Home ಜಿಲ್ಲೆ ಪರಿಸರ ಜಾಗೃತಿ ಕಾರ್ಯಕ್ರಮ

ಪರಿಸರ ಜಾಗೃತಿ ಕಾರ್ಯಕ್ರಮ


ನವಲಗುಂದ,ಜೂ.೭: ಪ್ರತಿ ಮಗು ಪ್ರತಿ ವರ್ಷ ಹುಟ್ಟು ಹಬ್ಬ ಆಚರಿಸುವ ಸಂದರ್ಭದಲ್ಲಿ ಗಿಡ ನೆಟ್ಟು ಬೆಳೆಸಬೇಕು ಎಂದು ಬೆಳವಟಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್ ಎಂ ಐರಾಣಿ ಹೇಳಿದರು.
ಅವರು ಬೆಳವಟಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ರಿ ನವಲಗುಂದ ವತಿಯಿಂದ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಯೋಜನಾಧಿಕಾರಿ ದಿನೇಶ್ ಶೇರಿಗಾರ ಮಾತನಾಡಿ ವಿಶ್ವ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗಬಾರದು ಪ್ರತಿದಿನವೂ ಕೂಡ ಪರಿಸರವನ್ನು ನಾವು ನಮ್ಮನ್ನು ಪರಿಸರ ಕಾಪಾಡುತ್ತಿದೆ ಪ್ರತಿದಿನ ಶುದ್ಧವಾದ ಗಾಳಿ ನೀರು ನಮಗೆ ಸಿಗುತ್ತದೆ ಪರಿಸರಕ್ಕೆ ಮಾನವನ ಅವಶ್ಯಕತೆ ಇಲ್ಲ ಆದರೆ ಮಾನವನಿಗೆ ಪರಿಸರದ ಅಗತ್ಯವಿದೆ ಎಂದರು.


ಇದೆ ವೇಳೆ ಪರಿಸರ ದಿನಾಚರಣೆಯ ಅಂಗವಾಗಿ ಪ್ರಬಂಧ ಸ್ಪರ್ಧೆ ಚಿತ್ರಕಲಾ ಸ್ಪರ್ಧೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ಮಕ್ಕಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು
ಶಾಲೆ ಪ್ರಧಾನಗುರು ಪಿ.ಎಸ್.ಬಿಡನಾಳ ಅಧ್ಯಕ್ಷತೆ ವಹಿಸಿದ್ದರು. ಜಗದೀಶ್ ಬ್ಯಾಳಿ, ಪಿ . ಸಿ ಸೂರಪ್ಪನವರ, ಸುಲೇಮಾನ್ ಧಾರವಾಡ, ರೇಣುಕಾ ಕಮ್ಮಾರ, ರೇಣುಕಮ್ಮ ಹಾಗೂ ತಾಲೂಕಿನ ಕೃಷಿ ಮೇಲ್ವಿಚಾರಕ ತೋಟಯ್ಯ ಬಳಗಾನೂರಮಠ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದರು .