ನವಲಗುಂದ,ಜೂ.೩೦: ತಾಲ್ಲೂಕಿನ ಕಾಲವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗೋವಿಂದರಡ್ಡಿ ಯ ಮಣ್ಣೆನವರ ಹಾಗೂ ಉಪಾಧ್ಯಕ್ಷರಾಗಿ ರುದಪ್ಪ ವೀ ಲಕ್ಕುಂಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ನೂತನ ಅಧ್ಯಕ್ಷ ಗೋವಿಂದರೆಡ್ಡಿ ಮಣ್ಣೆನವರ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ಸಹಕಾರದಿಂದ ನಾನೀಗ ಸಂಘದ ಅಧ್ಯಕ್ಷನಾಗಿದ್ದೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಹೇಳಿದರು.
ಗೋವಿಂದರಡ್ಡಿ ಯ ಮಣ್ಣೆನವರ, ರುದ್ರಪ್ಪ ವೀ ಲಕ್ಕುಂಡಿ, ಶಿವಾನಂದ ಅ ಬಾಡಗಿ, ಚನ್ನಯ್ಯ ಶಿ ಮಠಪತಿ, ನಿಂಗನಗೌಡ ವೀ ಹಿರೇಗೌಡ್ರ, ಸಂಜೀವರಡ್ಡಿ ಬ ಬಾಡಗಿ, ಬಸವರಡ್ಡಿ ರಾ ಲಿಂಗರಡ್ಡಿ, ಶಿವಪ್ಪ ಮಾ ಲಕ್ಕುಂಡಿ, ಹನಮಂತಪ್ಪ ಯ ಹಲಗಿ ಉರ್ಪ ಮಾದರ, ಯಲ್ಲವ್ವ ಮ ತೆಗ್ಗಿನಕೇರಿ, ನೀಲವ್ವ ಬ ಮಳಗೌಡ್ರ ಸಂಘದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಸಂಘದ ಉಪಾಧ್ಯಕ್ಷರನ್ನು, ನಿರ್ದೇಶಕರು ಹಾಗೂ ಸಿಬ್ಬಂದಿಗಳು ಸನ್ಮಾನಿಸಿ, ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ರಿಟರ್ನಿಂಗ ಅಧಿಕಾರಿ ಶ್ರೀದೇವಿ ಶಂ ಕುಲಕರ್ಣಿ ಕಾರ್ಯನಿರ್ವಹಿಸಿದರು ಮತ್ತು ಸಂಘದ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಆರ್ ಜಿ ಕಟಾವಕರ ಹಾಗೂ ಮುಖ್ಯಕಾರ್ಯನಿರ್ವಹಕರಾದ ಬಿ ಕೆ ಸೋಮಾಪೂರ ಅವರು ಉಪಸ್ಥಿತರಿದ್ದರು.