
# ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಹಲ್ಲೆ. ಮೊಬೈಲ್ ಜಪ್ತಿ.
# ಟಿಲ್ಲು, ರತ್ನಬಾಬು, ರವಿ ಹಾಗು ಇತರೇ 8 ಜನರ ವಿರುದ್ದ ಕೇಸು.
# ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಏ.25: ನಗರದ ವಿದ್ಯಾನಗರ ಸರ್ಕಲ್ ನಿಂದ ಕೊಳಗಲ್ ರಸ್ತೆಯವರೆಗೆ ರಸ್ತೆ ಅಗಲೀಕರಣ ಕಾಮಗಾರಿಯ ನೆಪದಲ್ಲಿ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಮರಗಳನ್ನು ಕಟಾವು ಮಾಡುತ್ತಿದ್ದುದನ್ನು ತಡೆಯಲು ಹೋದ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆ, ಸಾಕ್ಷಿ ನಾಶ ಪಡಿಸಲು ಮಾಡಿದಕ್ಕೆ ನಗರ ಶಾಸಕ ಭರತ್ ರೆಡ್ಡಿ ಅವರ ಆಪ್ತರಾದ ಟಿಲ್ಲು, ರತ್ನಬಾಬು, ರವಿ ಮೋಕಾ ಮತ್ತು ಎಂಟು ಜನರ ಮೇಲೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.23 ರಂದು ರಾತ್ರಿ 10:30 ಸಮಯದಲ್ಲಿ ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದ ವಿದ್ಯಾನಗರ ಸರ್ಕಲ್ ನ೮ಂದ ಕೊಳಗಲ್ ರಸ್ತೆಗೆ ಹೋಗುವ 1.10 ಕಿ.ಮೀ ರಿಂದ 1.60 ಕಿ.ಮೀ ವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಿ ಬರುವ ರಸ್ತೆ ಬದಿಯ ಮರಗಳನ್ನು ಅಕ್ರಮವಾಗಿ ಕಡಿಯಲಾಗುತ್ತಿತ್ತು.
ಈ ವಿಷಯ ತಿಳಿದ ಉಪ ವಲಯ ಅರಣ್ಯಾಧಿಕಾರಿ ಸುನೀಲಕುಮಾರ ಆರ್. ಚೌವ್ಹಾಣ್ ಹಾಗೂ ಸಿಬ್ಬಂದಿಯೊಂದಿಗೆ ತೆರಳಿ ಈ ಮರಗಳನ್ನು ಕಡಿಯಲು ಯಾರು ನಿಮಗೆ ಅನುಮತಿ ನೀಡಿದ್ದು ಎಂದು ವಿಚಾರಿಸಿದಾಗ. ಕಾಮಗಾರಿ ತುರ್ತಾಗಿ ಕೈಗೊಳ್ಳಬೇಕಾಗಿರುವುದರಿಂದ ಮರಗಳನ್ನು ಕಡಿಯಲಾಗುತ್ತಿದೆ ಎಂದಿದ್ದಾರೆ.
ಆಗ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ಇಲ್ಲದೇ ಮರಗಳನ್ನು ಕಡಿಯುವುದು. ಅರಣ್ಯ ಕಾನೂನು ವಿರುದ್ಧವಾಗಿದ್ದು. ಅನುಮತಿ ಪಡೆದ ನಂತರವೇ ಕಡಿಯಬೇಕು ಸೂಚಿಸಿದರೂ, ಕಡಿಯುವುದನ್ನು ಮುಂದುವರೆಸಿದ್ದಾರೆ. ಇದನ್ನು ಸಿಬ್ಬಂದಿಗಳೊಂದಿಗೆ ತಡೆಯಲು ಪ್ರಯತ್ನಿಸಿದಾಗ ವಾಗ್ವಾದ ನಡೆದಿದೆ. ಈ ಕೃತ್ಯವನ್ನು ಮೊಬೈಲ್ ನಲ್ಲಿ ಚಿತ್ರಿಕರಿಸುವಾಗ ಶಾಸಕ ಭರತ್ ರೆಡ್ಡಿ ಆಪ್ತರರಾದ ಟಿಲ್ಲು, ರತ್ನಬಾಬು, ರವಿ ಮೋಕಾ ಅವರು. ಅರಣ್ಯ ಇಲಾಖೆಯ ಸುನೀಲಕುಮಾರ ಆರ್. ಚೌವ್ಹಾಣ ಅವರ್ ಮೊಬೈಲ್ ಪೋನ್ ಕಿತ್ತುಕೊಂಡು ನೆಲಕ್ಕೆ ಎಸೆದು ಹಾನಿಮಾಡಿದ್ದಾರೆ,
ಆಗ ಮರಗಳ ಕಡಿಯುವುದನ್ನು ತಡೆಯಲು ಬಳ್ಳಾರಿ ವಲಯದ ಸಿಬ್ಬಂದಿಗಳನ್ನು ಮತ್ತು ಸ್ಥಳೀಯ ಪೋಲಿಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಘಟನಾ ಸ್ಥಳಕ್ಕೆ ಕರೆದು ಎಲ್ಲರ ಸಹಕಾರದೊಂದಿಗೆ ಮರ ಕಡಿಯುವುದನ್ನು ತಡೆದಿದ್ದಾರೆ.
