Home ಜಿಲ್ಲೆ ಮಂಗಳೂರು ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಕಾರ್ಯಕ್ರಮ ಸಮಾರೋಪ; ಧರ್ಮಗ್ರಂಥ ಸರಿಯಾಗಿ ಅರ್ಥೈಸದ ಕಾರಣ...

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಕಾರ್ಯಕ್ರಮ ಸಮಾರೋಪ; ಧರ್ಮಗ್ರಂಥ ಸರಿಯಾಗಿ ಅರ್ಥೈಸದ ಕಾರಣ ಸಮಾಜದಲ್ಲಿ ಗೊಂದಲ – ಚಿದಾನಂದ ಮಾಸ್ತರ್

ಸುಳ್ಯ:ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಎಲ್ಲಾ ಧರ್ಮಗ್ರಂಥಗಳೂ ಹೇಳಿದೆ. ಆದರೆ ಅದನ್ನು ಸರಿಯಾಗಿ ಅರ್ಥೈಸದ ಕಾರಣ, ಅದರಂತೆ ಬದುಕದ ಕಾರಣ ನಮ್ಮಲ್ಲಿ ಗೊಂದಲ, ಸಮಾಜದದಲ್ಲಿ. ಜಾತಿಗಳ ನಡುವೆ ಸಮಾಜದಲ್ಲಿ ಭೇಧ ಭಾವ ಉಂಟಾಗಿದೆ ಎಂದು ನಿವೃತ್ತ ಶಿಕ್ಷಕ ಯು.ಎಸ್ ಚಿದಾನಂದ ಮಾಸ್ಟರ್ ಗೂನಡ್ಕ ಹೇಳಿದರು.
ಇತಿಹಾಸ ಪ್ರಸಿದ್ಧ ಅಜ್ಞಾವರ ಮೇನಾಲ ಮಖಾಂ ಉರೂಸ್ ಸಮಾರಂಭದ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ವಿಜ್ಞಾನ ಈ ಜಗತ್ತಿನ ಹಲವು ನಿಗೂಢತೆಗಳನ್ನು, ವಿಸ್ಮಯಗಳನ್ನು ತೆರೆದಿಟ್ಟಿದೆ. ವಿಜ್ಞಾನ ಸುಳ್ಳು ಹೇಳುವುದಿಲ್ಲ, ಜಾತಿ, ಧರ್ಮ ಭೇದವಿಲ್ಲದೆ ಮನುಷ್ಯರೆಲ್ಲರೂ ಒಂದೇ ಎಂದು ವಿಜ್ಞಾನ ಪ್ರತಿಪಾದಿಸಿದೆ. ಆದುದರಿಂದ ವೈಜ್ಞಾನಿಕ ಯುಗದಲ್ಲಿ ಮನುಕುಲ ಒಂದೇ ಎಂಬ ವೈಜ್ಞಾನಿಕ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಬದುಕಬೇಕು ಎಂದು ಹೇಳಿದರು.
ಅಜ್ಜಾವರ ಮಸೀದಿ ಖತೀಬ ಹಸೈನಾರ್ ಫೈಝಿ ಕೊಡಗು ಅವರ ದುವಾಶಿರ್ವಚನ ಮಾಡಿದರು. ಸೌಹಾರ್ದ ಸಮಾರಂಭದ ಅಧ್ಯಕ್ಷತೆಯನ್ನು ಮೇನಾಲ ದರ್ಗಾ ಶರೀಫ್ ಮೊಕ್ತೇಸರ ಎಂ. ಗುಡ್ಡಪ್ಪ ರೈ ವಹಿಸಿದ್ದರು. ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮ ಗುರು ಒಲ್ವಿನ್ ಎಡ್ವರ್ಡ್ ಡಿಕುನ್ಹಾ, ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ ಸಿ, ಕರ್ನಾಟಕ ರಾಜ್ಯ ಬಾವೈಕ್ಯ ಪರಿಷತ್ ಜಿಲ್ಲಾಧ್ಯಕ್ಷ ಇಕ್ಬಾಲ್ ಬಾಳಿಲ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಕ್ಷಯ ಕೆ ಸಿ ಮತ್ತು ಹಿರಿಯರಾದ ರವೀಂದ್ರನಾಥ ರೈ ಅವರನ್ನು ಸನ್ಮಾನಿಸಿ ಗೌರವಿಸಿದರು. ಉರುಸ್ ಸಮಿತಿ ಉಪಾಧ್ಯಕ್ಷ ಅಂದುಹಾಜಿ ,ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪ್ರಧಾನ ಕಾರ್ಯದರ್ಶಿ ಶೌಕತ್ ಆಲಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.