Home ಜಿಲ್ಲೆ ಕಲಬುರಗಿ ಬೀದರ ಪಶು ವಿವಿ ಕುಲಪತಿ – ಕುಲಸಚಿವರ ವಿರುದ್ಧ ಕ್ರಮ ಜರುಗಿಸಲು ವೀರ ಕನ್ನಡಿಗರ ಸೇನೆ...

ಬೀದರ ಪಶು ವಿವಿ ಕುಲಪತಿ – ಕುಲಸಚಿವರ ವಿರುದ್ಧ ಕ್ರಮ ಜರುಗಿಸಲು ವೀರ ಕನ್ನಡಿಗರ ಸೇನೆ ಸಿಎಂಗೆ ದೂರು

ಕಲಬುರಗಿ,ಮೇ.6- ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನಂದಿನಗರ ಬೀದರನಲ್ಲಿ ಇರುವ ವಿಶ್ವವಿದ್ಯಾಲಯ ಕುಲಪತಿ ಕೆ ಸಿ ವೀರಣ್ಣ ಹಾಗೂ ಕುಲಸಚಿವ ಪಿ ಟಿ ರಮೇಶ್ ಅವರ ಅಕ್ರಮ ಹಾಗೂ ಕನ್ನಡ ವಿರೋಧಿ ನೀತಿಯ ವಿರುದ್ದ ಕ್ರಮ ಜರುಗಿಸಲು ಒತ್ತಾಯಿಸಿ ವೀರ ಕನ್ನಡಿಗರ ಸೇನೆ ನಿಯೋಗ ಇಲ್ಲಿನ ಪ್ರಾದೇಶಿಕ ಆಯುಕ್ತರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಇಲ್ಲಿನ ಕುಲಪತಿ ಹುದ್ದೆ ಪಡೆದುಕೊಳ್ಳಲು ಹಾಗೂ ಇಲ್ಲಿನ ಹಿರಿಯ ಪ್ರಾಧ್ಯಪಕರ ಹುದ್ದೆ ಪಡೆದುಕೊಳಲು ದೂರ ಶಿಕ್ಷಣದ ಮೂಲಕ ಎರಡು ವರ್ಷ ಐದು ತಿಂಗಳಲ್ಲಿ ಪಡೆದುಕೊಂಡಿರುವ ಕೆ ಸಿ ವೀರಣ್ಣ ಅವರ ಪಿ ಎಚ್ ಡಿ ಪದವಿ ನಕಲಿಯಾಗಿದೆ ಈ ಕುರಿತು ತನಿಖೆ ಕೈಗೊಂಡು ಅವರ ವಿರುದ್ಧ ಕ್ರಮ ಜರುಗಿಸುವಂತೆ ತಮ್ಮ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಅಲ್ಲದೇ ಕಳೆದ ದಿನಾಂಕ 27-2-2026ರಂದು ಜರುಗಿದ ವಿಶ್ವ ವಿದ್ಯಾಲಯದ 15ನೇ ಘಾಟಿಕೋತ್ಸವದಲ್ಲಿ ಇಲಾಖೆ ಸಚಿವರು, ರಾಜ್ಯಪಾಲರ ಸಮ್ಮುಖದಲ್ಲಿ ಕನ್ನಡ ಭಾಷೆ ನಿಲ್ಲಿಸಿ, ಆಂಗ್ಲ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ ಕನ್ನಡ ವಿರೋಧಿ ಅವರ ನಿಲುವಿನ ಕುರಿತು ವೀರ ಕನ್ನಡಿಗರ ಸೇನೆ ಈಗಾಗಲೇ ಕನ್ನಡ ಪ್ರಾಧಿಕಾರದ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ಪ್ರಾಧಿಕಾರದ ಅಧ್ಯಕ್ಷರು ಇಲಾಖೆ ಸಚಿವರಿಗೆ ಬರೆದಿರುವ ಪತ್ರದಲ್ಲಿ ಕುಲಪತಿ ಕೆ ಸಿ ವೀರಣ್ಣ ಅÀವರ ವಿರುದ್ಧಧವೂ ಕ್ರಮ ಜರುಗಿಸಲು ಆದೇಶ ಮಾಡಿದರು ಸಹ ಪಶುಸಂಗೋಪನೆ ರೇಷ್ಮೆ ಸಚಿವರು ಯಾವುದೇ ಕ್ರಮ ಜರುಗಿಸದೇ ಇರುವುದು ಖಂಡಿಸುತ್ತೇವೆ.
ವಿಶ್ವ ವಿದ್ಯಾಲಯದ ಕುಲಸಚಿವರ ಮುಖಾಂತರ ರಾಜ್ಯಪಾಲರಿಗೆ ದೂರು ನೀಡಲಾಗಿದೆ ಆದರೇ ಆ ದೂರನ್ನು ಕುಲಸಚಿವರು ರಾಜ್ಯಪಾಲರಿಗೆ ಕಳಿಸದೆ ವಾಪಾಸ್ ಕೊಟ್ಟಿರುವುದು ಖಂಡಿನಿಯ, ಇಲ್ಲಿನ ಕೆ ಸಿ ವೀರಣ್ಣ ಹಾಗೂ ಪಿ ಟಿ ರಮೇಶ್ ರವರನ್ನು ಹುದ್ದೆಯಿಂದ ವಜಾಗಳಿಸಲು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷರಾದ ಅಮೃತ್ ಪಾಟೀಲ್ ಸಿರನೂರು, ರಾಜ್ಯ ಸಂಚಾಲಕರು ಸುಬ್ಬಣ್ಣ ಕರಕನಳ್ಳಿ ಮತ್ತು ಕಾರ್ಯ ಕರ್ತರ ಪ್ರಶಾಂತ ಬಾಚನಳ್ಳಿ ಈ ಸಂದರ್ಭದಲ್ಲಿ ಇದ್ದರು.