Home ಜಿಲ್ಲೆ ಕಲಬುರಗಿ ಸಿಯುಕೆಯಲ್ಲಿ ದೃಷ್ಟಿ ಮೀರಿದ ದೃಷ್ಟಿ ಕಾರ್ಯಾಗಾರ

ಸಿಯುಕೆಯಲ್ಲಿ ದೃಷ್ಟಿ ಮೀರಿದ ದೃಷ್ಟಿ ಕಾರ್ಯಾಗಾರ

ಕಲಬುರಗಿ.ಮಾ.20: ಆಧುನಿಕ ತಂತ್ರಜ್ಞಾನಗಳ ಮೂಲಕ ದೃಷ್ಟಿಹೀನರನ್ನು ಸಮಾಜ ಮುಖ್ಯವಾಹಿನಿಗೆ ಮತ್ತು ಆರ್ಥಿಕತೆಯೊಂದಿಗೆ ಸಂಯೋಜಿಸಬೇಕಾಗಿದೆ” ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು.
ಕಲಬುರಗಿಯ ನವ ಕಲ್ಯಾಣ ಜ್ಯೋತಿ ಜನಪರ ವೇದಿಕೆಯ ಸಹಯೋಗದೊಂದಿಗೆ ಸಿಯುಕೆಯ ಸೆಂಟ್ರಲ್ ಲೈಬ್ರರಿ ಆಯೋಜಿಸಿದ್ದ ದೃಷ್ಟಿ ಮೀರಿದ ದೃಷ್ಟಿ: ದೃಷ್ಟಿಹೀನರನ್ನು ಸಬಲೀಕರಣಗೊಳಿಸುವುದು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುವ, ದೃಷ್ಟಿಹೀನ ಬಳಕೆದಾರರಿಗೆ ಪ್ರವೇಶಸಾಧ್ಯತೆಯನ್ನು ಹೆಚ್ಚಿಸುವ ಬಹುಭಾಷಾ ಹಾರಿಜಾನ್ ಒಸಿಆರ್ ಸಾಫ್ಟ್‍ವೇರ್ ಅನ್ನು ಸಹ ಉದ್ಘಾಟಿಸಿದರು. ಅವರು ಮುಂದುವರೆದು ಮಾತನಾಡಿ “ನಾವು ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಉಪಕರಣಗಳ ಉಪಯುಕ್ತತೆಯನ್ನು ಮೌಲ್ಯಮಾಪನ ಮಾಡಬೇಕು ಮತ್ತು ಮಿಷನ್ ವಿಕಸಿತ ಭಾರತದೊಂದಿಗೆ ಜೋಡಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶದ ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಸಿಯುಕೆಯು ಯಾವಾಗಲು ಮುಕ್ತವಾಗಿದೆ. ಸಿಯುಕೆಯಲ್ಲಿ ಎನ್‍ಇಪಿ 2020 ಅನುಷ್ಠಾನದ ಮೂಲಕ, ದೃಷ್ಟಿಹೀನರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳಿಗೆ ನಾವು ಆದ್ಯತೆ ನೀಡಿದ್ದೇವೆ” ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಸಿಯುಕೆಯ ಸಂಗೀತ ವಿಭಾಗದ ಸಹಪ್ರಾದ್ಯಾಪಕ ಡಾ. ಉದಯ್ ಕಿರಣ್ ಕೆ.ಟಿ., ಮಾತನಾಡಿ ವಿಶ್ವವಿದ್ಯಾಲಯದ ಬ್ರೈಲ್ ಸಂಪನ್ಮೂಲ ಕೇಂದ್ರವು ದೃಷ್ಟಿಹೀನರ ಬೋಧನೆ ಮತ್ತು ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವೈಯಕ್ತಿಕವಾಗಿ ನಾನು ಕೇಂದ್ರಕ್ಕೆ ಕೊಡುಗೆ ನೀಡಲು ಬದ್ಧನಾಗಿದ್ದೇನೆ. ಲೂಯಿಸ್ ಬ್ರೈಲ್ ಮತ್ತು ಜ್ಞಾನಯೋಗಿ ಡಾ. ಪಂಡಿತ್ ಪುಟ್ಟರಾಜ್ ಗವಾಯಿ ದೃಷ್ಟಿಹೀನ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ” ಎಂದು ಹೇಳಿದರು.
ಕಲಬುರಗಿಯ ನವ ಕಲ್ಯಾಣ ಜ್ಯೋತಿ ಜನಪರ ವೇದಿಕೆಯ ಅಧ್ಯಕ್ಷ ಸಿದ್ದರಾಮ ಜೆ. ಸೀತಾನೂರ್, ಲೂಯಿಸ್ ಬ್ರೈಲ್ ಮತ್ತು ಜ್ಞಾನಯೋಗಿ ಡಾ. ಪಂಡಿತ್ ಪುಟ್ಟರಾಜ್ ಗವಾಯಿ ಅವರ ದೂರದೃಷ್ಟಿಯ ಕೆಲಸದ ಕುರಿತು ಮಾತನಾಡಿದರು.
ಕಲಬುರಗಿಯ ಗುಲ್ಬರ್ಗ ಉತ್ತರ ರೋಟರಿ ಕ್ಲಬ್‍ನ ಅಧ್ಯಕ್ಷ ಆನಂದ ದಂಡೋತಿ, ಕ್ಲಬ್‍ನ ಉಪಕ್ರಮಗಳ ಬಗ್ಗೆ ಚರ್ಚಿಸಿದರು ಮತ್ತು 20 ಜನ ದೃಷ್ಟಿಹೀನರಿಗೆ ವಾಕಿಂಗ್ ಸ್ಟಿಕ್‍ಗಳನ್ನು ವಿತರಿಸಿದರು.
ವಿಶ್ವವಿದ್ಯಾಲಯದ ಗ್ರಂಥಪಾಲಕರಾದ ಡಾ. ಪಿ.ಎಸ್. ಕಟ್ಟಿಮನಿ ಅವರು ಗಣ್ಯರನ್ನು ಸ್ವಾಗತಿಸಿ ಕಾರ್ಯಾಗಾರದ ಉದ್ದೇಶಗಳ ಕುರಿತು ವಿವರಿಸಿದರು. ಸಿಯುಕೆಯಲ್ಲಿ ಇಬ್ಬರು ಶಾಶ್ವತ ದೃಷ್ಟಿಹೀನ ಅಧ್ಯಾಪಕ ಸದಸ್ಯರಾದ ಡಾ. ಉದಯ್ ಕಿರಣ್ ಕೆ.ಟಿ. ಮತ್ತು ಜಯಂತ್ ಬರುಹಾ ಅವರನ್ನು ನೇಮಿಸಿದ್ದಕ್ಕಾಗಿ ಅವರು ಕುಲಪತಿಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು. ರಾಜ್‍ಕುಮಾರ್ ಕಲ್ಯಾಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಪ್ರಕಾಶ್ ಎಸ್.ಎನ್. ವಂದಿಸಿದರು. ಪೆÇ್ರ. ವೆಂಕಟರಮಣ ದೊಡ್ಡಿ, ಡಾ. ದೀಕ್ಷಿತ್, ಸಾಗರ, ಸತೀಶ, ಬಸವರಾಜ, ಶಿವಕುಮಾರ ಮತ್ತು 75 ದೃಷ್ಟಿಹೀನರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.