Home ಜಿಲ್ಲೆ ಬೆಂಗಳೂರು ಯುಗಾದಿ- ರಂಜಾನ್ ದಿನಸಿ ಕಿಟ್ ವಿತರಣೆ

ಯುಗಾದಿ- ರಂಜಾನ್ ದಿನಸಿ ಕಿಟ್ ವಿತರಣೆ

ಮಾಲೂರು ಮಾ ೧೮: ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮಾಜಿ ಶಾಸಕ ಕೆಎಸ್ ಮಂಜುನಾಥ್ ಗೌಡ ಅಭಿಮಾನಿಗಳ ವತಿಯಿಂದ ಹಿಂದೂ ಮುಸ್ಲಿಂ ಭಾಂದವರಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.


ಮಾಲೂರು ನಗರದ ಇಂದಿರಾ ನಗರದಲ್ಲಿ ಮಾಜಿ ಶಾಸಕ ಮಂಜುನಾಥ್ ಗೌಡ ರವರ ಅಭಿಮಾನಿ ನರೇಂದ್ರ ಬಾಬು ಅವರು ಇಂದಿರಾ ನಗರದ ನಿವಾಸಿಗಳಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಟಿಬಿ ಕೃಷ್ಣಪ್ಪ ನೇತೃತ್ವದಲ್ಲಿ ಸೋಮವಾರ ರಾತ್ರಿ ಸುಮಾರು ಎರಡು ಸಾವಿರ ದಿನಸಿ ಕಿಟ್‌ಗಳು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಮುಖಂಡರಾದ ಸಿ ನರೇಂದ್ರ ಬಾಬು, ಬಿಜೆಪಿ ನಗರ ಅಧ್ಯಕ್ಷ ಆಟೋ ಮೋಬೈಲ್ ನಂದೀಶ್, ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬೆಳ್ಳಾವಿ ಸೋಮಣ್ಣ, ಎಸ್ಟಿ ಮೋರ್ಚಾ ಅಧ್ಯಕ್ಷ ವಾಟರ್ ನಾರಯಣಸ್ವಾಮಿ, ಕೇಬಲ್ ವಿಜಯ್ ಕುಮಾರ್, ಮಾಕೃ ಸುರೇಶ್, ಇತರರು ಹಾಜರಿದ್ದರು.