Home ಜಿಲ್ಲೆ ನೀಟ್ ಪರೀಕ್ಷೆ ರದ್ದು: ನಾಚಿಕೆಗೇಡು ಸಂಗತಿ: ಡಾ. ಅಬ್ದುಲ್ ಖದೀರ್

ನೀಟ್ ಪರೀಕ್ಷೆ ರದ್ದು: ನಾಚಿಕೆಗೇಡು ಸಂಗತಿ: ಡಾ. ಅಬ್ದುಲ್ ಖದೀರ್

ಬೀದರ್: ಮೇ.13:ಪರೀಕ್ಷೆ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ನೀಟ್ ಯುಜಿ 2026 ಪರೀಕ್ಷೆಯನ್ನು
ರದ್ದುಪಡಿಸಿರುವುದು ದೇಶದ ಶಿಕ್ಷಣ ವ್ಯವಸ್ಥೆಗೆ ಅತ್ಯಂತ ನಾಚಿಕೆಗೇಡು ಸಂಗತಿ ಎಂದು
ಶಿಕ್ಷಣ ತಜ್ಞರೂ ಆದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್
ಖದೀರ್ ಪ್ರತಿಕ್ರಿಯಿಸಿದ್ದಾರೆ.
ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ಘೋಷಿಸಿರುವುದು ವರ್ಷವಿಡೀ ಪರಿಶ್ರಮ ಪಟ್ಟು
ಸಿದ್ಧತೆ ನಡೆಸಿದ್ದ ಲಕ್ಷಾಂತರ ವಿದ್ಯರ್ಥಿಗಳು ಹಾಗೂ ಪೆÇೀಷಕರಲ್ಲಿ ತೀವ್ರ ನಿರಾಶೆ,
ಅನಿಶ್ಚಿತತೆ ಹಾಗೂ ಮಾನಸಿಕ ಒತ್ತಡ ಉಂಟು ಮಾಡಿದೆ ಎಂದು ಅವರು
ಅಭಿಪ್ರಾಯಪಟ್ಟಿದ್ದಾರೆ.
ನಡೆದಿರುವ ಘಟನೆ ಅತ್ಯಂತ ದುರದೃಷ್ಟಕರವಾಗಿದೆ. ಇದು, ಪ್ರಾಮಾಣಿಕ ವಿದ್ಯರ್ಥಿಗಳ
ಕನಸುಗಳನ್ನು ಭಗ್ನಗೊಳಿಸಿದೆ ಎಂದು ಹೇಳಿದ್ದಾರೆ.
ವಿದ್ಯರ್ಥಿಗಳ ಭವಿಷ್ಯದ ಜತೆ ಯಾರೂ ಚೆಲ್ಲಾಟ ಆಡಬಾರದು. ಪ್ರಕರಣಕ್ಕೆ ಕಾರಣರಾದವರ
ವಿರುದ್ಧ ರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ
ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮರು ಪರೀಕ್ಷೆ ಸಿದ್ಧತೆಗೆ ನೆರವು:
ಈ ಸಂಕಷ್ಟದ ಸಮಯದಲ್ಲಿ ವಿದ್ಯರ್ಥಿಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಶಾಹೀನ್
ಶಿಕ್ಷಣ ಸಂಸ್ಥೆಗಳ ಸಮೂಹವು ದೇಶದಾದ್ಯಂತ ಇರುವ ತನ್ನ ಎಲ್ಲ ಕೇಂದ್ರಗಳ ಹಾಗೂ
ಆನ್‍ಲೈನ್ ವೇದಿಕೆಗಳ ಮೂಲಕ ನೀಟ್ ಮರು ಪರೀಕ್ಷೆ ತಯಾರಿಗೆ ಉಚಿತ ನೆರವು ನೀಡುವ ಘೋಷಣೆ
ಮಾಡಿದೆ.
ಉಚಿತ ಸಹಾಯ ಕರ್ಯಕ್ರಮವು ಪುನರಾರ್ತನೆ ತರಗತಿಗಳು, ಮಾಕ್ ಟೆಸ್ಟ್‍ಗಳು, ಸಂದೇಹ
ನಿವಾರಣಾ ತರಗತಿಗಳು, ಪರಿಣಿತ ನೀಟ್ ಅಧ್ಯಾಪಕರಿಂದ ಮರ್ಗರ್ಶನ ಹಾಗೂ ಮೆಂಟರಿಂಗ್
ಒಳಗೊಂಡಿದೆ.
ನೀಟ್ ಮರು ಪರೀಕ್ಷೆ ತಯಾರಿಗೆ ಉಚಿತ ಸಹಾಯ ಪಡೆಯಲು ಆಸಕ್ತ ವಿದ್ಯರ್ಥಿಗಳು
https://shaheengroup.org/neet-re-exam-coaching/ ಲಿಂಕ್
ಮೂಲಕ ತಮ್ಮ ಹೆಸರು ನೋಂದಾಯಿಸಬಹುದು ಎಂದು ತಿಳಿಸಿದ್ದಾರೆ.