
ವಿಜಯಪುರ, ಜ. 10:ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಹಾಗೂ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.
ರಾಜ್ಯದ 30 ಜಿಲ್ಲೆಗಳ 40 ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಹಾಗೂ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪ್ರಶಸ್ತಿಯು ನಗದು 50,000 ಹಾಗೂ ಫಲಕ ಹೊಂದಿದೆ. ಇದಲ್ಲದೇ ಶ್ರೀಮತಿ ಸರಿತಾ ರೈ ಅವರಿಗೆ 2025ನೇ ಸಾಲಿನ ವಿಶೇಷ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿ ನಗದು ಒಂದು ಲಕ್ಷ ರೂಪಾಯಿ ಹಾಗೂ ಫಲಕ ಹೊಂದಿದೆ.
ವಿಜಯಪುರ ಜಿಲ್ಲೆಯ ಸಂಜೆವಾಣಿ ವರದಿಗಾರ ಮತ್ತು ಹಿರಿಯ ಪತ್ರಕರ್ತ ರುದ್ರಪ್ಪ ಆಸಂಗಿ ಅವರು ಪ್ರಸಕ್ತ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಅಕಾಡೆಮಿ ಸಭೆಯಲ್ಲಿ ಅರ್ಹ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ನಂತರ ಪ್ರಕಟಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.























