Home ಜಿಲ್ಲೆ ಕಂದುಕೂರು ರಾಮುಡುಗೆ ಅಂಬೇಡ್ಕರ್ ನ್ಯಾಷನಲ್ ಪ್ರೈಡ್ ಎಕ್ಸಲೆನ್ಸಿ ಅವಾರ್ಡ್

ಕಂದುಕೂರು ರಾಮುಡುಗೆ ಅಂಬೇಡ್ಕರ್ ನ್ಯಾಷನಲ್ ಪ್ರೈಡ್ ಎಕ್ಸಲೆನ್ಸಿ ಅವಾರ್ಡ್

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮೇ.06: ಬೆಂಗಳೂರಿನ ದಿ ಇಂಡಿಯನ್ ಫೋರಂ ಫರ್ ಸೋಷಿಯಲ್ ಲೀಡರ್ಸ್ ಅಂಡ್ ಅಚೀವರ್ಸ್ ಸಂಸ್ಥೆ ಯು. ಸಾರ್ವಜನಿಕ ನಾಯಕತ್ವ, ಸಾಮಾಜಿಕ ನ್ಯಾಯ ಮತ್ತು ಸಮುದಾಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಬಳ್ಳಾರಿ ನಗರದ ಕೆಪಿಸಿಸಿ ಎಸ್ಸಿ ವಿಭಾಗದ ಉಪಾಧ್ಯಕ್ಷ ಕಂದುಕೂರು ರಾಮುಡು ಅವರಿಗೆ 2026 ನೇ ಸಾಲಿನ ಡಾ.ಬಿ..ಅರ್ ಅಂಬೇಡ್ಕರ್ ನ್ಯಾಷನಲ್ ಪ್ರೈಡ್ ಎಕ್ಸಲೆನ್ಸಿ ಅವಾರ್ಡನ್ನು ನೀಡಿ ಗೌರವಿ  ಸಿದೆ.

ಸಂಸ್ಥೆಯ ಗೌರವ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಡಾ.ಕೆ.ವೆಂಟೇಶನ್ ಇದನ್ನು ರಾಮುಡು ಅವರಿಗೆ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ದೊರೆತಿರುವುದರ ಬಗ್ಗೆ ರಾಮುಡು ಅವರು ಬಳ್ಳಾರಿ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ಅವರ ಜೊತೆ ಸಂತಸ ವಿನಮಯಮಾಡಿಕೊಂಡಿದ್ದಾರೆ.