Home ಸುದ್ದಿ ಅಂತರಾಷ್ಟ್ರೀಯ ಲೆಬನಾನ್‍ನಿಂದ ಕದನ ವಿರಾಮ ಉಲ್ಲಂಘನೆ: ಇಸ್ರೇಲ್ ಆರೋಪ

ಲೆಬನಾನ್‍ನಿಂದ ಕದನ ವಿರಾಮ ಉಲ್ಲಂಘನೆ: ಇಸ್ರೇಲ್ ಆರೋಪ

ಟೆಲ್ ಅವೀವಾ,ಏ.17:– ಇಸ್ರೇಲ್ ಮತ್ತು ಲೆಬನಾನ್ ನಡುವೆ 10 ದಿನಗಳ ಕದನ ವಿರಾಮ ಒಪ್ಪಂದ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಈ ನಡುವೆಯೂ ಲೆಬನಾನ್ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಇಸ್ರೇಲ್ ಆರೋಪಿಸಿದೆ


ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಲೆಬನಾನ್ ಸಹವರ್ತಿ ಜೋಸೆಫ್ ಔನ್ ಜೊತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ ಬಳಿಕ 10 ದಿನಗಳ ಕದನ ವಿರಾಮ ಘೋಷಣೆ ಮಾಡಲಾಗಿದೆ, ಇದರಿಂದ ಅಮೆರಿಕ-ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆಗೆ ದಾರಿ ಮಾಡಿಕೊಡಲಿದೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು “ಈ ಇಬ್ಬರು ನಾಯಕರು ತಮ್ಮ ದೇಶಗಳ ನಡುವೆ ಶಾಂತಿ ¸ಸಭೆಯ ನಡೆಸಲು ಅನುಕೂಲವಾಗುವಂತೆ 10 ದಿನಗಳ ಕದನ ವಿರಾಮವನ್ನು ಔಪಚಾರಿಕವಾಗಿ ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಘೋಷಣೆ ಮಾಡಲು ನಿರ್ಧರಿಸಲಾಯಿತು. ಕದನ ವಿರಾಮಕ್ಕೆ ಒಪ್ಪಿಕೊಂಡ ಲೆಬನಾನ್ ಮತ್ತು ಇಸ್ರೇಲ್ ದೇಶಗಳ ಮುಖ್ಯಸ್ಥರಿಗೆ ಧನ್ಯವಾದ ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ.
ಈ ನಡುವೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರ ಸಂಘಟನೆಯ ಮತ್ತೆ ದಾಳಿ ನಡೆಸಿರುವುದು ಅಮೆರಿಕ-ಇರಾನ್ ನಡುವಿನ ಮಾತುಕತೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


ಕದನ ವಿರಾಮ ಜಾರಿಗೆ ಬರುವ ಸ್ವಲ್ಪ ಸಮಯದ ಮೊದಲು ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಸಂಘಟನೆಯ ಕಾರ್ಯಕರ್ತರು ಗಡಿಯಾಚೆಗಿನ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮಾತನಾಡಿ ಇರಾನ್ ಶಾಂತಿ ಒಪ್ಪಂದಕ್ಕೆ ಬರದಿದ್ದರೆ “ಎಷ್ಟು ಕಾಲ ಬೇಕಾದರೂ” ಅಮೆರಿಕ , ಇರಾನ್ ಬಂದರುಗಳನ್ನು ದಿಗ್ಬಂಧನ ಮಾಡಲು ನಿರ್ಧರಿಸಿದೆ ಎಂದು ಮಾಹಿತಿ ನೀಡಿದೆ.


ಇರಾನ್ ಹೊಸ ಒಪ್ಪಂದ ಮಾಡಿಕೊಳ್ಳದಿದ್ದರೆ ಹೊಸ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದು “ಪರಮಾಣು ಶಸ್ತ್ರಾಸ್ತ್ರ” ವನ್ನು ತ್ಯಜಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಹೇಳಲಾಗಿದೆ.
ಅಮೆರಿಕ-ಇರಾನ್ ಕದನ ವಿರಾಮದ ಪ್ರಮುಖ ಮಧ್ಯವರ್ತಿ ಪಾಕಿಸ್ತಾನದ ಪ್ರಧಾನಿಷಹಬಾಜ್ ಷರೀಪ್, ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ಮದ್ಯಸ್ಥಿಕೆ ವಹಿಸಲು ಮುಂದಾಗಿದೆ ಎಂದಿದ್ದಾರೆ.