
ಪ್ರಧಾನಿ ವಿರುದ್ಧ ಮಮತಾ ವಾಗ್ದಾಳಿ
ಬಿಷ್ಣುಪುರ, ಏ.೧೯- ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ ೩೩ ರಷ್ಡು ಮೀಸಲಾತಿ ನೀಡುವ ’ಮಹಿಳಾ ಮಸೂದೆಯನ್ನು ತಡೆಯಲು ಟಿಎಂಸಿ, ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದೆ’: ಪಶ್ವಿಮ ಬಂಗಾಳದಲಿ ’ಮಹಾ ಜಂಗಲ್ ರಾಜ್’ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಮನವಿ ಮಾಡಿದ್ದು ಮಹಿಳಾ ಮೀಸಲಾತಿಯಿಂದಲೇ ಪ್ರಧಾನಿ ನರೇಂದ್ರ ಮೋದಿ ಪತನ ಆರಂಭ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೋಲಿಗೆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ತಾರಕಕ್ಕೇರಿದೆ.
ಬಿಷ್ಣುಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ -ಟಿಎಂಸಿ ಮಹಿಳಾ ಮೀಸಲಾತಿ ಮಸೂದೆ ಕೆಳಮನೆಯಲ್ಲಿ ವಿಫಲವಾಗುವಂತೆ ನೋಡಿಕೊಳ್ಳಲು ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.,ಇದರ ಪರಿಣಾಮ ಮಹಿಳಾ ಮೀಸಲಾತಿ ಲೋಕಸಭೆಯಲ್ಲಿ ಪಾಸಾಗಲಿಲ್ಲ ಎಂದು ಹೇಳಿದರು.
ಟಿಎಂಸಿ ಮತ್ತು ಕಾಂಗ್ರೆಸ್ ಸೇರಿದಂತೆ ಇಂಡಿ ಒಕ್ಲೂಟ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಪಾಸಾಗುವುದನ್ನು ತಡೆದಿದೆ. ಈ ಮೂಲಕ ಮಹಿಳೆಯರ ರಾಜಕೀಯ ಹಕ್ಕು ಕಸಿದಿದೆ ಎಂದು ಕಿಡಿಕಾರಿದ್ದಾರೆ.
ಪಶ್ವಿಮ “ಬಂಗಾಳದ ಮಹಿಳೆಯರು ಶೇಕಡಾ ೩೩ ರಷ್ಟು ಮೀಸಲಾತಿ ಬಯಸಿದ್ದರು. ೨೦೨೯ ರಿಂದ ಮೀಸಲಾತಿ ಜಾರಿಗೆ ತರಬೇಕೆಂದು ಬಯಸಲಾಗಿತ್ತು. ಆದರೆ ಬಂಗಾಳದ ಹೆಣ್ಣುಮಕ್ಕಳು ’ಮಹಾ ಜಂಗಲ್ ರಾಜ್’ ಅನ್ನು ಪ್ರಶ್ನಿಸುತ್ತಿದ್ದರಿಂದ ಬಂಗಾಳದ ಹೆಚ್ಚಿನ ಹೆಣ್ಣುಮಕ್ಕಳು ಶಾಸಕರು ಮತ್ತು ಸಂಸದರಾಗುವುದನ್ನು ಟಿಎಂಸಿ ಬಯಸಲಿಲ್ಲ. ಆದ್ದರಿಂದ, ಟಿಎಂಸಿ, ಕಾಂಗ್ರೆಸ್ ಜೊತೆಗೆ ಸೇರಿ, ಮಹಿಳೆಯರಿಗೆ ಮೀಸಲಾತಿ ನೀಡುವ ಕಾನೂನನ್ನು ಅಂಗೀಕರಿಸದಂತೆ ಪಿತೂರಿ ನಡೆಸಿ ತಡೆದಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ
ದೇಶದ ಮತ್ತಷ್ಟು ಅಭಿವೃದ್ಧಿ ಮತ್ತು ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಲು ದೇಶದ ರಾಜಕೀಯದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಬಯಸಿದೆ, ಆದರೆ ಟಿಎಂಸಿ ಪಶ್ಚಿಮ ಬಂಗಾಳದ ತಾಯಂದಿರು ಮತ್ತು ಸಹೋದರಿಯರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದ್ದಾರೆ.
ಪಶ್ವಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗಳು ರಾಜ್ಯದ ಇತಿಹಾಸವನ್ನೇ ಬದಲಾಯಿಸಲಿವೆ .ಈ ಬಾರಿ ಟಿಎಂಸಿಗೆ ಪಾಠ ಕಲಿಸಿ ಎಂದಿದ್ದಾರೆ.
