Home ಜಿಲ್ಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ನಿಂಗಪ್ಪ ಮೂರನೇ ಬಾರಿಗೆ ಆಯ್ಕೆ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ನಿಂಗಪ್ಪ ಮೂರನೇ ಬಾರಿಗೆ ಆಯ್ಕೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.21: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕಕ್ಕೆ 2026-31 ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಸಿ.ನಿಂಗಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಏಸಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿನ್ನೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಗುಂಡಪ್ಪನವರ ನಾಗರಾಜ, ಉಪಾಧ್ಯಕ್ಷರಾಗಿ ಪರಶುರಾಮ ಚೌಕಳಿ, ಶಾಂತಕುಮಾರಿ ಎಂ.ಹಾಗು ಬಸವನಗೌಡ ಖಜಾಂಚಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ .

ನಿಂಗಪ್ಪ ಅವರು ನಿರಂತರವಾಗಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಇನ್ನುಳಿದಂತೆ ಎರೆಡು ಸಂಘಟನಾ ಕಾರ್ಯದರ್ಶಿ ಹಾಗು ಎರೆಡು ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೇಮಕ ಮಾಡಲಿದೆಂದು ನಿಂಗಪ್ಪ ಅವರು ತಿಳಿಸಿದ್ದಾರೆ.