Home ಜಿಲ್ಲೆ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನ

ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನ

ಬೀದರ:ಮೇ.13:ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (ಈPಂI) ಬೀದರ ಶಾಖೆ ಬೀದರನ ಶಿವನಗರದಲ್ಲಿರುವ ದಿ ಮಿಲೇನಿಯಂ ಗ್ರೂಪ್ ಆಪ್ ಇನ್ಸ್ಟಿಟ್ಯೂಷನ್ ನರ್ಸಿಂಗ್ ಕಾಲೇಜಿನಲ್ಲಿ “ಅಂತರಾಷ್ಟ್ರೀಯ ಶುಶ್ರೂಕಿಯರ ದಿನ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಪಾಟೀಲ್ ಇವರು ಶುಶ್ರೂಕಿಯರು ಆರೋಗ್ಯ ಸಂಸ್ಥೆಯ ಬೆನ್ನೆಲುಬು. ಅವರ ಸೇವೆ ಅಪಾರ ಎಂದು ತಿಳಿಸಿ, ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ಎಲ್ಲ ದಾದಿಯರಿಗೆ ಶುಭಾಷಯ ಕೋರಿದರು.

ಈPಂI ಕೇಂದ್ರ ಕಛೇರಿಯ ಮಾಜಿ ಖಜಾಂಚಿಗಳಾದ ಡಾ. ಆರತಿ ರಘು ಇವರು ಶುಶ್ರೂಕಿಯರ ಸೇವೆ ಆರೋಗ್ಯ ಕ್ಷೇತ್ರದಲ್ಲಿ ಬಹು ಮಹತ್ವದಾಗಿದೆ ಎಂದು ತಿಳಿಸಿ, ಶುಭ ಕೋರಿದರು. ಹಾಗೂ “ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ/ಮುಂಜಾಗೃತಿ ವಹಿಸದೆ ಇರುವುದರಿಂದ ನಾನಾ ತರಹದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ವಿಶೇಷವಾಗಿ ಮಹಿಳೆಯರಲ್ಲಿ ಸ್ಥನ ಕ್ಯಾನ್ಷರ್ ಹಾಗೂ ಗರ್ಭಕೋಶ ಕಂಠದ ಕ್ಯಾನ್ಷರ್ ಹೆಚ್ಚಾಗಿ ಕಂಡುಬರುತ್ತಿದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್‍ನಿಂದ ಗುಣಮುಖರಾಗಬಹುದು ಎಂದು ತಿಳಿಸಿದರು. ಕ್ಯಾನ್ಸರ್ ಎಂದರೇನು? ಅದರ ಲಕ್ಷಣಗಳು, ಅದಕ್ಕೆ ಚಿಕಿತ್ಸೆ, ಮುಂಜಾಗೃತಾ ಕ್ರಮಗಳ ಕುರಿತು ವಿವರಿಸಿ ತಿಳಿಸಿದರು. ಕ್ಯಾನ್ಸರ್ ರೋಗದ ಬಗ್ಗೆ ಪ್ರತಿಯೊಬ್ಬರು ಅರಿವು-ಮಾಹಿತಿ ಪಡೆಯುವುದು ಹಾಗೂ ಮುಂಜಾಗೃತೆ ವಹಿಸುವುದು ತುಂಬಾ ಮುಖ್ಯವಾಗಿದೆ ಹಾಗೂ ಕ್ಯಾನ್ಸರ್ ರೋಗ ತಡೆಗಟ್ಟುª ಸಲುವಾಗಿ 13 ರಿಂದ 26 ವರ್ಷದ ಒಳಗಿನ ಯುವತಿಯರು ಊPಗಿ ಲಸಿಕೆ ಪಡೆಯಬೇಕು ಹಾಗೂ ತಾವೂ ಕೂಡ ಇತರರಿಗೆ ಈ ಮಾಹಿತಿ ತಿಳಿಸಿ” ಎಂದು ಕರೆ ನೀಡಿದರು.

ಈPಂI ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಈ ದಿನವು ‘ಲೇಡಿ ವಿತ್ ದ ಲ್ಯಾಂಪ್’ ಎಂದೇ ಖ್ಯಾತರಾದ ಫ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮದಿನದ ಅಂಗವಾಗಿ ಇಂದು ” ಅಂತರಾಷ್ಟ್ರೀಯ ಶುಶ್ರೂಕಿಯರ ದಿನ” ಆಚರಿಸಲಾಗುತ್ತದೆ. ನರ್ಸ್‍ಗಳು ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಅವರು ರೋಗಿಗಳೊಂದಿಗೆ ಸಹಾನೂಭೂತಿಯಿಂದ ವರ್ತಿಸಿ, ಧೈಂiÀರ್i ತುಂಬಿ, ಗುಣಮುಖರಾಗಲು ಪ್ರೇರಣೆ ನೀಡುತ್ತಾರೆ. ಅಂತಹ ಒಳ್ಳೆಯ ಆರೋಗ್ಯ ಸೇವೆ ನೀಡುವುದಕೋಸ್ಕರ ತಾವು ಕೂಡ ಈ ನರ್ಸಿಂಗ್ ಕೋರ್ಸ ಆಯ್ಕೆ ಮಾಡಿಕೊಂಡಿರುವುದು ತುಂಬಾ ಒಳ್ಳೆಯ ಆಯ್ಕೆ ಎಂದು ಹೇಳಿ ಎಲ್ಲರಿಗೂ ಶುಭ ಕೋರಿದರು.

ದಿ ಮಿಲೇನಿಯಂ ಗ್ರೂಪ್ ಆಪ್ ಇನ್ಸ್ಟಿಟ್ಯೂಷನ್‍ನ – ಆದ ಡಾ. ವೃಷಾಲಿ ಕುಲಕರ್ಣಿ ಹಾಗೂ ಉಪ ಪ್ರಾಚಾರ್ಯರಾದ ಶ್ರೀಮತಿ ಸಂಧ್ಯರಾಣಿ ಇವರುಗಳು ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದರು.

ನರ್ಸಿಂಗ್ ಕಾಲೇಜಿನ ಉಪನ್ಯಾಸರಾದ ಶ್ರೀಮತಿ ಶಾಂತಮ್ಮ ಇವರು ನಿರೂಪಣೆ ಮಾಡಿದರು ಹಾಘೂ ಈPಂI ಸಂಸ್ಥೆಯ ಕಾರ್ಯಕ್ರಮ ಅದಿಕಾರಿಗಳಾದ ವಿಜಯ¯ಕ್ಷ್ಮಿ ಹುಡುಗೆ ಇವರು ವಂದಿಸಿದರು.

ಈ ಕಾರ್ಯಕ್ರಮದಲ್ಲಿÀ ನರ್ಸಿಂಗ್ ಕಾಲೇಜಿ£ 50 ಕ್ಕೂ ಅಧಿಕ ಜನ ವಿದ್ಯಾರ್ಥಿಗಳು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.