Home ಜಿಲ್ಲೆ ಕಲಬುರಗಿ ಬಸ್‍ಗಳ ನಡುವೆ ಡಿಕ್ಕಿ ; ಪ್ರಯಾಣಿಕರಿಗೆ ಗಾಯ

ಬಸ್‍ಗಳ ನಡುವೆ ಡಿಕ್ಕಿ ; ಪ್ರಯಾಣಿಕರಿಗೆ ಗಾಯ

ಕಲಬುರಗಿ,ಮೇ.8-ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಸಿರನೂರು ಬಳಿ ಗುರುವಾರ ನಡೆದಿದೆ.
ಜೇವರ್ಗಿ ಕಡೆಯಿಂದ ಕಲಬುರಗಿಗೆ ಬರುತ್ತಿದ್ದ ಬಸ್ ಹಾಗೂ ಕಲಬುರಗಿಯಿಂದ ಹೊರಟಿದ್ದ ಮತ್ತೊಂದು ಬಸ್ ನಡುವೆ ಈ ಅಪಘಾತ ಸಂಭವಿಸಿದೆ.
ಬಸ್ ಚಾಲಕನೊಬ್ಬ ಕಾರೊಂದನ್ನು ಓವರ್‍ಟೇಕ್ ಮಾಡಲು ಪ್ರಯತ್ನಿಸಿದಾಗ ಎದುರಿನಿಂದ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಒಂದು ಬಸ್‍ನ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿಯಾಗಿದ್ದು, ಇನ್ನೊಂದು ಬಸ್ ಗಾಜು ಭಾಗಶ: ನಜ್ಜುಗುಜ್ಜಾಗಿದೆ.