Home ಜಿಲ್ಲೆ ಮಂಗಳೂರು ಹನುಮಗಿರಿ ಬ್ರಹ್ಮಕಲಶೋತ್ಸವ ಹಿನ್ನಲೆ; ಶ್ರೀರಾಮ ಹನುಮ ‘ರಾಮರಥ’ಕ್ಕೆ ಅದ್ದೂರಿ ಸ್ವಾಗತ

ಹನುಮಗಿರಿ ಬ್ರಹ್ಮಕಲಶೋತ್ಸವ ಹಿನ್ನಲೆ; ಶ್ರೀರಾಮ ಹನುಮ ‘ರಾಮರಥ’ಕ್ಕೆ ಅದ್ದೂರಿ ಸ್ವಾಗತ

ಪುತ್ತೂರು: ಹನುಮಗಿರಿ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಏ.೯ರಿಂದ ೧೨ರ ತನಕ ನಡೆಯಲಿದ್ದು, ಇದರ ಅಂಗವಾಗಿ ಅಯೋಧ್ಯೆ ಯಿಂದ ಶ್ರೀರಾಮ ಜ್ಯೋತಿ, ಮೂಲ ಮೃತ್ತಿಕೆ, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಿಂದ ಗಂಗಾಜಲ. ಅಂಜನಾದ್ರಿಯಿಂದ ಹನುಮ ಜ್ಯೋತಿ, ಮೃತ್ತಿಕೆ ಹಾಗು ಪಂಪಾಸರೋವರದ ಪವಿತ್ರ ಜಲ ಸಂಗ್ರಹಿಸಿಕೊಂಡು ಹೊರಟ ಶ್ರೀರಾಮಹನುಮ ರಾಮರಥವು ಏ.೩ರಂದು ಪುತ್ತೂರು ಪುರ ಪ್ರವೇಶ ಮಾಡಿದ ಸಂದರ್ಭ ಭವ್ಯ ಸ್ವಾಗತ ನೀಡಲಾಯಿತು.
ಪುತ್ತೂರಿನ ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಟಿ.ರಂಗನಾಥ ರಾವ್ ಅವರು ಆರತಿ ಬೆಳಗಿಸಿದರು. ಬಳಿಕ ’ಸಹಕಾರ ರತ್ನ’ ಕೆ.ಸೀತಾರಾಮ ರೈ ಸವಣೂರು ಅವರು ಭಗವಾಧ್ವಜ ಹಸ್ತಾಂತರದ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮತ್ತು ಕೋಟಿ ಶ್ರೀರಾಮ ತಾರಕ ಜಪ ಯಜ್ಞದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಈ ಸಂದರ್ಭ ಸೀತಾರಾಮ ರೈ ಸವಣೂರು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನ ಪ್ರಧಾನ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಮಾತನಾಡಿದರು. ಮೆರವಣಿಗೆಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಭಗವಾಧ್ವಜ ಹಿಡಿದ ಸುಮಂಗಲೆಯರು, ಮಕ್ಕಳು, ಚೆಂಡೆ ವಾದನ, ವಾದ್ಯಗೋಷ,ವಿವಿಧ ಭಜನಾ ಮಂಡಳಿಗಳಿಂದ ಕುಣಿತ ಭಜನೆ ವಿಶೇಷ ಆಕರ್ಷಣೆಯಾಗಿತ್ತು.
ಬೊಳುವಾರಿನಿಂದ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಮಹಾಲಿಂಗೇಶ್ವರ ದೇವಳದಲ್ಲಿ ಸಮಾವೇಶಗೊಂಡು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ ಬೇಡೇಕರ್ ಮತ್ತು ಮಾಜಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರಿಗೆ ಜ್ಯೋತಿ ಹಸ್ತಾಂತರ ನಡೆಯಿತು. ಬಳಿಕ, ಬ್ರಹ್ಮನಗರದ ಮಾರಿಯಮ್ಮ ದೇವಸ್ಥಾನ, ಮಹಾಲಕ್ಷ್ಮಿದೇವಿ ಬೆಟ್ಟಕ್ಕೆ ಜ್ಯೋತಿಯನ್ನು ಒಯ್ಯಲಾಯಿತು.
ಮೆರವಣಿಗೆಯಲ್ಲಿ ರಾಮಹನುಮ ಜ್ಯೋತಿ ರಥಯಾತ್ರೆ ಸಮಿತಿ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಲಕ್ಷೋತ್ತರ ನಾರಿಕೇಳ ಸಮರ್ಪಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ, ಹನುಮಗಿರಿ ಬ್ರಹ್ಮಕಲಶೋತ್ಸವ ಪುತ್ತೂರು ನಗರ ಸಮಿತಿ ಅಧ್ಯಕ್ಷ ಲೋಕೇಶ್ ಹೆಗ್ಡೆ, ಸತೀಶ್ ನಾಯ್ಕ್ ಪರ್ಲಡ್ಕ, ದಿನೇಶ್ ಪಂಜಿಗ, ಡಾ. ಕೃಷ್ಣಪ್ರಸನ್ನ, ಪುರುಷೋತ್ತಮ ಕೋಲ್ಪೆ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮತ್ತು ಹಸಿರು ಹೊರೆಕಾಣಿಕೆ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಗೊಟ್ಟು,ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ರವಿಕಿರಣ್ ಶೆಟ್ಟಿ ಬೆದ್ರಾಡಿ, ನಾಗಪ್ಪ ಗೌಡ ಬೊಮ್ಮೆಟ್ಟಿ, ಶಿವಕುಮಾರ್ ಪಿ. ಬಿ.ಡಾ.ಸುರೇಶ್ ಪುತ್ತೂರಾಯ, ಭಾಮಿ ಅಶೋಕ್ ಶೆಣೈ, ರಾಜೇಶ್ ಬನ್ನೂರು, ಸುಂದರ ಪೂಜಾರಿ ಬಡಾವು, ಗೋಪಾಲಕೃಷ್ಣ ಹೇರಳೆ, ಜೀವಂಧರ್ ಜೈನ್, ಚನಿಲ ತಿಮ್ಮಪ್ಪ ಶೆಟ್ಟಿ, ಶ್ರೀಧರ ಪಟ್ಲ,ವಿಶ್ವನಾಥ ಗೌಡ ಬನ್ನೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಕಾರಿ ಶಶಿಧರ್, ಅಜಿತ್ ರೈ ಹೊಸಮನೆ, ಜನಾರ್ದನ ಬೆಟ್ಟ, ಕೃಷ್ಣಪ್ರಸಾದ್ ಬೆಟ್ಟ, ಯುವರಾಜ್ ಪೆರಿಯತ್ತೋಡಿ, ಮಹಿಳಾ ಸಮಿತಿ ಪ್ರಮುಖರಾದ ವಿದ್ಯಾ ಗೌರಿ, ಜಯಂತಿ ನಾಯಕ್, ಸ್ವರ್ಣಲತಾ ಹೆಗ್ಡೆ, ಗೌರಿ ಬನ್ನೂರು, ಜಯಶ್ರೀ ಎಸ್ ಶೆಟ್ಟಿ, ಪ್ರೇಮಲತಾ ರಾವ್, ಪ್ರೇಮಲತಾ ನಂದಿಲ, ದೀಕ್ಷಾ ಪೈ, ನಯನಾ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.