ಲಕ್ಷ್ಮೇಶ್ವರ ಪಟ್ಟಣದಲ್ಲಿ ಆರ್. ಎ. ಎಫ್. ಮತ್ತು ಪೆÇಲೀಸರು ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ಸಿಪಿಐ ನಾಗರಾಜ್ ಮತ್ತು ಪಿಎಸ್‍ಐ ನಾಗರಾಜ್ ಗಡದ ಅವರ ನೇತೃತ್ವದಲ್ಲಿ ಸ್ಥಳೀಯ ಪೆÇಲೀಸರು ಮತ್ತು ಆರ್. ಎ. ಎಪ್. ನವರು ದೂದ್ ಪೀರಾಂ ದರ್ಗಾದಿಂದ ಹೊರಟು ಗದಗ ನಾಕಾ ಹೊಸ ಬಸ್ ನಿಲ್ದಾಣ ಶಿಗ್ಲಿ ಕ್ರಾಸ್, ಭಾನು ಮಾರ್ಕೆಟ್ ವಿದ್ಯಾರಣ್ಯ ವೃತ್ತ ಸೇರಿದಂತೆ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಪಥಸಂಚಲನ ನಡೆಸಿದರು.