
ನವದೆಹಲಿ,ಫೆ.೭- ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಸುಂಕ ಸಮರ ಅಂತಿಮ ಹಂತಕ್ಕೆ ಬಂದಿದ್ದು ಅಮೆರಿಕಾ ಭಾರತೀಯ ಉತ್ಪನ್ನಗಳ ಮೇಲೆ ಶೇಕಡಾ ೧೮ ರಷ್ಟು ಸುಂಕ ಹಾಕಲು ಒಪ್ಪಿಕೊಂಡಿದ್ದು ಇದೀಗ ಅದರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಅಂತಿಮಗೊಳಿಸಿದೆ. ಇದರಿಂದ ಮತ್ತಷ್ಟು ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.
ಯಾವ ಯಾವ ಭಾರತೀಯ ಉತ್ಪನ್ನಗಳ ಮೇಲೆ ಸುಂಕ ವಿಧಿಸಲಾಗುತ್ತಿದೆ, ಎಷ್ಟು ಪ್ರಮಾಣದಲ್ಲಿರಲಿದೆ, ಯಾವಾಗಿನಿಂದ ಜಾರಿಯಾಗಲಿದೆ ಎನ್ನುವುದು ಸೇರಿದಂತೆ ಹಲವು ವಿಷಯಗಳು ಅಂತಿಮ ಒಪ್ಪಂದದ ಚೌಕಟ್ಟಿನಲ್ಲಿದೆ ಎಂದು ವಾಣಿಜ್ಯ ಸಚಿವಲಾಯ ಮಾಹಿತಿ ನೀಡಿದೆ.
ಭಾರತೀಯ ಉತ್ಪನ್ನಗಳ ಮೇಲೆ ಶೇಕಡಾ ೧೮ ರಷ್ಟು ಸುಂಕ ಇಳಿಕೆ ಮಾಡುವ ಅಮೆರಿಕಾದ ಕ್ರಮ ಮಧ್ಯಂತರ ವ್ಯಾಪಾರ ಒಪ್ಪಂದದ ಭಾಗವಾಗಿದೆ, ಈ ಹಿನ್ನೆಲೆಯಲ್ಲಿ ಚೌಕಟ್ಟು ಹಾಕಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ
ಭಾರತ ಮತ್ತು ಅಮೇರಿಕಾ ಅಂತಿಮವಾಗಿ ವ್ಯಾಪಾರ ಚೌಕಟ್ಟಿನ ಮೇಲೆ ಕೈಕುಲುಕಿವೆ, ವಿಶಾಲವಾದ ಅಮೇರಿಕಾ-ಭಾರತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಮತ್ತಷ್ಟು ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಲಾಗಿದೆ
ಮಧ್ಯಂತರ ಒಪ್ಪಂದ ಭಾರತದ ರಫ್ತುದಾರರಿಗೆ ಬಹುನಿರೀಕ್ಷಿತ ಪರಿಹಾರವನ್ನು ತರುತ್ತದೆ ಮತ್ತು ಹಲವಾರು ಕೈಗಾರಿಕೆಗಳಿಗೆ ಅವರು ಕೇಳುತ್ತಿರುವ ರೀತಿಯ ಬೆಂಬಲವನ್ನು ನೀಡುತ್ತದೆ.ಅಮೆರಿಕಾದ ಸುಂಕಗಳನ್ನು ಕಡಿತಗೊಳಿಸುತ್ತದೆ, ದಶಕಗಳಷ್ಟು ಹಳೆಯದಾದ ಮಾರುಕಟ್ಟೆ ಅಡೆತಡೆಗಳನ್ನು ತೆರವುಗೊಳಿಸುತ್ತದೆ, ಭಾರತೀಯ ಸರಕುಗಳಿಗೆ ಹೊಸ ಮಾರ್ಗ ತೆರೆಯುತ್ತದೆ ಮತ್ತು ಮುಖ್ಯವಾಗಿ, ಜಾಗತಿಕ ಪೂರೈಕೆ ಸರಪಳಿಗಳನ್ನು ಮರುವಿನ್ಯಾಸಗೊಳಿಸಲಾಗುತ್ತಿರುವ ಸಮಯದಲ್ಲಿ ಎರಡು ಆರ್ಥಿಕತೆ ಹತ್ತಿರಕ್ಕೆ ತರುತ್ತಿದೆ ಎಂದು ಹೇಳಿದ್ದಾರೆ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯೆ ನೀಡಿ ಭಾರತ- ಅಮೇರಿಕಾ ನಡುವಿನ ಈ ಒಪ್ಪಂದವನ್ನು “ಹೆಗ್ಗುರುತು ಚೌಕಟ್ಟು” ಎಂದು ಹೇಳಿದ್ದು ಇದು ಭಾರತೀಯ ರಫ್ತುದಾರರಿಗೆ ೩೦ ಟ್ರಿಲಿಯನ್ ಡಾಲರ್ ಮಾರುಕಟ್ಟೆ ತೆರೆಯುತ್ತದೆ ಮತ್ತು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದ್ಧಾರೆ
ಭಾರತಕ್ಕೆ ಪ್ರಮುಖ ಲಾಭಗಳು ಮತ್ತು ರಫ್ತುದಾರರು, ತಯಾರಕರು ಮತ್ತು ವಿಶಾಲ ಆರ್ಥಿಕತೆಗೆ ಏನನ್ನು ಅರ್ಥೈಸಬಲ್ಲವು ಎನ್ನುವುದನ್ನು ನಿರ್ಧರಿಸಲಿದೆ ಸುಂಕ ಇಳಿಕೆಯಿಂದ ಅವಕಾಶಗಳು ಮತ್ತಷ್ಟು ಹೆಚ್ಚಾಗಲಿವೆ ಎಂದಿದ್ದಾರೆ
ಈ ಮೊದಲು ಭಾರತೀಯ ರಫ್ತಿನ ಮೇಲಿನ ತನ್ನ ಪರಸ್ಪರ ಸುಂಕವನ್ನು ಶೇಕಡಾ ೧೮ ಕ್ಕೆ ಇಳಿಸುವುದರಿಂದ ಅತ್ಯಂತ ತಕ್ಷಣದ ಲಾಭವಾಗಿದೆ. ಇಲ್ಲಿಯವರೆಗೆ, ಭಾರತೀಯ ಸರಕುಗಳ ಅನೇಕ ವರ್ಗಗಳು ಶಿಕ್ಷಾರ್ಹ ಶೇಕಡಾ ೫೦ ಸುಂಕಕ್ಕೆ ವಿಧಿಸಲಾಗಿತ್ತು. ಸಾವಿರಾರು ಭಾರತೀಯ ವ್ಯವಹಾರಗಳನ್ನು ಬೆಲೆ ಇಳಿಸಿದ ಸುಂಕದಿಂದ ಜವಳಿ, ಉಡುಪು, ಚರ್ಮ, ಪಾದರಕ್ಷೆಗಳು, ಪ್ಲಾಸ್ಟಿಕ್‌ಗಳು, ಸಾವಯವ ರಾಸಾಯನಿಕಗಳು, ಗೃಹಾಲಂಕಾರ ಮತ್ತು ಕುಶಲಕರ್ಮಿ ಸರಕುಗಳಲ್ಲಿ ಭಾರತೀಯ ರಫ್ತುದಾರರನ್ನು ತಕ್ಷಣವೇ ಉತ್ತೇಜನ ಸಿಗಲಿದೆ ಎಂದಿದ್ದಾರೆ.
ಭಾರತದ ಕೆಲವು ವಿಮಾನಗಳ ಬಿಡಿ ಭಾಗಗಗಳ ಮೇಲಿನ ಸುಂಕಗಳನ್ನು ಅಮೆರಿಕಾ ತೆಗೆದುಹಾಕಿದ್ದು, ಎರಡೂ ದೇಶಗಳು ಆದ್ಯತೆ ಮಾರುಕಟ್ಟೆಯನ್ನು ಪ್ರವೇಶಿಸಲು ಬದ್ಧವಾಗಿದೆ ಎಂದು ತಿಳಿಸಿಲಾಗಿದೆ.
ಮುಂದಿನ ೫ ವರ್ಷಗಳಲ್ಲಿ ಭಾರತ ಅಮೆರಿಕಾದಿಂದ ೫೦೦ ಮಿಲಿಯನ್ ಡಾಲರ್ ಮೌಲ್ಯದ ಇಂಧನ ಉತ್ಪನ್ನ ವಿಮಾನ ಬಿಡಿಭಾಗ ಅಮೂಲ್ಯ ಲೋಹ ತಂತ್ರಜ್ಞಾನವನ್ನು ಮತ್ತು ಕಲ್ಲಿದ್ದಲು ಖರೀದಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮೇಕ್ ಇನ್ ಇಂಡಿಯಾ ಬಲವರ್ಧನೆ:ಮೋದಿ
ಅಮೆರಿಕದೊಂದಿಗಿನ ಮಧ್ಯಂತರ ವ್ಯಾಪಾರ ಒಪ್ಪಂದವು ರೈತರು ಮತ್ತು ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ತೆರೆಯುವ ಮೂಲಕ ’ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಬಲಪಡಿಸುತ್ತದೆ. ಮಹಿಳೆಯರು ಮತ್ತು ಯುವಜನತೆಗೆ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಬಲವಾದ ಸಂಬಂಧಗಳಿಗೆ ಅವರ ವೈಯಕ್ತಿಕ ಬದ್ಧತೆಗಾಗಿ ಪ್ರಧಾನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸಿದರು. ಭಾರತ ಮತ್ತು ಅಮೆರಿಕಕ್ಕೆ ಒಳ್ಳೆಯ ಸುದ್ದಿ! ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟಿನ ಕುರಿತು ನಾವು ಒಪ್ಪಿಕೊಂಡಿದ್ದೇವೆ ಎಂದು ಮೋದಿ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಚೌಕಟ್ಟು ಭಾರತ-ಅಮೆರಿಕ ಪಾಲುದಾರಿಕೆಯ ಬೆಳೆಯುತ್ತಿರುವ ಆಳ, ವಿಶ್ವಾಸ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.


























