
ಮುಜಾಫರ್‍ಪುರ (ಬಿಹಾರ),ಜು.13: ವೃದ್ಧಾಪ್ಯ ವೇತನದ ಹಣ ಡ್ರಾ ಮಾಡಲು ಹೋದ 82 ವರ್ಷದ ವೃದ್ಧರೊಬ್ಬರ ಬ್ಯಾಂಕ್ ಖಾತೆ ಬ್ಯಾಲೆನ್ಸ್ ನೋಡಿ ಸ್ವತಃ ವೃದ್ಧ ಹಾಗೂ ಬ್ಯಾಂಕ್ ಅಧಿಕಾರಿಗಳೇ ದಂಗಾಗಿರುವ ವಿಚಿತ್ರ ಘಟನೆಯೊಂದು ಬಿಹಾರದ ಮುಜಾಫರ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ವೃದ್ಧ ಕಮಲೇಶ್ವರ್ ಮಿಶ್ರಾ ಎಂಬುವವರ ಖಾತೆಯಲ್ಲಿ ಬರೋಬ್ಬರಿ 759 ಕೋಟಿ ರೂಪಾಯಿ (ಖs 759,69,51,951) ಜಮೆಯಾಗಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಅವರ ವಿಕಲಚೇತನ ಮಗನ ಪೆನ್ಷನ್ ಖಾತೆಯಲ್ಲೂ ಇಷ್ಟೇ ಪ್ರಮಾಣದ ಭಾರಿ ಮೊತ್ತ ಕಾಣಿಸಿಕೊಂಡಿದ್ದು, ಇಬ್ಬರ ಖಾತೆ ಸೇರಿ ಒಟ್ಟು 1,500 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಕವಿಯಾಗಿರುವ ಕಮಲೇಶ್ವರ್ ಮಿಶ್ರಾ ಅವರು ತಮ್ಮ ವೃದ್ಧಾಪ್ಯ ವೇತನ ಹಾಗೂ ಮಗನ ವಿಕಲಚೇತನ ವೇತನದ ಹಣವನ್ನು ಪಡೆಯಲು ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಕ್ಕೆ (ಅSಅ) ಭೇಟಿ ನೀಡಿದ್ದರು. ಪೆನ್ಷನ್ ಹಣವನ್ನು ಕೈಗೆ ಪಡೆದ ನಂತರ, ಕುತೂಹಲದಿಂದ ತಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿಸಿದ್ದಾರೆ. ಈ ವೇಳೆ ಕಂಪ್ಯೂಟರ್ ಪರದೆಯ ಮೇಲೆ ಬಿತ್ತರವಾದ ಕೋಟಿಗಟ್ಟಲೆ ಅಂಕಿ-ಅಂಶಗಳನ್ನು ನೋಡಿ ಅಲ್ಲಿದ್ದವರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ.






























