
ಸೈದಾಪುರ:ಜೂ.೨೩:ಒAದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಆಗಿದ್ದು ಯೋಗವು ಕೇವಲ ವ್ಯಾಯಾಮವಲ್ಲ; ಅದು ಬದುಕನ್ನು ಬೆಳಗಿಸುವ ಪಥ. ಪ್ರತಿದಿನ ೩೦ ನಿಮಿಷ ಯೋಗ ಅಭ್ಯಾಸ ಮಾಡಿದರೆ ದೈಹಿಕ, ಮಾನಸಿಕ ಆರೋಗ್ಯವನ್ನು ಸಮತೋಲನದಿಂದ ಕಾಯ್ದುಕೊಳ್ಳಬಹುದು ಎಂದು ಪ್ರಾಂಶುಪಾಲ ರವಿಚಂದ್ರ ಅಭಿಪ್ರಾಯಪಟ್ಟರು.
ಸಮೀಪದ ಕಡೇಚೂರು ಸರಕಾರಿ ಉಪಕರಣಗಾರ, ಮತ್ತು ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ವೇಗದ ಜೀವನ ಶೈಲಿಯಲ್ಲಿ ಮಾನವನಿಗೆ ದೈಹಿಕ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಯೋಗವು ಆರೋಗ್ಯವಂತ ಹಾಗೂ ಸಮತೋಲನ ಯುಕ್ತ ಜೀವನಕ್ಕೆ ದಾರಿ ತೋರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಯೋಗ ತರಬೇತಿ ಕಾರ್ಯಕ್ರಮದಲ್ಲಿ ಶಿವಲಿಂಗಯ್ಯ, ಸುಮಾ, ಅಕ್ಷಯ್ ಮತ್ತು ಅಂಕುಶ್ ಅವರು ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಆಸನಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ವೆಂಕಟರಾವ್ ಕುಲಕರ್ಣಿ, ವಿಜಯಕುಮಾರ್ ಬಿರಾದರ್, ಹಣಮಂತ ದೊಡ್ಡಮನಿ, ಪ್ರಿಯಾಂಕಾ ದಿವಾಟಗಿ, ಪ್ರದೀಪ್ ದದ್ದಲ್, ಶ್ರೀನಿವಾಸ್ ಪಾಟೀಲ್, ಹುಸೇನ್, ಸೂಕುಮುನಿ, ಬಾಲಾಜಿ, ಮಂಜುನಾಥ್, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು.