
ಸಂಜೆವಾಣಿ ವಾರ್ತೆ
ಹುಣಸೂರು,ನ.03-ರಾಗಿ ತೆನೆ ಬಿಡಿಸುವ ಜಾನ್ ಡೀರ್ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೆ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಹನಗೂಡು ಹೋಬಳಿ ಕಿರಂಗೂರು ಗೇಟ್ ಬಳಿ ನಿನ್ನೆ ಸಂಭವಿಸಿದೆ.
ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಡಿಕ್ಕಿ ರಭಸಕ್ಕೆ ಮಾಸ್ತಿಗುಡಿ ಗ್ರಾಮದ ಶಿವಪ್ಪರವರ ಪುತ್ರ ಪ್ರತಾಪ್ 24 ವರ್ಷ ಹಾಗೂ ಭೀಮನಕಟ್ಟೆ ಗ್ರಾಮದ ಪುನೀತ್ 25 ವರ್ಷ ಇಬ್ಬರು ಸ್ಥಳದಲ್ಲೆ ಜೀವ ಕಳೆದುಕೊಂಡಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ಅಡಿಷನಲ್ ಎಸ್.ಪಿ ಮಲ್ಲಿಕ್ ಹಾಗೂ ಗ್ರಾಮಾಂತರ ಪೆÇಲೀಸರ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


























