Home ಜಿಲ್ಲೆ ಕಲಬುರಗಿ ದೇಸಿ ಸಂಸ್ಕøತಿಗೆ ಯುಗಾದಿ ಪ್ರೇರಣೆ

ದೇಸಿ ಸಂಸ್ಕøತಿಗೆ ಯುಗಾದಿ ಪ್ರೇರಣೆ

ಕಲಬುರಗಿ. ಮಾ. 18: ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಜೀವನವನ್ನು ನಡೆಸುತ್ತಿರುವ ಹಿಂದಿನ ಸಮಾಜದಲ್ಲಿ ಹಬ್ಬಗಳು ಮರೆಯಾಗುತ್ತಿವೆ. ಯುಗಾದಿ ಹಬ್ಬವೆಂದರೆ ಯುಗದ ಆರಂಭ ಎಂದರ್ಥ. ಯುಗಾದಿ ಹಬ್ಬವು ನಮ್ಮ ದೇಸಿ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ ಎಂದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಕಲಬುರ್ಗಿ ನಗರದ ಹೊರವಲಯದ ಉದನೂರನಲ್ಲಿರುವ ಅಪ್ಪಾಜಿ ಗುರುಕುಲ ಶಾಲೆಯಲ್ಲಿ ಏರ್ಪಡಿಸಿದ್ದ ಯುಗಾದಿ -2026 ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಅವರು, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಹಬ್ಬಗಳನ್ನು ಆಚರಿಸುತ್ತಿರುವುದು ವಿಶೇಷವಾಗಿದೆ ಕಲಬುರಗಿ ಶೈಕ್ಷಣಿಕ ವಲಯದಲ್ಲಿ ಅಪ್ಪಾಜಿ ಗುರುಕುಲ ಶಾಲೆಯ ಶಿಕ್ಷಕರ ಮತ್ತು ಸಂಸ್ಥಾಪಕರ ಕಾರ್ಯ ಅನನ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಆರೋಗ್ಯ ಅಧಿಕಾರಿ ಡಾ. ವೇಣುಗೋಪಾಲ ದೇಶಪಾಂಡೆಯವರು, ವಿದ್ಯಾರ್ಥಿಗಳಲ್ಲಿ ರಾಷ್ಟ್ರಗೀತೆ ನಾಡಗೀತೆಯ ಮಹತ್ವ ತಿಳಿಸುವುದು ಇಂದಿನ ಶಿಕ್ಷಕರ ಮತ್ತು ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅಪ್ಪಾಜಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ರಾಜಕುಮಾರ ಬಿ. ಉದನೂರ ಅವರು, ಮಕ್ಕಳಲ್ಲಿ ಯುಗಾದಿ ಸೇರಿದಂತೆ ಎಲ್ಲಾ ಹಬ್ಬಗಳ ಮಹತ್ವಗಳನ್ನು ತಿಳಿಸುವದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಯೋಗ ಶಿಕ್ಷಕರಾದ ಡಿ.ಎಸ್ ಬಿರಾದರ್ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ನಿಂಗಮ್ಮ ಲೇಂಗಟಿ ಅಪ್ಪಾಜಿ ಗುರುಗಳ ಶಾಲೆಯ ಮುಖ್ಯಸ್ಥೆ ಭಾಗಮ್ಮ ಆರ್ ಉದನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಅವರಿಂದ ಆಶ್ರಮಂಜರಿ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.