Home ಜಿಲ್ಲೆ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಜಿಂದಾಲ್ ಶಾಲೆಯ ಕರಾಟೆ ವಿದ್ಯಾರ್ಥಿಗಳು ಆಯ್ಕೆ

ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಜಿಂದಾಲ್ ಶಾಲೆಯ ಕರಾಟೆ ವಿದ್ಯಾರ್ಥಿಗಳು ಆಯ್ಕೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಮೇ.07: ಟ್ರಡಿಷನಲ್  ಶೊಟೋಕಾನ್ ಕರಾಟೆ ಅಕಾಡೆಮಿ ಕರ್ನಾಟಕದ* ಕರಾಟೆ ವಿದ್ಯಾರ್ಥಿಗಳು  *ಅಸ್ಸಾಂ ರಾಜ್ಯದ ಗುಹಾಟಿಯಲ್ಲಿ ಮೇ 16 ಮತ್ತು 17 ರಂದು ನಡೆಯಲಿರುವ 24ನೇ ಅಖಿಲ ಭಾರತ ಕರಾಟೆ ಪಂದ್ಯಾವಳಿಯಲ್ಲಿ* ಬಳ್ಳಾರಿಯ ತೋರಣಗಲ್ಲು ಜಿಂದಾಲ್ ಶಾಲೆಯ ಕರಾಟೆ ಪಟುಗಳು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕರಾಟೆ ಪಟುಗಳು ಕಟಾ ಮತ್ತು ಕುಮಿತೆ  ವಿಭಾಗಗಳಲ್ಲಿ ತೂಕ ಮತ್ತು ವಯೋಮಿತಿಯಲ್ಲಿ *10 ಬಾಲಕರು, 3 ಬಾಲಕಿಯರು, 4 ತರಬೇತುದಾರರು ಭಾಗವಹಿಸಲಿದ್ದಾರೆ*  ಎಂದು *ಕರಾಟೆ ಅಕಾಡೆಮಿಯ ಹಿರಿಯ ಕರಾಟೆ ತರಬೇತುದಾರರಾದ ಕಟ್ಟೆ ಸ್ವಾಮಿ ತಿಳಿಸಿದ್ದಾರೆ