Home ಜಿಲ್ಲೆ ಮೈಸೂರು ಕ್ಷೇತ್ರದ ಜನತೆಗೆ ಸುಲಲಿತ, ತುರ್ತು ಆರೋಗ್ಯ ಸೇವೆ ದೊರೆಯಬೇಕು…!

ಕ್ಷೇತ್ರದ ಜನತೆಗೆ ಸುಲಲಿತ, ತುರ್ತು ಆರೋಗ್ಯ ಸೇವೆ ದೊರೆಯಬೇಕು…!

ಸಂಜೆವಾಣಿ ವಾರ್ತೆ
ನಂಜನಗೂಡು:ಮೇ,10:-
ಕೋವಿಡ್ ಎಂಬ ಮಹಾಮಾರಿಗೆ ದೇಶ ಮತ್ತು ರಾಜ್ಯದ ಜನರು ಬೆಚ್ಚಿ ಬಿದ್ದು ತತ್ತರಿಸುವ ವಾತಾವರಣ ನಿರ್ಮಾಣವಾಗಿತ್ತು. ಈಗ ಹಂಟಾ ಎಂಬ ಆಘಾತಕಾರಿ ವೈರಸ್ ಆತಂಕ ಸೃಷ್ಟಿಸಲು ಮುಂದಾಗಿದೆ ಎಂದು ಮಾಧ್ಯಮಗಳಲ್ಲಿ ಕೇಳಿ ಬರುತ್ತಿದೆ.


ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತರಾಗಿ ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಮುಂದಾಗಬೇಕು ಎಂದು ನಂಜನಗೂಡು ನಗರದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಇಂದು ತುರ್ತು ಸಭೆಯನ್ನು ಶಾಸಕರಾದ ದರ್ಶನ್ ಧ್ರುವನಾರಾಯಣ್ ನಡೆಸಿ, ಕ್ಷೇತ್ರದ ಪ್ರತಿಯೊಬ್ಬ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿ, ನಂಜನಗೂಡು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಕರ್ಯ, ವೈದ್ಯಕೀಯ ಸೇವೆಗಳ ಲಭ್ಯತೆ ಹಾಗೂ ರೋಗಿಗಳ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.


ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಈಶ್ವರ್, ಮತ್ತು ಡಾ. ಶಿವಪ್ರಸಾದ್ ಉಪಸ್ಥಿತಿಯಲ್ಲಿ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ತುರ್ತು ಸಭೆಯಲ್ಲಿ ಹಾಜರಾಗಿ ಸ್ಪಷ್ಟ ಮಾಹಿತಿಗಳನ್ನು ತಿಳಿದುಕೊಂಡರು. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ತುರ್ತು ಚಿಕಿತ್ಸೆ ಸೇವೆಗೆ ತಾಲೂಕು ಕೇಂದ್ರ ಸ್ಥಾನದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಧಾವಿಸುತ್ತಾರೆ. ಇಲ್ಲಿ ಕಾರ್ಯ ನಿರ್ವಹಿಸುವ ವೈತ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರ ಸಂಕಷ್ಟಕ್ಕೆ ತುರ್ತು ಗತಿಯಲ್ಲಿ ಸ್ಪಂದಿಸಿ ಅವರ ಜೀವ ಬದುಕಿಸಲು ಮುಂದಾಗಬೇಕು.


