸೌಲಭ್ಯಗಳು, ಮಿಲಿಟರಿ ಮೂಲಸೌಕರ್ಯ ಮತ್ತು ಪ್ರಮುಖ ನಾಯಕತ್ವದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಇರಾನ್ ಮೇಲೆ ದೊಡ್ಡ ಪ್ರಮಾಣದ ವೈಮಾನಿಕ ದಾಳಿಗೆ ಆದೇಶಿಸಿದ್ದಾರೆ.
ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ 150 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿಗಳು ನಡೆದಿದ್ದು, ಹಲವಾರು ಉನ್ನತ ಮಿಲಿಟರಿ ಕಮಾಂಡರ್ಗಳು ಮತ್ತು ಒಂಬತ್ತು ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.