
ಚನ್ನಮ್ಮನ ಕಿತ್ತೂರು,ಜೂ.೨೨ ಸ್ಥಳೀಯ ಬಿಜೆಪಿ ಕಛೇರಿಯಲ್ಲಿ ಬೆಳಿಗ್ಗೆ ೧೧ನೇ ಅಂತರರಾಷ್ಟಿçÃಯ ಯೋಗದಿನವನ್ನು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ , ಬಿಜೆಪಿ ಕಾರ್ಯಕರ್ತರ ಜೊತೆಗೂಡಿ ಆಚರಿಸಿದರು.
ನಂತರ ಮಾತನಾಡಿ ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಉತ್ತೇಜಿಸಲು ದೈಹಿಕ ಆಸನಗಳು, ಉಸಿರಾಟದ ವ್ಯಾಯಾಮಗಳು, ಧ್ಯಾನ ಮತ್ತು ನೈತಿಕ ತತ್ವಗಳನ್ನು ಒಳಗೊಂಡಿರುವ ಸಮಗ್ರ ಅಭ್ಯಾಸವಾಗಿದ್ದು ಸಮತೋಲನವನ್ನು ಸಾಧಿಸುವ ಶ್ರೇಷ್ಠ ಪಥವಾಗಿದೆ. ನಮ್ಮ ಭಾರತೀಯ ಸಂಸ್ಕöÈತಿ ಕೊಟ್ಟ ಅತ್ಯಮೂಲ್ಯ ಕೊಡುಗೆಗೆಳಲ್ಲಿ ಯೋಗವು ಒಂದು. ಪ್ರತಿದಿನವು ಯೋಗಭ್ಯಾಸ ಮಾಡುವ ಮೂಲಕ ಆರೋಗ್ಯವಂತ ಬದುಕು ರೂಪಿಸಿಕೊಳ್ಳೋಣ. ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ ಮನಸ್ಸು-ದೇಹ ಮತ್ತು ಆತ್ಮಸೇರಿದಂತೆ ಎಲ್ಲ ಅಂಶಗಳನ್ನು ಶುದ್ದಿಕರೀಸಲು ನೇರವಾಗುವುದರೊಂದಿಗೆ ಪೃಕೃತಿಮಾತೆಯ ಜೊತೆ ಸಂಪರ್ಕ ಕಲ್ಪಿಸುತ್ತದೆ. ನಮ್ಮನ್ನು ನಮ್ಮ ನೈಜತೆಯ ಹತ್ತಿರಕ್ಕೆ ಕೊಂಡೊಯುತ್ತದೆ. ಅದರ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ ಒಟ್ಟಾರೆಯಾಗಿ, ಯೋಗವು ಆಂತರಿಕ ಶಾಂತಿಯನ್ನು ಪೋಷಿಸುವ ಅಭ್ಯಾಸವಾಗಿದೆ, ಎಂದರು.
ದೇವಗಾAವ ಶಾಲೆ ಹಾಗೂ ಎಲ್ಲ ಶಾಲಾ-ಕಾಲೇಜುಗಳು ಸೇರಿದಂತೆ ಕ್ಷೇತ್ರಾಧ್ಯಂತ ವಿವಿಧ ಸರಕಾರಿ ಕಛೇರಿಗಳಲ್ಲಿ ಯೋಗ ದಿನವನ್ನು ಆಚರಿದರು.
ಈ ವೇಳೆ ಯೋಗಾ ಮಾಸ್ಟರ್ ಅಪ್ಪಣ್ಣಾ ಮುಷ್ಟಗಿ, ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಸಂದೀಪ ದೇಶಪಾಂಡೆ, ಸಿದ್ದು ಬೋಳ್ಳನವರ, ಕಿರಣ ಪಾಟೀಲ, ಶಿವಾನಂದ ಹನಮಸಾಗರ, ಮಹಾಂತೇಶ ಗಿರನಟ್ಟಿ, ಪಾಪು ನರಗುಂದ. ನಾಗರಾಜ ಅಸುಂಡಿ, ಬಸವರಾಜ ಬಡಿಗೇರ, ಸುರೇಶ ಕುರಗುಂದ, ಶಂಕರ ಗುರುಪುತ್ರನವರ, ಕಲ್ಲಪ್ಪ ಅಗಸಿಮನಿ, ಮಂಜುನಾಥ ಮಣ್ಣವಡ್ಡರ, ಮಹಾದೇವ ಹತ್ತಿ, ರವಿ ಭೀಮರಾಣಿ, ನಾಗು ಉಪಸ್ಥಿತರಿದ್ದರು.