
ಸಂಜೆವಾಣಿ ವಾರ್ತೆ
ಹೊಸಪೇಟೆ.ಮೇ. 22 ಸ್ಥಳೀಯ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ ಗುರುವಾರ ಜರುಗಿದ ಸರಳ ಸಮಾರಂಭದಲ್ಲಿ ಎನ್.ಆರ್.ಎಲ್.ಎಂ ಸಂಜೀವಿನಿ ಕ್ಯಾಲೆಂಡರ್ ಹಾಗೂ ಡೈರಿಯನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಂ ಷಾ ಬಿಡುಗಡೆ ಮಾಡಿದರು.
ಎನ್.ಆರ್.ಎಲ್.ಎಂ -ಸಂಜೀವಿನಿ ರಾಜ್ಯ ಕಚೇರಿಯಿಂದ ಜಿಲ್ಲೆಗೆ ನೀಡಲಾಗಿರುವ “ಓಖಐಒ ಸಂಜೀವಿನಿ ಯೋಜನೆಯ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರಿಗೆ ಹಾಗೂ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಿಗೆ ನೀಡಲಾಗುವ “ಕ್ಯಾಲೆಂಡರ್ ಹಾಗೂ ಡೈರಿ” ಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜೆ.ತಿಮ್ಮಪ್ಪ, ಸಹಾಯಕ ಯೋಜನಾ ಅಧಿಕಾರಿ ಉಮೇಶ್ ಸೇರಿದಂತೆ ಇಲಾಖೆ ಆಧೀಕ್ಷಕರು, ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯ ಡಿಎಂಎಂಯು ವಿಭಾಗದ ಡಿಪಿಎಂಯುಎಂ, ವೈಪಿ, ವಿಷಯ ನಿರ್ವಾಹಕರು ಹಾಗೂ ಎಲ್ಲಾ ತಾಲೂಕಿನ ಟಿಎಂಎಂಯು, ಟಿಪಿಎಂ, ಸಿಎಸ್ ಹಾಗೂ ಅS ಸಿಬ್ಬಂಧಿಗಳು ಇದ್ದರು.






















