
ಗುರುಮಠಕಲ್:ಜೂ.28: ಪಟ್ಟಣದ ಅಂಜಪ್ಪ ತಂದೆ. ಮಲ್ಲಪ್ಪ ಕಂದುರುಗೇರಿಯವರು ಸತತವಾಗಿ ಸುಮಾರು ಮೂರು ವರ್ಷ ಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾದ ಅರಣ್ಯ ಸ್ಥಳಗಳಿಗೆ ಹಿಡಿದುಕೊಂಡು ಬಿಡುತ್ತಿದ್ದಾರೆ. ಗುರುಮಠಕಲ್ ಪಟ್ಟಣದ ನಾರಾಯಣಪೂರ ಓಣಿಯಲ್ಲಿ ಹಾವು ಮನೆಗೆಹೊಗುತ್ತಿರುವ ಸಮಯದಲ್ಲಿ ಮನೆಯವರು ಉರಗರಕ್ಷಕ ಅಂಜಪ್ಪ ಅವರಿಗೆ ಕರೆ ಮಾಡಿದಾಗ ಅವರು ಹಿಡಿದು ಕೊಂಡು ಸುರಕ್ಷಿತ ಸ್ಥಳಕ್ಕೆ ಬಿಟ್ಟರು. ಹೆಚ್ಚಾಗಿ ಹಾವುಗಳು ಅರಣ್ಯ ಪ್ರದೇಶದಲ್ಲಿರುತ್ತವೆ ಆದರೆ ಆಕಸ್ಮಿಕವಾಗಿ ಪಟ್ಟಣ ಮತ್ತು ಗ್ರಾಮಗಳಿಗು ಬರುವುದು ಸಹಜ ಅವುಗಳಿಗು ಕೂಡ ಜೀವಿಸುವ ಹಕ್ಕು ಇದೆ ಇಂತಹ ಸಮಯದಲ್ಲಿ ನನ್ನ ಮೋಬೈಲ್ ನಂಬರಿಗೆ(78998 38839) ಕರೆ ಮಾಡಿದಾಗ ನಾನು ಬರುವೆ ಎಂದು ಹೇಳಿದರು.