Home ಜಿಲ್ಲೆ ಮೇ.9 ರಿಂದ ಎರೆಡು ದಿನ ನಗರದಲ್ಲಿ   ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭ

ಮೇ.9 ರಿಂದ ಎರೆಡು ದಿನ ನಗರದಲ್ಲಿ   ಸಂಗಂ ಸಾಹಿತ್ಯ ಪುರಸ್ಕಾರ ಸಮಾರಂಭ

Oplus_19005442

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.07:  ನಗರದ ಹೊರ ವಲಯದಲ್ಲಿರುವ ಜ್ಞಾನಾಮೃತ ಕಾಲೇಜಿನಲ್ಲಿ ಮೇ.9 ಮತ್ತು 10 ರಂದು ಎರೆಡು ದಿನಗಳ ಕಾಲ 2025 ರ ಸಂಗಂ ಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿಯು 25 ಸಾವಿರ ರೂ ನಗದು ಹೊಂದಿದೆ.

ಸಂಗಂ ಟ್ರಸ್ಟ್ ಅಧ್ಯಕ್ಷ  ಡಾ. ವೈ.ಸಿ.ಯೋಗಾನಂದರೆಡ್ಡಿ,

ಕಾರ್ಯದರ್ಶಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು ಹೇಳಿದ್ದಾರೆ

ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ವಿಷಯ ತಿಳಿಸಿದರು. ರಾಜ್ಯದ ಮತ್ತು ನೆರೆಯ ರಾಜ್ಯಗಳಿಂದ 103 ಜನ ಸಾಹಿತ್ಯಾಸಕ್ತರು ಆಗಮಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಶಸ್ತಿ ಪುರಸ್ಕಾರದ ಜೊತೆಗೆ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಚರ್ಚಾಗೋಷ್ಟಿ, ವಿಚಾರ ಸಂಕಿರಣ ನಡೆಯಲಿವೆ.

ಕಾರ್ಯಕ್ರಮವನ್ನು ಓ ಎಲ್ ನಾಗಭೂಷಣ ಸ್ವಾಮಿ ಉದ್ಘಾಟಿಸಲಿದ್ದಾರೆ. ಡಾ. ಅರವಿಂದ ಪಟೇಲ್ ಅಧ್ಯಕ್ಷತೆ ವಹಿಸಲಿದ್ದಾರೆ. ನ್ಯಾಷನಲ್ ಬುಕ್ ಟ್ರಸ್ಟ್ ನ ಅಧಿಕಾರಿಗಳಾದ ಡಾ.ಪತ್ತಿಪಾಕ ಮೋಹನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕಾವ್ಯ ಸಂವಾದದಲ್ಲಿ ಚಿದಾನಂದ ಸಾಲಿ, ರವಿ ಕುಮಾರ್ ಟೆಲೆಕ್ಸ್, ಭುವನಾ ಹಿರೇಮಠ ಹಾಗೂ ನಾಗಣ್ಣ ಕಿಲಾರಿ (ಕನ್ನಡ ) ತಗುಳ ಗೋಪಾಲ, ಕಲ್ಯಾಣ ಕುಂಜು,ಬಾಲ ಸುಧಾಕರ ಮೌಳಿ ( ತೆಲುಗು) ಭಾಗವಹಿಸಲಿದ್ದಾರೆ.

ಪ್ರಶಸ್ತಿ ಹಂತದ 5 ಮಂದಿ ಕವಿಗಳೊಂದಿಗೆ ಸಂವಾದ ನಡೆಯಲಿದ್ದು ಅಮರೇಶ್ ನುಗಡೋಣಿ ಪ್ರಶಸ್ತಿ ಪ್ರದಾನ ಮಾಡಿದರೆ, ಅಧ್ಯಕ್ಷತೆಯನ್ನು ಡಾ. ವೈ ಸಿ ಯೋಗಾನಂದ ರೆಡ್ಡಿ ವಹಿಸಲಿದ್ದಾರೆ.

2023ರಲ್ಲಿ ಅನುಪಮಾ ಪ್ರಸಾದ್ ಅವರ “ಚೋದ್ಯ” ಕಥಾ ಸಂಕಲನವು, ಚೀಮನಹಳ್ಳಿ ರಮೇಶಬಾಬು ಅವರ ‘ಮಂಪರು’ ಕಾದಂಬರಿ 2024ರ ಸಂಗಂ ಸಾಹಿತ್ಯ ಪುರಸ್ಕಾರ ಪಡೆದುಕೊಂಡಿತ್ತು.

ಈ ವರ್ಷ ಕನ್ನಡದೊಂದಿಗೆ ತೆಲುಗು ಸಾಹಿತ್ಯದ ನುಡಿ ಸಾಂಗತ್ಯವನ್ನು ಚರ್ಚಿಸಲಿದೆ. ಕನ್ನಡ-ತೆಲುಗು ಭಾಷೆಯ 50ಕ್ಕೂ ಹೆಚ್ಚು ಸಾಹಿತಿಗಳು ಕಲಾವಿದರು ಭಾಗವಹಿಸಲಿದ್ದಾರೆ.

ಎರಡನೇ ದಿನದ ಕಥಾ ಸಮಯದಲ್ಲಿ ಮಾರುತಿ ಪೌರೋಹಿತಂ ಕರ್ನೂಲ್, ಪೂರ್ಣಿಮಾ ಮಾಳಿಗೆಮನಿ ಶರಣಬಸವ ಗುಡದಿನ್ನಿ, ಮೇಘನಾಥ ರೆಡ್ಡಿ. ಯುವ ಪ್ರಕಾಶಕರ ತವಕ ತಲ್ಲಣ ಗೋಷ್ಠಿಯಲ್ಲಿ ರಾಜೇಂದ್ರ ಪ್ರಸಾದ್,ಮಮತಾ ಸೂರ್ಯ ಕೀರ್ತಿ, ಚಾಂದ್ ಕವಿ ಚಂದ್ರ, ಶ್ರೀ ದಿವ್ಯ, ಮಲ್ಲಿಕಾರ್ಜುನ್ ಶೇಷುಕೊರ್ಲ ಪಾಟಿ ಭಾಗವಹಿಸಲಿದ್ದಾರೆ.

ಸಂಜೆಯ ಕವಿಸಮಯದಲ್ಲಿ ನಾಗಿಣಿ ಅಪ್ಪಸಾನಿ, ಲಕ್ಷಣ್ ವಿ ಎ,ಸದಾಶಿವ ಸೊರಟೂರು, ಆಶಾ ಜಗದೀಶ ಪಾಲ್ಗೊಳ್ಳಲಿದ್ದಾರೆ. 2025 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಅಮರೇಶ ನಗುಡೋಣಿ ಅವರೊಂದಿಗೆ ಸಂವಾದ ನಡೆಯಲಿದ್ದು ಪಲ್ಲವವೆಂಕಟೇಶ್ ನಡೆಸಿಕೊಡಲಿದ್ದಾರೆ. ರಾಜಶೇಖರ ಹಳೆಮನೆ, ಮಂಜುಳಾ ಗೋನಾಳ್ ಮಾತನಾಡಲಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಲೇಖಕರಾದ ಡಾ.ದಸ್ತಗಿರಿ ಸಾಬ್ ದಿನ್ನಿ. ಡಾ. ವೀರೇಂದ್ರ ರಾವಿಹಾಳ್, ಬಸವರಾಜ್ ಹರಗಿನದೋಣಿ, ನಾಗರಾಜ್ ಬಸರಕೋಡು ಮೊದಲಾದವರು ಇದ್ದರು.