Home ಜಿಲ್ಲೆ ಉಪ ಚುನಾವಣೆ ಮುಗಿದ ತಕ್ಷಣ ಒಳ ಮೀಸಲಾತಿ ಜಾರಿಗೆ ಆಗ್ರಹ

ಉಪ ಚುನಾವಣೆ ಮುಗಿದ ತಕ್ಷಣ ಒಳ ಮೀಸಲಾತಿ ಜಾರಿಗೆ ಆಗ್ರಹ

Oplus_19005440

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.07: ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ರೋಷ್ಟರ್ ಪದ್ದತಿಯನ್ನು ಸರಿಪಡಿಸಿ.56,432 ಹುದ್ದೆಗಳನ್ನು ಉಪ ಚುನಾವಣೆ ಮುಗಿದ ತಕ್ಷಣ ಜಾರಿಗೊಳಿಸಬೇಕು ಎಂದು ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘಟನೆಗಳ ಅಧ್ಯಕ್ಷ ಶ್ರೀಧರ ಕಲಿವೀರ, ರಾಜ್ಯ ಸಂಘಟನಾ ಸಂಚಾಲಕ ಹನುಂಮತಪ್ಪ ಕಾಕರಗಲ್, ಜಿಲ್ಲಾ ಸಂಚಾಲಕ ಗೋವರ್ಧನ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು. ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಬಿ ಜೆ ಪಿ ಸಂಸದ ಬಸವರಾಜ್ ಬೊಮ್ಮಾಯಿ ಅವರು ಅವರದೇ ಪಕ್ಷಕ್ಕೆ ಸೇರಿದ ಪ್ರಧಾನಿ ನರೇಂದ್ರ ಮೋದಿಯವರ ಬಳಿ ತೆರಳಿ. ಜಾರ್ಖಂಡ, ತಮಿಳುನಾಡಿನಂತೆ ಇದನ್ನು ಸಂವಿಧಾನದ 9. ಶೆಡ್ಯೂಲ್ ಗೆ ಸೇರಿಸಬೇಕಿತ್ತು. ಆದರೆ ಆ ಕೆಲಸ ಆಗಲಿಲ್ಲ. ಈಗ ಒಳ ಮೀಸಲಾತಿಗೆ ಪಾದಯಾತ್ರೆ ಮಾಡುವ ಬಿಜೆಪಿ ಮುಖಂಡರು ನಾಟಕಮಾಡುತ್ತಿದ್ದಾರೆಂದು ಆರೋಪಿಸಿದರು.

ನ್ಯಾ.ಎಚ್ಎಸ್ ನಾಗಮೋಹನ್ ದಾಸ್ ಆಯೋಗವು ಶಿಫಾರಸು ಮಾಡಿದ ಪ್ರಕಾರ ಪರಿಶಿಷ್ಟ ಜಾತಿ ಅಲೆಮಾರಿ, ಅರೆ ಅಲೆಮಾರಿ ಜಾತಿಗಳಿಗೆ ಪರಿಶಿಷ್ಟ ಜಾತಿ ಮೀಸಲಾತಿ ಶೇ 17ರ ಪೈಕಿ ಪ್ರತ್ಯೇಕವಾಗಿ ಶೇ01ಮೀಸಲಾತಿ ಕಲ್ಪಿಸಿ ಪ್ರತ್ಯೇಕವಾಗಿ ನೂತನ ಸರ್ಕಾರಿ ಆದೇಶ ಹೊರಡಿಸಬೇಕು.

ಮುಖ್ಯಮಂತ್ರಿಗಳು ಸರ್ವ ಪಕ್ಷಗಳ ಸಂಸದರ ನಿಯೋಗವನ್ನು ಪ್ರಧಾನ ಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗಿ ಈ ಕುರಿತು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಾಣ 18.ರಿಂದ 24 % ಗೆ ಏರಿಕೆ ಮಾಡಿದ್ದಕ್ಕೆ ನ್ಯಾಯಾಲಯಗಳಲ್ಲಿ ತಡೆಯಾಜ್ಞೆ ಇರುತ್ತದೆ. ನ್ಯಾಯಾಲಯಗಳಲ್ಲಿ ಈ ಕುರಿತು ಇರುವ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಲುವಾಗಿ ಶೇ. 56 ಮೀಸಲಾತಿ ಏರಿಕೆಯನ್ನು ಸಂವಿಧಾನದ 9 ನೇ ಶೇಡ್ಯೂಲ್ ಗೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಸರ್ಕಾರ ಆಗ್ರಹಿಸಬೇಕು ಎಂದರು.

g3