
ಮಂಗಳೂರು- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಲ್ಲಿ ಮಂಗಳೂರು ನಗರಕ್ಕೆ ರೂ.೪೦.೦೦ ಕೋಟಿ ಅನುದಾನ ಮಂಜೂರಾಗಿರುತ್ತದೆ. ಸದರಿ ಯೋಜನೆಯಡಿ ಈ ಕೆಳಕಂಡ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
೧. ಪಚ್ಚನಾಡಿ ಪ್ರದೇಶದಲ್ಲಿರುವ ಂSP (ಚಿಛಿಣivಚಿಣeಜ sಟuಜge ಠಿಡಿoಛಿess) ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಟಿ.ಪಿ ಯನ್ನು Sಃಖ (Sequeಟಿಛಿiಟಿg ಃಚಿಣಛಿh ಖeಚಿಛಿಣoಡಿ) ತಂತ್ರಜ್ಞಾನಕ್ಕೆ ಮೇಲ್ದರ್ಜೇಗೇರಿಸುವ ಕಾಮಗಾರಿ.- ೬.೮೭ ಕೋಟಿಗಳು.
೨. ಬಜಾಲ್ ಎಸ್.ಟಿ.ಪಿಯಲ್ಲಿ ಕಾರ್ಯಕ್ಷಮತೆ ಯನ್ನು ಹೆಚ್ಚಿಸಲು ಬಬಲ್ ಡಿಫ್ಯೂಸರ್, ಏರ್ ಬ್ಲೋಯರ್ ಮತ್ತು ಕಂಟ್ರೋಲ್ ಪ್ಯಾನೆಲ್ಗಳನ್ನು ಅಳವಡಿಸುವ ಕಾಮಗಾರಿ.- ೩.೨೨ ಕೋಟಿಗಳು.
೩. ಅತ್ತಾವರ ಪ್ರದೇಶದಲ್ಲಿ ಹೊಸ ವೆಟ್ ವೆಲ್ ನಿರ್ಮಾಣ ಕಾಮಗಾರಿ.- ೩.೩೩ ಕೋಟಿಗಳು.
೪. ಮಂಗಳೂರು ನಗರದಲ್ಲಿ ಆಯ್ದ ಭಾಗಗಳಲ್ಲಿ ೮.೨೦ ಕಿ.ಮೀ ಉದ್ದದ ಮುಖ್ಯ ಒಳಚರಂಡಿ ಕೊಳವೆಯ ಉನ್ನತೀಕರಣ ಕಾಮಗಾರಿ. – ೧೬.೧೩ ಕೋಟಿಗಳು.
ಮಂಗಳೂರು ನಗರಕ್ಕೆ ಒಳಚರಂಡಿ ವ್ಯವಸ್ಥೆಯ ನಿರ್ಮಾಣ / ಉನ್ನತೀಕರಣ ಕಾಮಗಾರಿಗೆ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪಚ್ಚನಾಡಿ SಖಿP ಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.































