
ನವದೆಹಲಿ.ಜ.೯- ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸ್ಪೀಪರ್ ಬಸ್‌ಗಳಲ್ಲಿ ಪದೇ ಪದೇ ಬೆಂಕಿ ಅವಘಢ ಸಂಭವಿಸುತ್ತಿದ್ದು ಇದರಿಂದ ಪ್ರಯಾಣಿಕರು ಸಾವನ್ನಪ್ಪುತ್ತಿರುವ ಘಟನೆ ಬಗ್ಗೆ ತೀವ್ರ ಎಚ್ಚರಿಕೆ ವಹಿಸಿರುವ ಕೇಂದ್ರ ಸರ್ಕಾರ, ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸಿದೆ.
ಸರ್ಕಾರಿ ಮಾನ್ಯತೆ ಪಡೆದ ತಯಾರಕರು ಮಾತ್ರ ಬಸ್‌ಗಳ ಕವಗಳನ್ನು ನಿರ್ಮಿಸಬಹುದು ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಬಸ್‌ಗಳನ್ನು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಮರುಹೊಂದಿಸಬೇಕು ಎಂದು ಎಲ್ಲಾ ಖಾಸಗಿ ಬಸ್ ಮಾಲೀಕರಿಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ
ಕಳೆದ ಆರು ತಿಂಗಳಲ್ಲಿ ೧೪೫ ಜೀವಗಳನ್ನು ಬಲಿ ಪಡೆದ ಮಾರಕ ಬೆಂಕಿ ಅಪಘಾತಗಳ ಸರಣಿಯ ನಂತರ ಕೇಂದ್ರ ಸರ್ಕಾರ ಸ್ಲೀಪರ್ ಕೋಚ್ ಬಸ್‌ಗಳಿಗೆ ಸುರಕ್ಷತಾ ಮಾನದಂಡಗಳನ್ನು ಬಿಗಿಗೊಳಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಸ್ಲೀಪರ್ ಬಸ್‌ಗಳನ್ನು ಈಗ ಆಟೋಮೊಬೈಲ್ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ತಯಾರಕರು ಮಾತ್ರ ನಿರ್ಮಿಸಲು ಅವಕಾಶ ಮಾಡಿಕೊಡಲಾಗಿದೆ. ಹೊಸ ಚೌಕಟ್ಟಿನ ಅಡಿಯಲ್ಲಿ, ಸ್ಥಳೀಯ ಮತ್ತು ಹಸ್ತಚಾಲಿತ ಬಾಡಿ ಬಿಲ್ಡರ್‌ಗಳು ಇನ್ನು ಮುಂದೆ ಸ್ಲೀಪರ್ ಬಸ್‌ಗಳನ್ನು ನಿರ್ಮಿಸಲು ಅನುಮತಿಸವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ
ಅಸ್ತಿತ್ವದಲ್ಲಿರುವ ಎಲ್ಲಾ ಸ್ಲೀಪರ್ ಬಸ್‌ಗಳನ್ನು ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಮರುಹೊಂದಿಸಬೇಕು ಇವುಗಳಲ್ಲಿ ಅಗ್ನಿಶಾಮಕ ಪತ್ತೆ ವ್ಯವಸ್ಥೆಗಳು, ತುರ್ತು ಬೆಳಕು, ಚಾಲಕ ಅರೆನಿದ್ರಾವಸ್ಥೆ ಎಚ್ಚರಿಕೆ ವ್ಯವಸ್ಥೆಗಳು ತುರ್ತು ನಿರ್ಗಮನಗಳು ಮತ್ತು ಸುರಕ್ಷತಾ ಸುತ್ತಿಗೆಗಳನ್ನು ಬಸ್‌ಗಳಲ್ಲಿ ಅಳವಡಿಸುವುದು ಕಡ್ಡಾಯ ಎಂದು ತಿಳಿಸಿದ್ದಾರೆ
