Home ಜಿಲ್ಲೆ ಗುಗ್ಗರಹಟ್ಟಿ ಹೌಸಿಂಗ್ ಬೋರ್ಡ್ ನಿವಾಸಿಗಳಿಗೆ ಮೂಲಭೂತ ಸೌಲಭ್ಯಕ್ಕೆ ಪಾಲಿಕೆಗೆ ಮನವಿ

ಗುಗ್ಗರಹಟ್ಟಿ ಹೌಸಿಂಗ್ ಬೋರ್ಡ್ ನಿವಾಸಿಗಳಿಗೆ ಮೂಲಭೂತ ಸೌಲಭ್ಯಕ್ಕೆ ಪಾಲಿಕೆಗೆ ಮನವಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.07:  ಕರ್ನಾಟಕ ಗೃಹ ಮಂಡಳಿಯ ನಗರದ ಗುಗ್ಗರಹಟ್ಟಿ ಬಡಾವಣೆಯ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಕರ್ನಾಟಕ ರಕ್ಷಣಾ ಕಾವಲುಪಡೆ ನಿನ್ನೆ ಮಹಾ ನಗರ ಪಾಲಿಕೆಯನ್ನು ಆಗ್ರಹಿಸಿದೆ

ಕರ್ನಾಟಕ ರಕ್ಷಣಾ ಕಾವಲುಪಡೆಯ ರಾಜ್ಯ ಅಧ್ಯಕ್ಷ ಹೆಚ್.ಸುರೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಿ. 2018 ರಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ 111 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾದ ಬಡಾವಣೆಯಲ್ಲಿ  40 ಕುಟುಂಬಗಳು ವಾಸಿಸುತ್ತಿದ್ದಾರೆ. ಈ ಬಡಾವಣೆಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಇಲ್ಲ. ಮನೆಗಳಿಗೆ ಅನುಗುಣವಾಗಿ ಬೀದಿ ದೀಪಗಳು  ಸಹ ಇಲ್ಲ, ಒಳಚರಂಡಿ ವ್ಯವಸ್ಥೆಯೂ ಸರಿ ಇಲ್ಲ. ಇಡೀ ಬಡಾವಣೆ ತುಂಬಾ ಬೇಲೆ  ಬೆಳೆದಿದ್ದು, ವಿಷ ಸರ್ಪಗಳು ಹಾಗೂ ಕರಡಿಗಳ ಉಪದ್ರವ ಹೆಚ್ಚಾಗಿದೆ. ಮಧ್ಯವ್ಯಸನಿಗಳು ಹಾಗೂ ಜೂಜುಕೋರರು ಆನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಮಹಿಳೆಯರು ಹಾಗೂ ಮಕ್ಕಳಿಗೆ ತುಂಬಾ ಮುಜುಗರ ಅನುಭವಿಸುತ್ತಿದ್ದಾರೆ. ಸಾರಿಗೆ ವ್ಯವಸ್ಥೆಯೂ ಇಲ್ಲ. ಇಲ್ಲಿ ಐದು ದೊಡ್ಡ ಉದ್ಯಾನವನಗಳು ಇದ್ದು, ಅವುಗಳು ವಾಯು ವಿಹಾರಕ್ಕೆ ಅನುಕೂಲವಾಗಿಲ್ಲ. ಇವನ್ನು ಅಭಿವೃದ್ಧಿಪಡಿಸಬೇಕು.   ಬೀಟ್ ಪೊಲೀಸರನ್ನು ನಿಯೋಜಿಸಬೇಕು. ಈ ಮನವಿಗೆ ಸ್ಪಂದಿಸಿ  ಶೀಘ್ರವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಲು ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಮಾಡಿದೆ.

ಸಂಘಟನೆಯ ಬಳ್ಳಾರಿ ಜಿಲ್ಲಾ ಯುವ ಘಟಕ ಅಧ್ಯಕ್ಷ ವಿ.ಎಸ್.ಸಾಗರ್ ಅಪ್ಪು ತಾಲೂಕ ಅಧ್ಯಕ್ಷ ಅಶೋಕ್ ಬಡಿಗೇರ್, ಮೊಹಮ್ಮದ್ ಮುಬಾರಕ್ , ಸಂಪತ್ ಕುಮಾರ್, ಕೃಷ್ಣ ನಾಯಕ್, ರವಿ, ಉಮಾಮಹೇಶ್ವರ, ದೊಡ್ಡನಗೌಡ, ಶೇಕು, ಶರತ್, ಶಿವು, ಅನಿಲ್ ವಾಲ್ಮೀಕಿ, ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿಗಳು ಭಾಗವಹಿಸಿದ್ದರು