Home ಜಿಲ್ಲೆ ಕಾಂಗ್ರೆಸ್‍ಗೆ ನಾರಿ ಶಕ್ತಿಯ ಶಾಪ ತಟ್ಟದೆ ಬಿಡದು: ಭಗವಂತ ಖೂಬಾ

ಕಾಂಗ್ರೆಸ್‍ಗೆ ನಾರಿ ಶಕ್ತಿಯ ಶಾಪ ತಟ್ಟದೆ ಬಿಡದು: ಭಗವಂತ ಖೂಬಾ

ಬೀದರ್:ಏ.20: ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೆಯಕಕ್ಕೆ ವಿರೋಧ ವ್ಯಕ್ತಪಡಿಸಿ ಅದು ಜಾರಿಯಾಗದೇ ಇರಲು ಮುಖ್ಯ ಕಾರಣವಾಗಿದ್ದು, ಇದರಿಂದ ನಾರಿ ಶಕ್ತಿಯ ಶ್ರಾಪ ಕೈ ನಾಯಕರಿಗೆ ಖಂಡಿತ ತಟ್ಟಲಿದೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.
ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರ ಕಾಲದಲ್ಲಿ ಅಕ್ಕ ಮಹಾದೇವಿ, ಅಕ್ಕ ನಾಗಮ್ಮ, ಆಯ್ದಕ್ಕಿ ಲಕ್ಕಮ್ಮ, ಕಲ್ಯಾಣಮ್ಮ ಸೇರಿದಂತೆ 50 ಪ್ರತಿಶತದಷ್ಟು ಶಿವಶರಣೆಯರು ಅನುಭವ ಮಂಟಪದ ಭಾಗವಾಗಿರುವ ಈ ದೇಶದಲ್ಲಿ 800 ವರ್ಷಗಳ ಬಳಿಕ ಈ ದೇಶದಲ್ಲಿ ದೇಶವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಕಾರಣಿಕರ್ತರಾದ ಮಹಿಳಾ ಲೋಕಕ್ಕೆ ಅವಮಾನ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಬರುವ ವರ್ಷಗಲಲ್ಲಿ ಒಳ್ಳೆಯ ಪಾಠ ಕಲಿಸಲಿದ್ದಾರೆ ಎಂದರು.
ಮಹಿಳಾ ಮೀಸಲಾತಿ ವಿಧೆಯಕದಿಂದ ದಕ್ಷಿಣದ ರಾಜ್ಯಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ಕ್ಷೇತ್ರ ಪುನರ್ ವಿಂಗಡಣೆಯಿಂದ ಕರ್ನಾಟಕದಲ್ಲಿ ಪರಿಶಿಷ್ಟರಿಗೆ ಈಗಿರುವ ಲೋಕಸಭೆಯ 9 ಸ್ಥಾನಗಳಿ ಬದಲು, 11, ಒಟ್ಟು 28ರ ಬದಲು 42 ಸ್ಥಾನಗಳು ಹೆಚ್ಚಾಗಿ ಮಹಿಳೆಯರಿಗೂ ಸ್ಥಾನ ಕಲ್ಪಿಸಲು ಸಾಧ್ಯವಾಗುತ್ತಿತ್ತು. ಇದರಿಂದ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನಾಂಗದವರಿಗೂ ವಿಶೇಷವಾಗಿ ಇದನ್ನು ಮಹಿಳಾ ಮಣಿಯರಿಗೆ ಮಾಡಿದ ಮಹಾದ್ರೋಹ ಎಂದರು.
