Home ಜಿಲ್ಲೆ ಮಂಗಳೂರು ರಸ್ತೆ ಬದಿಯ ತಡೆ ಬೇಲಿಗೆ ಆಟೋ ರಿಕ್ಷಾ ಢಿಕ್ಕಿ-ಚಾಲಕನಿಗೆ ಗಾಯ

ರಸ್ತೆ ಬದಿಯ ತಡೆ ಬೇಲಿಗೆ ಆಟೋ ರಿಕ್ಷಾ ಢಿಕ್ಕಿ-ಚಾಲಕನಿಗೆ ಗಾಯ

ಸುಳ್ಯ:ಪುತ್ತೂರಿನಿಂದ ಸುಳ್ಯದ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾವೊಂದು ಮೊಗರ್ಪಣೆಯಲ್ಲಿ ರಸ್ತೆಬದಿಯ ತಡೆಬೇಲಿಗೆ ಗುದ್ದಿದ ಘಟನೆ ನಡೆದಿದೆ.
ಆಲೆಟ್ಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅರಂಬೂರಿನ ಸುದೇಶ್ ಅವರು ತಮ್ಮ ಮಗು ಮತ್ತು ಅರಂಬೂರಿನ ಪರಮೇಶ್ವರ ಎಂಬವರೊಂದಿಗೆ ತಮ್ಮ ರಿಕ್ಷಾದಲ್ಲಿ ಪುತ್ತೂರಿನ ಜಾತ್ರೆಗೆ ಹೋಗಿ ಮುಂಜಾನೆಯ ನಾಲ್ಕು ಗಂಟೆ ವೇಳೆಗೆ ಹಿಂದಿರುಗುತ್ತಿದ್ದಾಗ ಸುಳ್ಯ ಸಮೀಪ ಮೊಗರ್ಪಣೆಯಲ್ಲಿ ನಿಯಂತ್ರಣ ತಪ್ಪಿ ಅಟೋ ರಿಕ್ಷಾ ರಸ್ತೆಬದಿಯ ತಡೆ ಬೇಲಿಗೆ ಗುದ್ದಿತು. ಪರಿಣಾಮವಾಗಿ ಆಟೋ ರಿಕ್ಷಾ ಜಖಂ ಗೊಂಡಿದ್ದು ಸುದೇಶ್ ಅವರ ಮುಖಕ್ಕೆ ಗಾಯವಾಗಿದೆ. ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