Home ಜಿಲ್ಲೆ ಬೆಂಗಳೂರು ಪಿಡಿಒ ರಾಮಕೃಷ್ಣಪ್ಪ ವರ್ಗಾವಣೆಗೆ ಗ್ರಾಮಸ್ಥರ ಒತ್ತಾಯ

ಪಿಡಿಒ ರಾಮಕೃಷ್ಣಪ್ಪ ವರ್ಗಾವಣೆಗೆ ಗ್ರಾಮಸ್ಥರ ಒತ್ತಾಯ

ಕೋಲಾರ:,೧೬-ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎಂ. ರಾಮಕೃಷ್ಣಪ್ಪ ರವರ ವಿರುದ್ಧದ ಅಕ್ರಮಗಳ ತನಿಖೆ, ಶಿಸ್ತು ಕ್ರಮ ಜರುಗಿಸಿ ಕೂಡಲೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ.ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.


ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಖಾದ್ರಿಪುರ ನಿರಂಜನ್ ಮಾತನಾಡಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿಗೆ ಪಿಡಿಒ ಆಗಿ ರಾಮಕೃಷ್ಣಪ್ಪ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಇದರ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಪ್ರಶ್ನೆ ಮಾಡಿದರೆ ನಾನು ದಲಿತ ನಿಮ್ಮ ವಿರುದ್ದ ದೂರು ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ ಸರ್ಕಾರಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಪಂಚಾಯತಿಯಲ್ಲಿ ಬ್ರೋಕರ್ ಗಳಿಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮ ಪಂಚಾಯತಿ ಸದಸ್ಯರು ಸಾಮಾನ್ಯ ವರ್ಗದ ಜನರನ್ನು ನಿರ್ಲಕ್ಷ್ಯ ಮಾಡುತ್ತಿದ್ದು ಕೂಡಲೇ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು


ದಲಿತ ಸಿಂಹ ಸೇನೆ ರಾಜ್ಯ ಅಧ್ಯಕ್ಷ ಹೂಹಳ್ಳಿ ಪ್ರಕಾಶ್ ಮಾತನಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಗೋಮಾಳದ ಜಮೀನುಗಳಿಗೆ ಇಸ್ವತ್ತು ಮಾಡಿಕೊಟ್ಟಿದ್ದಾರೆ ಪಂಚಾಯತಿಯಲ್ಲಿ ಅರ್ಜಿ ಹಾಕಿಸಿ ನಂತರ ಏನು ಗೊತ್ತಿಲ್ಲದ ರೀತಿಯಲ್ಲಿ ತಕರಾರು ಅರ್ಜಿ ಸಲ್ಲಿಸಿ ಇಬ್ಬರ ಮಧ್ಯೆ ರಾಜಿ ಮಾಡಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾನೆ ಕೂಡಲೇ ಪಿಡಿಒ ವಿರುದ್ದ ಕ್ರಮಕೈಗೊಂಡು ವರ್ಗಾವಣೆ ಮಾಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಜಿಪಂ ಮುಂದೆ ಗ್ರಾಮಸ್ಥರೊಂದಿಗೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು


ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ ಕೊಂಡರಾಜನಹಳ್ಳಿ ಪಂಚಾಯಿತಿಯು ನಗರ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ, ಭೂಮಾಫಿಯಾದವರೊಂದಿಗೆ ಶಾಮೀಲಾಗಿ ರಾಜಕೀಯ ಪ್ರಭಾವದಿಂದ ಹಲವಾರು ಅಕ್ರಮ ಇಸ್ವತ್ತುಗಳನ್ನು ಸೃಷ್ಟಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸುಮಾರು ೩೦ಕ್ಕೂ ಹೆಚ್ಚು ಅಕ್ರಮ ಇ-ಸ್ವತ್ತುಗಳನ್ನು ಮಾಡಿಕೊಟ್ಟಿರುವುದು ದಾಖಲೆಗಳಿವೆ ಜೊತೆಗೆ ೧೫ನೇ ಹಣಕಾಸು ಯೋಜನೆ ಹಾಗೂ ಎಸ್‌ಸಿ,ಎಸ್‌ಟಿ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಇತನ ವಿರುದ್ದ ಸುಮಾರು ೧೦ ಬಾರಿ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು


ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಗೋವಿಂದಪ್ಪ, ಸಂಗೊಂಡಹಳ್ಳಿ ಕುಮಾರ್, ಮುನಿಯಪ್ಪ, ವಿಜಯನಗರ ಮಂಜುನಾಥ್, ಕೊಂಡರಾಜನಹಳ್ಳಿ, ಅಮ್ಮೇರಹಳ್ಳಿ, ವಿಜಯನಗರ, ಖಾದ್ರಿಪುರ ಸಂಗೊಂಡಹಳ್ಳಿ, ತೇರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.