Home ಜಿಲ್ಲೆ `ಹೊಸ ಕಾರ್ಮಿಕ ಸಂಹಿತೆ ಜಾಗೃತಿ ಕಾರ್ಯಾಗಾರ

`ಹೊಸ ಕಾರ್ಮಿಕ ಸಂಹಿತೆ ಜಾಗೃತಿ ಕಾರ್ಯಾಗಾರ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಜೂ. 20:  ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಮಿತ್ರಾ ಟೆಕ್ನಾಲಜೀಸ್  ಜಂಟಿಯಾಗಿ `ಹೊಸ ಕಾರ್ಮಿಕ ಸಂಹಿತೆ-2025’ರ ಜಾಗೃತಿ ಕಾರ್ಯಾಗಾರವು ಸಂಸ್ಥೆಯ ಸಭಾಂಗಣದಲ್ಲಿ ಇಂದು ನಡೆಯಿತು.

ಇಎಸ್ಐಸಿನ ನಿವೃತ್ತ ಅಧಿಕಾರಿ ಶೇಖ್ ಹನೀಫ್, ಇಎಸ್ಐಸಿ ಮತ್ತು ಇಪಿಎಫ್ಒಗಳ ಹೊಸ ನಿಯಮಗಳು ಮತ್ತು ಉದ್ಯೋಗಿಗಳ ಸಾಮಾಜಿಕ ಭದ್ರತೆ, ಕಾನೂನುಬದ್ಧ ಸೌಲಭ್ಯಗಳು ಹಾಗೂ ವೇತನ ಪಾವತಿಯ ದಾಖಲೆಗಳ ನಿರ್ವಹಣಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷ ಅವ್ವಾರ್ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸ ಕಾರ್ಮಿಕ ಸಂಹಿತೆ-2025ರ ಕುರಿತು ಕೈಗಾರಿಕಾ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಇರುವ ಮಾನವ ಸಂಪನ್ಮೂಲ ವಿಭಾಗದ ಪ್ರತಿಯೊಬ್ಬರೂ ತಿಳಿದುಕೊಂಡು, ಅರ್ಥ ಮಾಡಿಕೊಳ್ಳಬೇಕು. ಈ ಮೂಲಕ ಕೆಲಸಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮುಂಜಾಗ್ರತೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆಂದರು.

ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು  ವಂದನಾರ್ಪಣೆ ಸಲ್ಲಿಸಿದರು.

 ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಉಪಾಧ್ಯಕ್ಷ ಸೊಂತಾ ಗಿರಿಧರ್, ಜಂಟಿ ಕಾರ್ಯದರ್ಶಿ, ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಖಜಾಂಚಿಗಳಾದ ಸಿ.ಎಸ್. ಸತ್ಯನಾರಾಯಣ, ಈವೆಂಟ್ಸ್ ಕಮಿಟಿ ಚೇರ್ಮನ್ ನೇಕಾರ್ ನಾಗರಾಜ್, ಪತ್ರಿಕಾ ಹಾಗೂ ಮಾಧ್ಯಮ ಕಮಿಟಿ ಚೇರ್ಮನ್ ಟಿ. ಶ್ರೀನಿವಾಸರಾವ್, ಮ್ಯಾಗ್ಜಿನ್ ಕಮಿಟಿ ಚೇರ್ಮನ್ ಕೌಡಕಿ ಹನುಮೇಶ್, ಬುಸ್ಮಾದ ಮರಿಸ್ವಾಮಿರೆಡ್ಡಿ, ಖಾಸಗಿ ಶಾಲೆಗಳ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು, ವಿವಿಧ ಕೈಗಾರಿಗಳು – ಸಂಘ ; ಸಂಸ್ಥೆಗಳ ಮುಖ್ಯಸ್ಥರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.