Home ಮುಖಪುಟ ಸುದ್ದಿ ಪಶ್ಚಿಮ ಏಷ್ಯಾದಲ್ಲಿ ನಿಲ್ಲದ ಸಂಘರ್ಷ: ದಾಳಿ-ಪ್ರತಿದಾಳಿ

ಪಶ್ಚಿಮ ಏಷ್ಯಾದಲ್ಲಿ ನಿಲ್ಲದ ಸಂಘರ್ಷ: ದಾಳಿ-ಪ್ರತಿದಾಳಿ

ವಾಷಿಂಗ್ಟನ್, ಮಾ,೨೦- ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ೨೧ನೇ ದಿನಕ್ಕೆ ಕಾಲಿಟ್ಟಿದ್ದು ಎರಡೂ ಕಡೆ ದಾಳಿ ಪ್ರತಿದಾಳಿ ನಡೆಯುತ್ತಿದೆ, ಈ ನಡುವೆ ಇರಾನ್‌ನ ಅನಿಲ ಕ್ಷೇತ್ರಗಳ ಮೇಲೆ ದಾಳಿ ಮಾಡಬೇಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಹೇಳಿದ್ದಾರೆ.

ಇರಾನ್‌ನ ಸೌತ್ ಪಾರ್ಸ್ ಅನಿಲ ಘಟಕಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯ ಬಗ್ಗೆ ತನಗೆ “ಏನೂ ತಿಳಿದಿಲ್ಲ” ಎಂದು ಹೇಳಿರುವ ಅವರು ಮುಂದೆ ಇರಾನ್‌ನ ಅನಿಲ ಸ್ಥಾವರದ ಮೇಲೆ ದಾಳಿ ಮಾಡದಂತೆ ಸೂಚಿಸಲಾಗಿದೆ ಎಂದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್ , ಸುಮಾರು ಮೂರು ವಾರಗಳ ಯುದ್ಧದಿಂದ ಈಗಾಗಲೇ ಜಾಗತಿಕ ತೈಲ ಬೆಲೆಗಳನ್ನು ಹೆಚ್ಚಿಸಿರುವುದರಿಂದ, ಇರಾನ್‌ನ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡುವುದರಿಂದ ಅಮೆರಿಕ ಹಿಂದೆ ಸರಿದಿದೆ ಎಂದು ಹೇಳಿದ್ದಾರೆ.

ಕತಾರ್ ಇಂಧನ ತಾಣಗಳ ಮೇಲೆ ಇಸ್ರೇಲ್ ದಾಳಿ ಮಾಡುವ ಮೂಲಕ ದಾಳಿಗೆ ಪ್ರತೀಕಾರ ತೀರಿಸಿಕೊಂಡಿದೆ, ಆದರೆ ಇರಾನ್ ತೈಲ ಘಟಕದ ಮೇಲೆ ದಾಳಿ ಮಾಡದಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವ ಇಂಧನ ಮಾರುಕಟ್ಟೆಗಳನ್ನು ಅಲುಗಾಡಿಸಿದ ದಾಳಿಯಿಂದ ದೂರವಿರಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಸೂಚಿಸಲಾಗಿದೆ, ಇನ್ನು ಮುಂದೆ ಯಾವುದೇ ಇರಾನಿನ ಅನಿಲ ಕ್ಷೇತ್ರಗಳ ಮೇಲೆ ದಾಳಿ ಮಾಡಬೇಡಿ ಎಂದು ಹೇಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

ಇರಾನ್‌ನ ಅನಿಲ ಕ್ಷೇತ್ರಗಳ ಮೇಲೆ ದಾಳಿ ಮಾಡುವ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೀರಾ ಎನ್ನುವ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಇರಾನ್ ತೈಲ ಘಟಕ ಗುರಿಯಾಗಿಸಿಕೊಂಡು ದಾಳಿ ಮಾಡದಂತೆ ಸೂಚಿಸಲಾಗಿದೆ, ಹೀಗಾಗಲೇ ಜಗತ್ತಿನ ಹಲವು ದೇಶಗಳು ತೈಲ ಸಮಸ್ಯೆ ಎದುರಿಸುತ್ತಿವೆ ಎಂದಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಜೊತೆಯಾಗಿ ದಾಳಿ ಮಾಡುತ್ತಿವೆ, ಒಮ್ಮೊಮ್ಮೆ ಇಸ್ರೇಲ್ ಪ್ರತ್ಯೇಕವಾಗಿ ದಾಳಿ ಮಾಡಿದರೆ ಅದು ನಮಗೆ ಇಷ್ಟವಿಲ್ಲ ಇದನ್ನು ಅವರಿಗೆ ತಿಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇರಾನ್ ಕತಾರ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸದಿದ್ದರೆ ಅಮೆರಿಕ ದಕ್ಷಿಣ ಪಾರ್ಸ್ ಕ್ಷೇತ್ರವನ್ನು “ಬೃಹತ್ ಪ್ರಮಾಣದಲ್ಲಿ ಸ್ಫೋಟಿಸುತ್ತದೆ” ಎಂದು ಇದೇ ವೇಳೆ ಇರಾನ್‌ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇಸ್ರೇಲ್ , ಇರಾನ್ ಮೇಲೆ ದಾಳಿ ಮಾಡುವುದು ಅಮೇರಿಕಾಗೆ ಗೊತ್ತಿದ್ದರೂ ಅಮೆರಿಕ ಸುಮ್ಮನಿತ್ತು , ಆದರೆ ಈ ದಾಳಿಯಲ್ಲಿ ಅಮೇರಿಕಾ ಭಾಗಿಯಾಗಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.