ಫಸಲು ವಿಮೆ ಬಗ್ಗೆ ಮಾತನಾಡಿರುವ ಮಾಜಿ ಕೇಂದ್ರ ಸಚಿವರು ಜಿಲ್ಲಾ ಉಸ್ತುವಾರಿ ಸಚಿವ ಖಂಡ್ರೆಯವರು ಫಸಲು ವಿಮೆ ಹಣ ಬಂದಿಲ್ಲ ಎಂದು ಆಪಾದಿಸಿದ್ದರು. ಆದರೆ ನಮ್ಮ ಕೇಂದ್ರ ಸರ್ಕಾರವು 1 ಲಕ್ಷ 60 ಸಾವಿರ ರೈತರಿಗೆ 100 ಕೋಟಿ 66 ಲಕ್ಷ ಫಸಲು ವಿಮೆ ಹಣ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಉಲ್ಲಾಸಿನಿ ಮುದಾಳೆ ಮಾತನಾಡಿ, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿಯವರು ನಾರಿಶಕ್ತಿಯನ್ನು ಸದಾ ಗೌರವಿಸುತ್ತಾರೆ. ಹಾಗಾಗಿ ಮಹಿಳಾ ಮೀಸಲಾತಿ ವಿಧೆಯಕ ಜಾರಿಗೆ ತರಲು ಸಂಸತ್ತಿನಲ್ಲಿ ಪ್ರಯತ್ನಿಸಿದರು. ಧರ್ಮದ ಮೇಲೆ ಹಾಗೂ ಜಾತಿ ಜಾತಿಗಳ ನಡುವೆ ಸದಾ ವಿಶ ಬೀಜ ಬಿತ್ತುವ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಈ ವಿಧೆಯಕವನ್ನು ವಿರೋಧಿಸುವ ಮೂಖೇನ ಇಡೀ ಮಹಿಳಾ ಲೋಕಕಕ್ಕೆ ಅವಮಾನ ಮಾಡಿದ್ದಾರೆ. ಇದನ್ನು ನಾರಿಶಕ್ತಿ ಸಹಿಸದು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ನಾಯಕರ ಮನೆ ಮುಂದೆ ಇಡೀ ಮಹಿಳಾ ಸಮೂಹ ಪ್ರತಿಭಟಿಸಲಿದೆ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷ ಸದಾ ನಮ್ಮನ್ನು ಮನುವಾದಿಗಳು, ಕೋಮುವಾದಿಗಳು ಎಂದು ಕರೆಯುವ ಇವರು ಮಹಿಳಾ ಮೀಸಲಾತಿ ಮಸುದೆಯನ್ನು ವಿರೋಧಿಸಿ ತಾವೆ ಕೋಮುವಾದಿಗಳು, ಮಹಿಳಾ ವಿರೋಧಿಗಳು ಎಂಬುದನ್ನು ಸಾಬಿತು ಮಾಡಿದ್ದಾರೆ. ಬರುವಂತಹ ದಿನಗಳಲ್ಲಿ ಕಾಂಗ್ರೆಸ್‍ನವರಿಗೆ ಜನ ತಕ್ಕ ಪಾಠ ಕಲಿಸದೆ ಬಿಡುವುದಿಲ್ಲ. ರಾಜ್ಯ ಸರ್ಕಾರ ಕಬ್ಬು ಸಾಗಿಸಿದ ರೈತರ ನಿಗದಿಪಡಿಸಿದ ಹಣ ರು.2800 ಇನ್ನು ಸಹ ಕೊಡಿಸದೇ ಅನ್ನಂiÀi ಮಾಡಿದ್ದಾರೆ ಎಂದರು.
ಹಿರಿಯ ಮುಖಂಡರಾದ ಗುರುನಾಥ ಜ್ಯಾಂತಿಕರ್, ಮಹಾನಗರ ಪಾಲಿಕೆ ಸದಸ್ಯರಾದ ಶಶಿಧರ ಹೊಸಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಮಹಿಳಾ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ವಿಜಯಲಕ್ಷ್ಮೀ ಕೌಟಗೆ, ಕಾರ್ಯದರ್ಶಿ ಲುಂಬಿಣಿ ಗೌತಮ, ಮಾಧ್ಯಮ ವಿಭಾಗದ ಶ್ರೀನಿವಾಸ ಚೌಧರಿ, ಎಸ್.ಟಿ ಘಟಕದ ಪ್ರ.ಕಾರ್ಯದರ್ಶಿ ಅರುಣ ಬಾವಗೆ ಪತ್ರಿಕಾಗೋಷ್ಟಿಯಲ್ಲಿದ್ದರು.