
ಸುಳ್ಯ:ಮೂರು ಕಾರು ಮತ್ತು ಒಂದು ದಿಚಕ್ರ ವಾಹನದ ನಡುವೆ ಸರಣಿ ಅಪಘಾತವಾಗಿ ದ್ವಿಚಕ್ರ ಸವಾರರಿಗೆ ಗಾಯವಾದ ಘಟನೆ ಸುಳ್ಯದ ಪರಿವಾರಕಾನ ಬಳಿ ನಡೆದಿದೆ.
ಅಪಘಾತವಾದ ಎಲ್ಲಾ ವಾಹನಗಳು ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದು ಘಟನೆ ನಡೆದ ಸ್ಥಳದಲ್ಲಿ ಒಂದು ಕಾರು ವೇಗವಾಗಿ ಬಂದು ತಕ್ಷಣ ಬ್ರೇಕ್ ಹಾಕಿದ್ದಾರೆ ಈ ವೇಳೆ ಇಂದಿನಿಂದ ಸರಣಿಯಾಗಿ ಬರುತ್ತಿದ್ದ ಮೂರು ಕಾರುಗಳು ಕೂಡ ಬ್ರೇಕ್ ಹಾಕಿದಾಗ ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಅಪಘಾತದ ಕೊನೆಯಲ್ಲಿ ಇದ್ದ ಇನೋವಾ ಕಾರಿನ ಹಿಂಬದಿಗೆ ಅದರ ಇಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರ ನಿಯಂತ್ರಣ ತಪ್ಪಿ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು ಸವಾರರು ರಸ್ತೆಗೆ ಬಿದ್ದು ಗಾಯವಾಗಿದೆ. ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.






