21 ತಪಸಿ, 2 ಬೇವು, 2 ಅರಳಿ ಸೇರಿ 25 ಮರಗಳನ್ನು ಕಡಿಯಲಾಗಿದೆ. ಈ ಕೃತ್ಯವು ಕರ್ನಾಟಕ ಅರಣ್ಯ ಕಾಯ್ದೆ 1963 ಹಾಗೂ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976 ರ ಸ್ಪಷ್ಟ ಉಲ್ಲಂಘನೆಯಾಗಿದೆ.
ಜೊತೆಗೆ ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಶ್ರೀನಿವಾಸ್ ಶ್ರೀನಿವಾಸ್ ಇನ್ಪ್ರಾ ಪ್ರಾಜೆಕ್ಟ್ ಪ್ರೈ.ಲಿ ಶ್ರೀನಿವಾಸರ ಮತ್ತು ನಾಲ್ವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಎಫ್ ಓಸಿ ಕೇಸು ದಾಖಲಿಸಲಾಗಿದೆ.
1.8 ಕಿಮೀ ರಸ್ತೆ ಅಗಲೀಕರಣ, ಚರಂಡಿ ಮತ್ತು ಫುಟ್ ಪಾಥ್ ನಿರ್ಮಾಣಕ್ಕಾಗಿ 233 ಮರಗಳ ಕಡಿಯಲು ಪಿಡ್ಬ್ಲುಡಿ ಇಲಾಖೆಯ ಎಇಇ ಅವರು ಅನುಮತಿ ಕೋರಿದ್ದರು. ಇದರಲ್ಲಿ 139 ಮರಗಳು ಪುಟ್ ಪಾಥ್ ನಲ್ಲಿ ನಲ್ಲಿ ಬರುತ್ತಿರುವುದರಿಂದ ಅವುಗಳನ್ನು ಹಾಗೆಯೇ ಉಳಿಸಿಕೊಂಡು ಪುಟ್ ಪಾಥ ನಿರ್ಮಾಣ ಮಾಡಲು ಫುಟ್ ಪಾಥ್ ಮರುವಿನ್ಯಾಸ ಮಾಡಿ, ಸಾಧ್ಯವಾದಷ್ಟು ಕಡಿಮೆ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಪಿಡ್ಬ್ಲುಡಿ ಅಧಿಕಾರಿಗಳಿಗೆ ಸೂಚಿಸಿತ್ತು.
ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೇ ಏಕಾಏಕಿ ಮರ ಕಡಿಯಲಾಗಿದೆಂದು
50ಕ್ಕೂ ಹೆಚ್ಚು ಮರಗಳಿರುವುದರಿಂದ ಸಾರ್ವಜನಿಕ ಆಕ್ಷೇಪಣೆ ಸ್ವೀಕರಿಸಿ, ಯಾವುದೇ ಆಕ್ಷೇಪಣೆ ಇಲ್ಲದಿದ್ದಲ್ಲಿ ರಸ್ತೆ ಅಗಲೀಕರಣದ ನಂತರ ಗಿಡಗಳನ್ನೂ ನೆಡಲು ಅನ್ವಯಿಸುವ ಶುಲ್ಕಗಳನ್ನು ಪಾವತಿಸಿಕೊಂಡು ಅನುಮತಿ ನೀಡಲಾಗುತ್ತಿತ್ತು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ ಕೆ.ಎನ್ ತಿಳಿಸಿದ್ದಾರೆ.






