ಇಲ್ಲೇ ಗುಣವಾಗುವ ಸಮಸ್ಯೆಗೆ ಜಿಲ್ಲಾಸ್ಪತ್ರೆಗೆ ತೆರಳುವಂತೆ ಸಲಹೆ ನೀಡುವುದು ಸೂಕ್ತವಲ್ಲ ಅಲ್ಲಿಗೆ ತೆರಳುವ ತನಕ ಮತ್ತಷ್ಟು ಆರೋಗ್ಯ ಏರುಪೇರಾಗಿ ತೊಂದರೆಯಾಗಿರುವ ಘಟನೆಗಳನ್ನು ಕೇಳಿದ್ದೇವೆ ಅಂತಹ ಘಟನೆಗಳು ಮರುಕಳಿಸದಂತೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಜಾಗೃತಿಯಿಂದ ಕ್ಷೇತ್ರದ ಜನರ ಸೇವೆಗೆ ಮುಂದಾಗಬೇಕು ನನಗೆ ಕ್ಷೇತ್ರದ ಸಾಕಷ್ಟು ಜನರು ವಾಟ್ಸಪ್ ಮೂಲಕ ಅಧಿಕಾರಿಗಳ ನಿರ್ಲಕ್ಷತನ ಮತ್ತು ದೊರಕದ ಸೇವೆಗಳ ಬಗ್ಗೆ ವಿಚಾರ ತಿಳಿಸುತ್ತಾರೆ ನಮ್ಮ ತನಕವು ಸಮಸ್ಯೆಗಳು ತಲುಪುವ ಹಾಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಬಾರದು ನಿಮಗೆ ತೊಂದರೆ ಆದಲ್ಲಿ ನನ್ನ ಗಮನಕ್ಕೆ ತನ್ನಿ ಅದನ್ನು ಬಗೆಹರಿಸಲು ಸಿದ್ದನಿದ್ದೇನೆ.


ತಾಲೂಕಿನಾದ್ಯಂತ ಅನಧಿಕೃತವಾಗಿ ನಡೆಯುತ್ತಿರುವ ನಕಲಿ ವೈದ್ಯಾಧಿಕಾರಿಗಳ ಆಸ್ಪತ್ರೆಗಳನ್ನು ಮುಚ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಶಾಸಕರಾದ ದರ್ಶನ್ ಧ್ರುವನಾರಾಯಣ್ ತುರ್ತು ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ನೇಮಕವಾಗಿರುವ ನೋಡಲ್ ಅಧಿಕಾರಿಗಳು ಮತ್ತು ಪಿಡಿಒಗಳು ಮುಂದಾಗಬೇಕು. ನಂಜನಗೂಡು ನಗರ ವ್ಯಾಪ್ತಿಯಲ್ಲಿ ಬಡಾವಣೆಗಳಲ್ಲಿ ಶುಚಿತ್ವ ಕಾಪಾಡಬೇಕು ಮಟನ್ ಮಾರ್ಕೆಟ್ ಬಳಿ ಮಾಂಸಹಾರಿ ತ್ಯಾಜ್ಯವನ್ನು ಹುಲ್ಲಹಳ್ಳಿ ನಾಲೆಗೆ ಬಿಡಲಾಗುತ್ತಿದೆ ಆರೋಗ್ಯ ಅಧಿಕಾರಿಗಳ ಅನುಮತಿ ಇಲ್ಲದೆ ಕುರಿ ಮೇಕೆಗಳನ್ನು ಕಟ್ ಮಾಡಲಾಗುತ್ತಿದೆ ಇದರ ಬಗ್ಗೆ ಶಿಸ್ತು ಕ್ರಮಕ್ಕೆ ಮುಂದಾಗಬೇಕು.


ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಾನಗರ ಪಾಲಿಕೆ ಮಟನ್ ಮಾರ್ಕೆಟ್ ಗಳನ್ನು ಶಿಸ್ತು ಬದ್ಧವಾಗಿ ಪಾಲನೆ ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಇಲ್ಲಿ ನಗರಸಭೆ ಪೌರಾಯುಕ್ತ ಬಸವರಾಜ್ ರವರಿಗೆ ಸೂಚಿಸಿದರು.


ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ರವರು, ತಹಸೀಲ್ದಾರ್ ಸ್ಮಿತಾ ರಾಮ್ ,ಇ ಓ ಜೆರಾಲ್ಡ್ ರಾಜೇಶ್, ನಗರಸಭೆ ಪೌರಯುಕ್ತರಾದ ಬಸವರಾಜ್, ನಾಗರಾಜ್, ಡಾ. ಶಿವಪ್ರಸಾದ್, ಡಾ. ಈಶ್ವರ್ , ಡಿವೈ ಎಸ್ ಪಿ ರಘು ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.