ಇತ್ತೀಚಿನ ಬೆಂಕಿಯ ಘಟನೆಗಳ ತನಿಖೆಗಳು ಅನೇಕ ಸ್ಲೀಪರ್ ಕೋಚ್‌ಗಳಲ್ಲಿ ಗಂಭೀರ ಸುರಕ್ಷತಾ ದೋಷಗಳನ್ನು ಬಹಿರಂಗಪಡಿಸಿವೆ ಎಂದು ಹೇಳಿದ ಅವರು ಇವುಗಳಲ್ಲಿ ಸುಡುವ ಒಳಾಂಗಣ ವಸ್ತುಗಳು, ಮುಚ್ಚಿದ ನಿರ್ಗಮನಗಳು, ಕಾಣೆಯಾದ ತುರ್ತು ಕಿಟಕಿಗಳು ಮತ್ತು ಮೂಲಭೂತ ಅಗ್ನಿ ಸುರಕ್ಷತಾ ಕ್ರಮಗಳು ಇಲ್ಲದಿರುವುದೇ ಬಸ್‌ಗಳು ಪದೇ ಪದೇ ಬೆಂಕಿಗೆ ಆಹುತಿಯಾಗುತ್ತಿದ್ದು ಪ್ರಯಾಣಿಕರ ಸಾವಿಗೆ ಕಾರಣ ಎನ್ನುವ ಸಂಗತಿ ಬಯಲಾಗಿದೆ ಎಂದಿದ್ದಾರೆ
ಹೊಸ ಮಾನದಂಡಗಳ ಪ್ರಕಾರ, ಎಲ್ಲಾ ಸ್ಲೀಪರ್ ಬಸ್‌ಗಳು ಆಟೋಮೋಟಿವ್ ಇಂಡಸ್ಟ್ರಿ ಸ್ಟ್ಯಾಂಡರ್ಡ್-ಎಎಸ್‌ಐ-೦೫೨ ಬಸ್ ಬಾಡಿ ಕೋಡ್ ಮತ್ತು ಸೆಪ್ಟೆಂಬರ್ ೧, ೨೦೨೫ ರಂದು ಜಾರಿಗೆ ಬಂದ ಪರಿಷ್ಕೃತ ಬಸ್ ಬಾಡಿ ಕೋಡ್ ಅನುಸರಿಸಬೇಕು ಎಂದಿದ್ದಾರೆ
ಬಸ್ ಕವಚಗಳು ಭಾರತದ ಅಧಿಕೃತ ಸುರಕ್ಷತೆ ಮತ್ತು ವಿನ್ಯಾಸ ಕೋಡ್ ಆಗಿದೆ. ಬಸ್ ಅನ್ನು ನೋಂದಾಯಿಸುವ ಮತ್ತು ರಸ್ತೆಗಳಲ್ಲಿ ನಿರ್ವಹಿಸುವ ಮೊದಲು ಪ್ರತಿಯೊಂದು ಬಸ್ ಬಾಡಿ ಕಾರ್ಖಾನೆ ನಿರ್ಮಿತ ಅಥವಾ ಕೋಚ್ ನಿರ್ಮಿತ ಅನುಸರಿಸಬೇಕಾದ ಕಡ್ಡಾಯ ನಿರ್ಮಾಣ, ಸುರಕ್ಷತೆ ಮತ್ತು ರಚನಾತ್ಮಕ ಮಾನದಂಡಗಳನ್ನು ಇದು ನಿಗದಿಪಡಿಸುತ್ತದೆ ತಿಳಿಸಿದ್ದಾರೆ
ಈ ಮಾನದಂಡವನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮಗಳ ಅಡಿಯಲ್ಲಿ ಹೊರಡಿಸಲಾಗಿದೆ.ಭವಿಷ್ಯದ ದುರಂತಗಳನ್ನು ತಡೆಗಟ್ಟುವ ಮತ್ತು ದೀರ್ಘ-ದೂರ ಸ್ಲೀಪರ್ ಕೋಚ್ ಸೇವೆಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸುವ ಗುರಿಯನ್ನು ಈ ಕ್ರಮಗಳು ಅನುಸರಿಸುವುದು ಕಡ್ಡಾಯ ಎಂದಿದ್ದಾರ
- ದೇಶದ ಹಲವು ಭಾಗಳಲ್ಲಿ ಸ್ಲೀಪರ್ ಬಸ್‌ಗಳ ಪದೇ ಪದೇ ಬೆಂಕಿಗೆ ಆಹುತಿ
- ನೂರಾರು ಪ್ರಯಾಣಿಕರ ಸಾವು ಹಿನ್ನೆಲೆ, ಕೇಂದ್ರ ಸರ್ಕಾರದಿಂದ ಗಂಭೀರ ಪರಿಗಣನೆ
- ಖಾಸಗಿ ಬಸ್ ಮಾಲೀಕರು ಸುರಕ್ಷಿತ ಮಾನದಂಡ ಅನುಸರಿಸುವುದು ಕಡ್ಡಾಯ
- ಇಲ್ಲದಿದ್ದರೆ ಅಂತಹ ಬಸ್‌ಗಳ ಸಂಚಾರಕ್ಕೆ ಅನುಮತಿ ನಿರಾಕರಣೆ
- ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಣೆ
- ಸುಧಾರಿತ ಮಾನದಂಡ ಪಾಲಿಸಲು ಕಟ್ಟುನಿಟ್ಟಿನ ಸೂಚನೆ




