ಭಾರತೀಯ ಜನತಾ ಪಕ್ಷಮಹಿಳಾ ಸಬಲೀಕರಣ, ಅವರ ಸುರಕ್ಷತೆ ಮತ್ತು ಭದ್ರತೆಗೆ ಸಮಾನಾರ್ಥಕವಾಗಿದೆ ಮತ್ತು ಅದಕ್ಕಾಗಿಯೇ ಕೇಸರಿ ಪಕ್ಷ ನಿರಂತರವಾಗಿ ಅವರ ಬೆಂಬಲ ಪಡೆಯುತ್ತಿದೆ ಎಂದು ಹೇಳಿದ ಅವರು ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಖಚಿತ, ಅದಕ್ಕಾಗಿಯೇ ಟಿಎಂಸಿ ಭಯಭೀತವಾಗಿದೆ ಮತ್ತು ಜನರನ್ನು ಬೆದರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳಕ್ಕೆ ನುಸುಳುಕೋರರು ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ಟಿಎಂಸಿ ಎಲ್ಲಾ ಕಾನೂನುಗಳನ್ನು ಉಲ್ಲಂಘಿಸಿದೆ ಮತ್ತು ನಂತರ ಅವರಿಗೆ ಧರ್ಮದ ಆಧಾರದ ಮೇಲೆ ಕೋಟಾ ನೀಡಲಾಗಿದೆ .ಎಂದು ಮುಖ್ಯಮಂತ್ರಿ ಬ್ಯಾನರ್ಜಿ ಪಕ್ಷದ ವಿರುದ್ಧ ಸಂಪೂರ್ಣ ದಾಳಿ ನಡೆಸಿದ ಪ್ರಧಾನಿ, ಮೇ ೪ ರಂದು ಫಲಿತಾಂಶಗಳು ಪ್ರಕಟವಾದ ನಂತರ ಎಲ್ಲಾ “ಟಿಎಂಸಿ ಗೂಂಡಾಗಳು” ಪೊಲೀಸರಿಗೆ ಶರಣಾಗಬೇಕು ಏಕೆಂದರೆ ಅವರನ್ನು ಬಿಡಲಾಗುವುದಿಲ್ಲ ಎಂದು ಗುಡುಗಿದರು.
ಮೋದಿ ಪತನ ಆರಂಭ
ಪ್ರಧಾನಿ ನರೇಂದ್ರ ಮೋದಿ ಅವರ ಪತನ ಆರಂಭವಾಗಿದೆ, ಗಡಿ ನಿರ್ಣಯ ಮಸೂದೆ ಭಾರತ, ಬಂಗಾಳವನ್ನು ವಿಭಜಿಸುವ ತಂತ್ರ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿ ಪಕ್ಷಗಳ ವಿರುದ್ಧ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ ಟೀಕಾ ಪ್ರಹಾರ ನಡೆಸಿದರು.
ಹೌರಾದ ಉಲುಬೇರಿಯಾ ಮತ್ತು ದಕ್ಷಿಣ ೨೪ ಪರಗಣದ ಬರೂಯಿಪುರ, ಭಾಂಗರ್ ಮತ್ತು ಸೋನಾರ್ಪುರದಲ್ಲಿ ನಡೆದ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಜೋಡಿಸುವ ಬಿಜೆಪಿಯ ವಿಫಲ ಪ್ರಯತ್ನ ದೇಶ ಮತ್ತು ಬಂಗಾಳವನ್ನು ವಿಭಜಿಸುವ ಕೇಂದ್ರದ “ನಿಜವಾದ ಆಟ”ವನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
ಶಾಸಕಾಂಗಗಳಲ್ಲಿ ಮಹಿಳಾ ಕೋಟಾ ಜಾರಿಗೆ ತರಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವಲ್ಲಿ ವಿಫಲವಾದ ನಂತರ ಬಿಜೆಪಿ ನೇತೃತ್ವದ ಕೇಂದ್ರದ ಮೇಲೆ ದಾಳಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರ ಅವನತಿ” ಸಂಸತ್ತಿನಲ್ಲಿ ಪ್ರಾರಂಭವಾಗಿದೆ. ಬಂಗಾಳದಲ್ಲಿ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ
ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಭಾರತ ಮತ್ತು ಬಂಗಾಳವನ್ನು ವಿಭಜಿಸುವ ಒಂದು ತಂತ್ರವಾಗಿತ್ತು … ಪ್ರಧಾನಿ ನರೇಂದ್ರ ಮೋದಿಯವರ ಪತನ ಅಧಿಕೃತವಾಗಿ ಪ್ರಾರಂಭವಾಗಿದೆ” ಮಹಿಳಾ ಮೀಸಲಾತಿ ಮಸೂದೆ ಕೇವಲ “ಚುನಾವಣಾ ಜನಸಂಖ್ಯಾಶಾಸ್ತ್ರವನ್ನು ಕುಶಲತೆಯಿಂದ ನಿರ್ವಹಿಸುವ ಆಳವಾದ ಪಿತೂರಿ ಎಂದಿದ್ದಾರೆ.
























