Home ಜಿಲ್ಲೆ ಬಿಸಿಯೂಟ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಬಿಸಿಯೂಟ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಸಂಜೆವಾಣಿ ವಾರ್ತೆ

ಬಳ್ಳಾರಿ, ಏ.25: ಬಿಸಿಯೂಟ ಕಾರ್ಮಿಕರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಬಳ್ಳಾರಿ ಜಿ.ಪಂ. ಸಿಇಓ ಅವರಿಗೆ ಮನವಿ ಸಲ್ಲಿಸಲಾಗಿದೆ.

ಕೆಲಸದ ನಿಯಮಾವಳಿಗಳ ಸ್ಪಷ್ಟ ನಿರ್ದೇಶನವಿದ್ದರೂ ಶಾಲೆಗಳ ‘ಆಯಾ’ ಗಳ ತರಹ ‘ಡಿ’ ಗ್ರೂಪ್ ದರ್ಜೆ ನೌಕರರ ತರಹ ದುಡಿಸಿಕೊಳ್ಳಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಇವರದಲ್ಲದ ಕೆಲಸಗಳನ್ನು, ಹೆಚ್ಚುವರಿಯಾಗಿ ದುಡಿಸಿಕೊಳ್ಳುತ್ತಿದ್ದಾರೆ. ದಿನದ ಮುಖ್ಯವಾದ ಸಮಯವನ್ನು ಶಾಲೆಗಳಲ್ಲಿ ಕಳೆಯಬೇಕಾಗಿದೆ. 

ಇದಲ್ಲದೆ ಮೊಟ್ಟೆ ಸುಲಿದ ಹಣ ಸರಿಯಾಗಿ ಬರುತ್ತಿಲ್ಲ. ಕೆಲವು ಶಾಲೆಗಳಲ್ಲಿ ನೀಡಿದರೆ ಮತ್ತೆ ಕೆಲವಡೆ ನೀಡುತ್ತಿಲ್ಲ.  ಹಾಗೆ ಗಣಿ ಬಾಧಿತ ಪ್ರದೇಶಗಳಲ್ಲಿ, ಅಪೌಷ್ಟಿಕತೆ ನಿವಾರಣೆಗೆ ಕಾಳುಗಳನ್ನು ವಿತರಿಸಲಾಗುತ್ತಿದ್ದು, ಬಿಸಿಯೂಟ ಕಾರ್ಮಿಕರಿಗೆ ರೂ.೫೦೦ ವಿಶೇಷ ಪ್ರೋತ್ಸಾಹ ಧನ ನೀಡುತ್ತಿರುವುದು ಸ್ವಾಗಾತಾರ್ಹ. ಆದರೆ  ಈ ಮೊತ್ತವನ್ನು  ಮುಖ್ಯೋಪಾಧ್ಯಯರ ಖಾತೆಗೆ ಹಾಕುವ ಬದಲು ಬಿಸಿಯೂಟ ಕಾರ್ಯಕರ್ತೆಯರ ಬ್ಯಾಂಕ್ ಖಾತೆಗೆ ಹಾಕಬೇಕೆಂಬುದು, ಬಿಸಿಯೂಟ ಕಾರ್ಮಿಕರ ಹಾಗೂ ಸಂಘದ ಬೇಡಿಕೆಯಾಗಿದೆ.  ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷರಾದ ನಾಗರತ್ನ ತಿಳಿಸಿದ್ದಾರೆ.