ಕ್ಯಾಲೆಂಡರ್ ಬಿಡುಗಡೆ, ವಿವಿಧ ಕ್ಷೇತ್ರದ ಸಾಧಕರ ಸನ್ಮಾನ ನಾಳೆ

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದ ವತಿಯಿಂದ 2026 ನೇ ಸಾಲಿನಲ್ಲಿ ಕ್ಯಾಲೆಂಡರ್ ಬಿಡುಗಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನಾಳೆ ( ಜ. 11) ಸಂಜೆ 5.30ಕ್ಕೆ ನಗರದ ಕನ್ನಡ ಭವನದಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಸೈಯದ್ ನಜೀರುದ್ದೀನ ಮುತ್ತವಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಬಸವರಾಜ ದೇಶಮುಖ, ಕಸಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಪಿ.ಡಬ್ಲೂ.ಡಿ. ಇಲಾಖೆಯ ಎಸ್‍ಇ ಅಮೀನ ಮುಕ್ತಾರ ಅಹ್ಮದ, ಗೌರವ ಅತಿಥಿಗಳಾಗಿ ಹಿರಿಯ ಕಾಂಗ್ರೇಸ್ ಮುಖಂಡ ವಾಹಜ್ ಬಾಬಾ, ಸೋಸಿಯಲ್ ಎಕ್ಟಿವಿಟ್ಸ್ ಹಜರತ್ ಸೈಯದ ಷಾ ಮುಸ್ತಫಾ ಖಾದರಿ, ಸಜ್ಜಾದೆ ನಷೀನ್ ಮುತ್ತವಲ್ಲಿ, ರೋಜಾ ಎ, ರಹೆಮಾನಿಯಾ ಮಳಖೇಡ್, ಭಾಯಿ ದೀಪಸಿಂಗ, ಗ್ರಂಥಿ ಗುರುದ್ವಾರ್ ಕಲಬುರಗಿ, ಮಹೇಶ ಸಿ. ಹುಬ್ಬಳಿ ಆಗಮಿಸುವರು.ಅತಿಥಿಗಳಾಗಿ, ಅಸದ್ ಅನ್ಸಾರಿ, ಡಾ. ಎಮ್.ಎಮ್. ಬೇಗ್, ಡಾ. ಅಸ್ಲಂ ಸಯಿದ, ಮೊಹ್ಮದ ಅಜಿಮುದ್ದೀನ, ಶಿರನಿ ಫರೋಷ ಆಗಮಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸೈಯದ್ ನಜೀರುದ್ದೀನ ಮುತ್ತವಲ್ಲಿ ಅವರು ವಹಿಸುವರು
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಸೈಯದ ಶಾಹಾ ಹಸನ್ ಖಾದರಿ ಮತ್ತು ನಜೀದ ಬಾಬಾ, ಡಾ. ರೇವಣಸಿದ್ದ ಶಿವಾಚಾರ್ಯರು, ಐ. ಆರ್. ಸ್ಟ್ಯಾನಿ ಲೊಬೊ, ಶಂಕರ ಕೋಡ್ಲಾ, ಡಾ. ಖಾಜಿ ಹಮಿದ ಫೈಸಲ್ ಸಿದ್ದಿಕಿ, ಡಾ. ದೇವೆಂದ್ರಪ್ಪ ಚಿಂಚೋಳಿ, ಗುರಮಿಟ್ ಸಿಂಗ್ ಸಲುಜಾ, ಸಂಜಯಕುಮಾರ ಮಾಕಲ, ವೈeನಾಥ ಝಳಕಿ ವಕೀಲರು, ಅದ್ನಾನ ವಜೀರ್, ಮೊದಿನ ಪಟೇಲ್ ಅಣಬಿ, ಚಂದ್ರಶೇಖರ ಬಿರಾದಾರ ರಾಜ್ಯಮಟ್ಟದ ವಿಜ್ಞಾನ ಪ್ರದರ್ಶನದಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಜೇವರ್ಗಿ ಪಟ್ಟಣದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮುಸ್ಕಾನ, ಸೈಯದಾ ಜೋಯಾ, ಸಾದೀಖಾ, ಪ್ರಿಯಾಂಕಾ, ಅಬ್ದುಲ ಅಜೀಜ್, ಹಾಗೂ ಹಸನೈನ ಮತ್ತು ಅವರ ಗೈಡ್ ಹಾಗೂ ಮಾರ್ಗದರ್ಶಕರಾದ ಮೊಹ್ಮದ ಐತೆಶಾಮ್ ಉಲ್ ಹಸನ್ ಅವರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.