Home ಕ್ರೈಂ ಸುದ್ದಿಗಳು ಜಮಖಂಡಿ ಬಳಿ ಭೀಕರ ಅಪಘಾತ : ಹಳ್ಳಕ್ಕೆ ಉರುಳಿದ ಟ್ರ್ಯಾಕ್ಟರ್-ಪೇವರ್ ವಾಹನ, ಚಾಲಕ ಸ್ಥಳದಲ್ಲೇ ಸಾವು

ಜಮಖಂಡಿ ಬಳಿ ಭೀಕರ ಅಪಘಾತ : ಹಳ್ಳಕ್ಕೆ ಉರುಳಿದ ಟ್ರ್ಯಾಕ್ಟರ್-ಪೇವರ್ ವಾಹನ, ಚಾಲಕ ಸ್ಥಳದಲ್ಲೇ ಸಾವು

ಜಮಖಂಡಿ : ಮೇ 13: ನಗರದ ಹೊರವಲಯದ ಮುದೋಳ ಹೆದ್ದಾರಿಯ ಕೆಟ್ಟೆ ಕೆರೆ ಸಮೀಪ ಭೀಕರ ಅಪಘಾತ ಸಂಭವಿಸಿ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಡಾಂಬರ ರಸ್ತೆ ತಯಾರಿಸುವ ಪೇವರ್ ವಾಹನವನ್ನು ಎಳೆದುಕೊಂಡು ಮುದೋಳ ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಸಮೇತ ವಾಹನ ಹಳ್ಳಕ್ಕೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಮೃತಪಟ್ಟ ಚಾಲಕನನ್ನು ವಿಜಯಪುರ ಜಿಲ್ಲೆಯ ಶಿರನಾಳ ಗ್ರಾಮದ 28 ವರ್ಷದ ಬಂದೆನವಾಜ್ ಲಾಲಸಾಬ್ ಶೇಖ್ ಎಂದು ಗುರುತಿಸಲಾಗಿದೆ. ಅವರು ರಾಜೆಸಾಬ್ ಜಾತಗಾರ ಅವರ ಟ್ರ್ಯಾಕ್ಟರ್‍ನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮುದೋಳ ನಗರದ ಅಮರ ಪಾಟೀಲ ಅವರಿಗೆ ಸೇರಿದ ಡಾಂಬರ ಪೇವರ್ ವಾಹನವನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸುದ್ದಿ ತಿಳಿದ ತಕ್ಷಣ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸೈ ಅನೀಲ ಕುಂಬಾರ, ಗಂಗಾಧರ ಪೂಜೇರಿ ಹಾಗೂ ಪೆÇಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಮೃತದೇಹವನ್ನು ಹೊರತೆಗೆದು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.