
ಕೆಆರ್ ಪುರ,ಜೂ.20- ವಿದ್ಯುತ್ ವ್ಯತ್ಯಯ ಹಾಗೂ ವಿದ್ಯುತ್ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ಬೆಸ್ಕಾಂ ಈ ಯೋಜನೆಯನ್ನ ಕಾರ್ಯಗತಗೊಳಿಸುತ್ತಿದೆ.ಈ ಮೂಲಕ ನಗರದಾದ್ಯಂತ ಸುರಕ್ಷಿತ ಹಾಗೂ ಹೆಚ್ಚು ವಿಶ್ವಾಸಾರ್ಹ ವಿದ್ಯುತ್ ಸರಬರಾಜು ಖಚಿತಪಡಿಸಿಕೊಳ್ಳಲು ಭೂಗತ ಕೇಬಲ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಬೈರತಿ ಬಸವರಾಜ್ ಅವರು ತಿಳಿಸಿದರು.
ಆನಂದಪುರದಲ್ಲಿ ಐಟಿಐ ವಿದ್ಯುತ್ ಉಪಕೇಂದ್ರದಿಂದ ಹೊಸ ಫೀಡರ್ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಆನಂದಪುರ,ಟಿಸಿಪಾಳ್ಯ ರಸ್ತೆ, ಸಾಯಿಗಾರ್ಡನ್, ಕೆ.ವಿ.ಬಡಾವಣೆ,
ಮನ್ನಮ್ ನಗರ, ಗೆದ್ದಲಹಳ್ಳಿ ಸ್ಪರ್ಷ ಆಸತ್ರೆ, ಕೆ.ಆರ್ ಪುರ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಹೆಚ್ಚು ವಿದ್ಯುತ್ ಸಮಸ್ಯೆ ಆಗುತ್ತಿತ್ತು. ಈ ಕಾಮಗಾರಿ ಮುಗಿದ ಕೂಡಲೇ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಹವಾಮಾನ ಪರಿಸ್ಥಿತಿಗಳು ಹಾಗೂ ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ಅಡಚಣೆ ಗಳನ್ನು ಗಮನಾರ್ಹ ವಾಗಿ ಕಡಿಮೆ ಮಾಡಬಹುದು ಎಂದರು.
ಯಾವುದೇ ಕಾರಣ-ಕಾಮಗಾರಿ ವೇಳೆ ಕ್ಯೂ ವಿದ್ಯುತ್ ವ್ಯತ್ಯಯವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದರು.
ಕಾಮಗಾರಿಗಳು ನಡೆಯುವ ವೇಳೆ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮುಖಂಡರ ಮೇಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ವಾರ್ಡನ ಅಧ್ಯಕ್ಷರಾದ ಶಿವಪ್ಪ, ಯುವರಾಜ್, ಪ್ರ.ಕಾರ್ಯದರ್ಶಿಗಳಾದ ಮೋಹನ್, ರಾಜುಸಿಂಗ್, ಮುಖಂಡರಾದ ಪ್ರವೀಣ್ ರೆಡ್ಡಿ,ಕೆ. ಹೇಮಂತ್, ಗಿರೀಶ್,ರವಿ, ಜೆಸಿಬಿ ಆಂತೋಣಿ,ಮುರುಳಿಸ್ವಾಮಿ, ಉಮಾಶಂಕರ್,ಡಿ.ಎ.ಶ್ರೀನಿವಾಸ್, ಸೇರಿದಂತೆ ಬೆಸ್ಕಾಂ ಸಿಬ್ಬಂದಿ, ಮತ್ತಿತರರಿದ್ದರು.


























